ಒಟ್ಟು 6 ಕಡೆಗಳಲ್ಲಿ , 4 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇವಾ ನಿನ್ನ ಚರಣವನ್ನು ಮರೆಯಲಾರೆನು ಮರೆಯದಂತೆ ಕರುಣದಿ ಎನ್ನಾ ಸ್ಮರಣೆಯೊಳಿಡು ನೀನು ಪ ಪಂಕಜಾಂಬಕಿ ಲಕ್ಞ್ಮೀರಮಣಾ ರಂಗರಕ್ಷಕಾ ಶಂಕಾನಾಶ ಸರ್ವಾಧಾರ ಶಂಕರಸಖಾ ಶಂಖ ಚಕ್ರಗಳ ಕರದೊಳ್ ಪಿಡಿದ ಪಂಕಜನೇತ್ರನೇ 1 ತನ್ನವರಿಂತೆಂದೆನಿಸಿ ಕೊಂಡು ಅನ್ಯರ ಭಜಿಪುದು ಬನ್ನ ಬಡುವುದು ಮುನ್ನ ಎನ್ನನು ಪೊರೆವರ್ಯಾರೊ ಪನ್ನಗಶಯನನೇ 2 ಅಂತು ಇಂತೆನಲೊಲ್ಲೆ ದೇವಾ ಅನಂತ ಮಹಿಮೆಯಾ ಸಂತಸಾಧು ಸಾಧ್ಯನಾಗಿಹ ಅಂತರಾತ್ಮನಾ ಚಿಂತೆ ಭ್ರಾಂತಿಗಳ ತೊರೆದು ಗುರುವರ ಶಾಂತಿ ಪಾಲಿಪನೇ 3
--------------
ಶಾಂತಿಬಾಯಿ
ಪಾರಾಯಣ ಮಾಡಿರೋ ಭವ ಪಾರಾವಾರದೊಳುತ್ತಾರಕವಿದು ನೋಡಿರೋಪ ಶರೀರನೆಚ್ಚಿರಬೇಡಿರೋ ಸಾರುವ ಮೃತ್ಯುವ ದಾರಿಗೆ ಗೋಚರ ಧಾರಿಣಿಯಲಿ ಪೇಳಿರೋ1 ಸಾಹಸ ಪಡಬೆಡಿರೋ ದೇಹಗೇಹಂಗಳನೂಹಿಸಿ ಸಂಗಡ ಬಾಹವೆಂದಿರ ಬೇಡಿರೊ2 ದೇಹರಕ್ಷಣೆಗೆಂದು ಗೇಹವನಿರ್ಮಿಸಿ ನೇಹದಿ ನಾರಿಯೊಳು ಗೇಹಿನಿಯೆಂದತಿ ಮೋಹದಿ ಕೆಡುವನು ದೇಹಿಸಂಸಾರದೊಳು3 ಮಾರಿಯಲ್ಲವೆ ಕೇಳಿರೋ ನಾರಿಯಾರಿಗೆ ಮಕ್ಕಳಾರಿಗೆ ಜೀವಿತದಾರಿಯೆಲ್ಲಿಗೆ ಪೇಳಿರೋ4 ಬಾರಳು ಕಂಚುಕನ್ನಡಿಬಾರದೀ ಸಂಚಿತ ದ್ರವ್ಯದಿ ಕೊಂಚವು ಬಾರದು ವಿಸಂಚಿಗೆ ದೇಹವಿದು5 ಹಲವು ಸಾಹಸದಿಂದ ಘಳಿಸಿದರ್ಥಗಳೆಲ್ಲ ಬಳಸಿನ ಬಾಂಧವರು ಒಲಿದುಕೊಂಡಾಡುವರು6 ಅರ್ಥವಿದ್ದವನ ಸಮರ್ಥನೀತನ ಜನ್ಮಸಾರ್ಥಕವೆಂಬುವರು ಜನ್ಮವ್ಯರ್ಥವೆಂದುಸುರುವರು 7 ರೊಕ್ಕವಿದ್ದರೆ ಕೈಲಿ ಸಕ್ಕರೆ ಮಾತಿನೊಳಕ್ಕರೆ ಪಡಿಸುವರು ರೊಕ್ಕವಿಲ್ಲದವನ ಮಕ್ಕಳು ಮಡದಿಯರು ಲೆಕ್ಕಿಸದಿರುತಿಹರು 8 ಮರಣವ ಪೊಂದುವರು ಮರಳು ಜಗಳಕೆ ತರಳರು ಚಾಚುತೆ ಕೊರಳನು ಕೊಯ್ಯುವರೋ 9 ಬಂಧುಗಳನ್ನು ಕೊಲ್ವರು ಒಂದಿಗೆ ಜನಿಸಿದರೆಂದು ನೋಡರುನಿಜ ದಂದುಗಕ್ಕೊಳಗಹರು10 ನಂಟರು