ಅ. ಗಣೇಶಸ್ತುತಿ
ವಂದಿಪೆ ಗಜಮುಖನೆ ನಿನ್ನನು ಚಂದ್ರಶೇಖರ ಸುತನೆನಂದಬಾಲನ ಸ್ಮರಣೆ ಮನದೊಳು ತಂದು ನಿಲಿಸು ಇದನೆ ಪ
ಮಂಗಳ ಮೂರುತಿಯೆ ಕೊಡುವೆನು ತೆಂಗು ಬಾಳೆಯ ಗೊನೆಯರಂಗನಮಲ ಕಥೆಯ ಮಾಡುವೆ ಸಂಗ ತೋರಿಸು ದೊರೆಯೆ 1
ಪಾಶಾಂಕುಶಧರನೆ ಸುಂದರ ಮೂಷಕವಾಹನನೆಪೋಷಿಸು ಭಕ್ತರನೆ ಹರಿಕಥೆ ಭಾಷೆಲಿ ನುಡಿಸುವನೆ 2
ಪಾರ್ವತಿ ಪಂಕಜನೆ ವಿಘ್ನಗಳ್ಹಾರಿಸಿ ಪಾಲಿಪನೆಮಾರಜನಕ ಭಜನೆ ಮಾಡುವೆ ತೋರಿಸು ಮಾರ್ಗವನೆ 3
ಭಾರತ ಬರೆದವನೆ ವ್ಯಾಸರ ಭಾಷಿತದಿಳೆದವನೆಮಾರಜನಕ ಭಜನೆ ಮಾಡುವೆ ತೋರಿಸು ಮಾರ್ಗವನೆ 4
ಇಂದಿರೇಶನ ಭಜಕ ನಿನ್ನನು ತಂದು ಮನದಿ ತೂಕ ಆನಂದದಿ ದಿನ ವಾರಾ ಮಾಳ್ಪುದು ಸುಂದರ ಸುರಲೋಕ 5