ನಾನೇನಂದನೆ ಭಾವಕಿ ಒಳ್ಳೆಆನಂದಮಯ ಹರಿಹರ ಮುನಿದಿತ್ತಬಾರ ಪ
ರಮಣಿ ಕುಚ ಕುಂಕುಮಾಂಕಿತ ವಕ್ಷವಾರಿಧಿಶಯನ ಶ್ರೀವಾಸವಾರ್ಚಿತನಾರದನುತ ಪಂಕಜದೈತ್ಯ ಸಂ-ಹಾರ ಶ್ರೀ ಹರಿಹರನೆಂದೆನಲ್ಲದೆಮಾರಮರ್ಧನನೆಂದೆನೆ ಮೆರೆವ ಸರ್ಪಹಾರ ಕುಂಡಲನೆಂದೆನೆ ಶೋಭಿಸುವ ವೈಯ್ಯಾರ ವಿಭೂಷಣ ಶಂಕರನೆಂದೆನಲ್ಲದೆ 1
ಮಡದಿಯೋರ್ವಳ ನುಡಿ ಕಳ್ಳನೆಂದೆನಲ್ಲದೆ ಮಿಗೆಜಡೆದಲೆಯವನೆಂದನೆ ಪುಲಿದೊಗಲದೃಢದಿ ಹೊದ್ದಿಹನೆಂದೆನೆ ತ್ರೈಲೋಕ್ಯದೊಡೆಯ ಮುರಾರಿ ಮಹದೇವನೆಂದೆನಲ್ಲದೆಧರೆಯನಳೆದು ಕ್ಷತ್ರಿಯರ ಕೊಂದು ಶರಧಿಯನಿರದೆ ಕಟ್ಟಿದ ಕೃಷ್ಣ ಬಹುರೂಪವರಕವಿಗುರುವ ಕರದಿ ಪಿಡಿದು ರಕ್ಷಿಪಬಿರುದಿನ ರಾಯ ರಾವುತನೆಂದೆನಲ್ಲದೆ2
ಗಿರಿಜಾರಮಣನೆಂದೆನೆ ಗುಹಾರಣ್ಯವಾಸಎರಡು ರೂಪದಲಿರುವ ಮೂರುತಿಯೆಂದೆ ನಾ ನಂಬಿದ-ವರಪೊರೆವ ಶ್ರೀಹರಿಹರಲಿಂಗನೆಂದನಲ್ಲದೆ3