ನಮಗಿವರುಂಟೆಂದು ಮೋಹದ ಗಂಟುಕಟ್ಟಿರೆ ಮನದಿ ಕಂಟಕ ಯಮಬಂದು ಗಂಟಲಬಿಗಿವಾಗ ನಂಟರಿಲ್ಲವು ಜಗದಿ11 ಅಪತ್ತುಬಂದಾಗ ಪಾಪಿಯು ಮನದನು ತಾಪದಿ ನೆನೆಯುತಿರೆ ಕಾಪಾಡುವನಾಗ ಶ್ರೀಪತಿ ಪುಲಿಗಿರಿ ಭೂಪನು ನಮ್ಮದೊರೆ12 ನೊಂದ ಗಜೇಂದ್ರನ ಕಂದ ಪ್ರಹ್ಲಾದನ ಬಂದವಿಭೀಷಣನ ಚಂದಿರಮುಖಿ ನೃಪನಂದನ ಧ್ರುವರನು ಚಂದದಿ ಸಲಹಿದನ 13 ಅಜಮಿಳಗೊಲಿದನ ಕುಜನರ ತರಿದನ ಸುಜನರನಾಳಿದನ ಭಜಕರದಾತನ ತ್ರಿಜಗಕ್ಕೆ ನಾಥನ ವಿಜಯನ ರಥಸೂತನ14 ಅಂಗಜಜನಕನ ಮಂಗಳ ಮಹಿಮನ ಗಂಗೆಯ ಪಡೆದವನ ರಂಗನ ಸುಗುಣ ತರಂಗನ ಶಂಖರಥಾಂಗವ ಪಿಡಿದಿಹಿನ15 ಖ್ಯಾತ ಪಾದಾಂಬುಜನ ವಾತನ ಮಗನೊಳು ಪ್ರೀತಿಯ ಬೆಳಸಿದ ಸೇತು ವಿಧಾತನ16 ರಾಮನ ಜಗದಭಿ ರಾಮನ ದೈತ್ಯವಿರಾಮನ ಭಜಕಜನಾ ರಾಮನ ದಶರಥರಾಮನ ಸೀತಾರಾಮನ ಗುಣಧಾಮನ17 ಪಂಕಜನೇತ್ರನ ಪರಮ ಪವಿತ್ರನ ಶಂಕರನುತಿಪಾತ್ರನ ವೆಂಕಟರಮಣನ ಕಿಂಕರ ಶರಣನ ಸಂಕಟ ಹರನಾಮನ18 ವರದ ವಿಠಲ ದೇವನ ಪೊರೆಯುವದಾನರನ 19
--------------
ಸರಗೂರು ವೆಂಕಟವರದಾರ್ಯರು
ಭಕುತರ್ಗೆ ಭಯಬಾರದು ಸುಖವೀವ ಕಾವದೇವನಕಾಕುಜನರಿಂದ ಬಂದಾನೇಕ ಶೋಕಂಗಳ ಕಳೆವÀಶ್ರೀರಂಗನ ದೇವೋತ್ತುಂಗನ ಭವಭಂಗನ ಪ. ಹಿರಣ್ಯಕನುದರ ವಿದಾರಣನ ಸ್ವಚರಣಕರಣ ಪ್ರಹ್ಲಾದನ ಭಯನಿವಾರಣನಕರಿವರ ಕರೆಯೆ ಮಕರಿಯ ಸೀಳಿದ ಸಿರಿಯನಾಳಿದಪಿರಿಯ ಶ್ರೀಹರಿಯ ಧೂರ್ತಾರಿಯ ಬಕವೈರಿಯ 1 ಯತಿಕುಲಪತಿಯ ಮಧ್ವಾಚಾರ್ಯರಕೃತಿಯಾಶ್ವರ್ಯ ಚಾತುರ್ಯಕೊಲಿದನಸತಿ ಸಭೆಯಲ್ಲಿ ಸಿರಿಪತಿ ನೀನೆ ಗತಿಯೆನೆಅತಿ ದೂರದಿಂದಕ್ಷಯವೆಂದ ಗೋವಿಂದನ ಮುಕುಂದನ2 ಕುಂಡಲ ಕೌಸ್ತುಭ ನೂಪುರ ಮೊದಲಾದ-ಲಂಕೃತಿಯಿಂದೊಪ್ಪುವ ನೀಲಗಾತ್ರನಪಂಕಜನೇತ್ರನ ಪರಮಪವಿತ್ರನ ಸುಚರಿತ್ರನ ಸುರಮಿತ್ರನ 3 ಗುರುವೆಂದರಿವ ಹರಿಯೆಂದು ಕರೆವ ತ-ಮ್ಮಿರವ ಮರೆವ ಸದ್ಗುಣ ವಿಸ್ತಾರವ-ನ್ನೊರೆವ ನಯನದಿ ಸುರಿವ ಪರಿವ ಸುಖಾಂಬುಧಿಕರೆವ ತೋರುವ ಖಳನಿರವ ಮುಕ್ತಿಗೆ ಕೂರುವ 4 ಹರಿಯನೆ ಪಾಡುವ ಹರಿಯ ಕೊಂಡಾಡುವಹರಿಯ ನೋಡುವ ಹರಿಯನೆ ಬೇಡುವದುರುಳರ ಕಾಡುವ ತಪದಿಂ ಬಾಡುವದುರಿತವ ಬಿಡುವ ಸುಕೃತವನೆ ಕೊಡುವ ಪಾಡಪಾಡುವ ನಲಿದಾಡುವ 5 ಹರಿಯನೆ ಸ್ಮರಿಸುವ ಹರಿಯನನುಸರಿಸುವಹರಿಯನೆ ಪರಿಹರಿಸುವ ಹರಿಯನೆಬೆರಿಸುವಹರಿಯನೆ ತೋರಿಸುವ ಹರಿಯನೆ ಮರೆಸುವಹರಿಪಾದಕೇರಿಸುವ ಸುಖರಸವ ಎರೆಸುವ 6 ಒಂದು ಕೈಯಲಿ ಕಡೆಗೋಲನೆ ಪಿಡಿದು ಮ-ತ್ತೊಂದು ಕೈಯಲಿ ನೇಣನಾಂತ ಶ್ರೀಕಾಂತನಮುಂದೆ ನಿಂದು ಒಲಿವುತ್ತ ನಲಿವುತ್ತತಂದೆ ಹಯವದನನರ್ಚಿಸುವ ಮೆಚ್ಚಿಸುವ ಹೆಚ್ಚಿಸುವ 7
--------------
ವಾದಿರಾಜ
ಭಜನೆಯ ಮಾಡಬಾರದೆ ಭಕ್ತ ಮೀರದೆ ಪ ಭುಜಗಶಯನ ಗೋದ್ವಿಜ ಕುಲದೇವನ ಅ.ಪ ಅಜಭವಮುಖ ಸುರವ್ರಜ ವಂದ್ಯನಪದ ಭಜಕ ಸುಜನರಿಗೆ ನಿಜಸುಖದಾತನ 1 ಪಂಕಜನೇತ್ರನ ಪರಮಪವಿತ್ರನ ಶಂಕರನುತ ನಿಷ್ಕಂಲಕನ2 ಚರಣವ ನಂಬಿದ ಶರಣರ ಪೊರೆಯುವ ವರದವಿಠಲ ದೊರೆ ವರದನ 3
--------------
ವೆಂಕಟವರದಾರ್ಯರು
ಭಜನೆಯ ಮಾಡಬಾರದೆ-ಭಕ್ತಿಮೀರದೆ ಪ ಭುಜಗಶಯನ ಗೋದ್ವಿಜಕುಲದೇವನ ಅ.ಪ. ಅಜಭವ ಮುಖಸುರ ವ್ರಜವಂದ್ಯನಪದ ಭಜಕ ಸುಜನರಿಗೆ ನಿಜಸುಖದಾತನ1 ಪಂಕಜನೇತ್ರನ ಪರಮ ಪವಿತ್ರನ ಶಂಕರನುತ ನಿಷ್ಕಲಂಕನ2 ಚರಣವ ನಂಬಿದ ಶರಣರ ಪೊರೆಯುವ ವರದ ವಿಟಲ ಧೊರೆ ವರದನ 3
--------------
ಸರಗೂರು ವೆಂಕಟವರದಾರ್ಯರು
ವರದವಿಠಲ ದೇವನ ಪೊರೆಯವುದಾನರನ ಪ ಬಂದ ವಿಭೀಷಣನ ಚಂದದಿ ಸಲಹಿದನು 1 ಅಜಮಿಳಗೊಲಿದನ ಕುಜನರ ತರಿದನ ಸುಜನರನಾಳಿದನ ವಿಜಯನ ರಥಸೂತನ 2 ಗಂಗೆಯ ಪಡೆದವನ ರಥಾಂಗವ ಪಿಡಿದವನ 3 ಖ್ಯಾತ ಪಾದಾಂಬುಜನ ಸೇತುವಿಧಾತನ 4 ರಾಮನ ಜಗದಭಿರಾಮನ ದೈತ್ಯ ವಿ ರಾಮನ ಭಜಕನಾ ರಾಮನ ದಶರಥ ರಾಮನ ಸೀತಾ ರಾಮನ ಗುಣಧಾಮನ 5 ಪಂಕಜನೇತ್ರನ ಪರಮ ಪವಿತ್ರನ ಶಂಕರ ನುತಿ ಪಾತ್ರನ ವೆಂಕಟರಮಣನ ಕಿಂಕರ ಶರಣನ ಸಂಕಟಹರ ನಾಮನ6
--------------
ವೆಂಕಟವರದಾರ್ಯರು