ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜೈ ತಿರುಪತಿ ವೆಂಕಟರಮಣ ಕಿಂಕರಜನ ಮಹ ಸಂಕಟಹರ ಜೈ ಪ ಶಂಖಚಕ್ರಧರ ಮಂಕುದಾನವಹರ ಪಂಕಜಪಾಣಿಯಕಳಂಕ ಮಹಿಮ ಜೈ 1 ಸೃಷ್ಟಿಮೇಲೆ ಪ್ರತಿಷ್ಠನಾಗಿ ಮಹ ಬೆಟ್ಟವ ಭೂವೈಕುಂಠವೆನಿಸಿದಿ ಜೈ 2 ತಪ್ಪದೆ ಭಕುತರಿಂ ಕಪ್ಪಗೊಳ್ಳುತ ನೀ ಅಪ್ಪಿಕೊಂಡಿರಿವೀ ಅಪ್ಪ ತಿಮ್ಮಪ್ಪ ಜೈ 3 ಕೋಟಿ ಕೋಟಿ ಮಹತ್ವ ಸಾಟಿಗಾಣದೆ ತೋರಿ ಆಟವಾಡುವಿ ಜಗನಾಟಗಾರನೆ ಜೈ 4 ಕಪ್ಪು ವರ್ಣದಿಂದೊಪ್ಪುವಿ ಸಿರಿಯಿಂ ದಪ್ಪಿಕೋ ದಯದೆನ್ನಪ್ಪ ಮುರಾರಿ ಜೈ 5 ಬೇಡಿದ ವರಗಳ ನೀಡಿದೆ ದಯದಿ ಹರಿ ಗಾಢಮಹಿಮೆ ಇಹ್ಯನಾಡಿಗರುಹಿದಿ ಜೈ 6 ಕೋರಿದವರ ಮನಸಾರ ವರವನೀಡಿ ಧಾರುಣಿಯಾಳಿದ್ಯಪಾರ ಮಹಿಮ ಜೈ 7 ಲಕ್ಷ್ಮೀಸಮೇತನಾಗಿ ಲಕ್ಷ್ಯದಿಂ ಮೂಲೋಕ ಕುಕ್ಷಿಯೋಳ್ ಧರಿಸಿ ನೀ ರಕ್ಷಿಸಿದೆ ಜೈ 8 ಭಕ್ತವತ್ಸಲ ನಿನ್ನ ಭಕ್ತನೆನಿಸಿ ಎನಗೆ ಕರ್ತು ಶ್ರೀರಾಮ ಜೈ 9
--------------
ರಾಮದಾಸರು