ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯೇಕೋದೇವ ಶ್ರೀ ವೆಂಕಟನಾಯಕ ಯಾದವ ಕುಲ ತಿಲಕ ಸುಜನ ಮಂದಾರ ಅನೇಕದಿವ್ಯರೂಪ ಪ. ವನರುಹದಳಲೋಚನ ಮುನಿಸುತ ವೈಕುಂಠ ನಿವಾಸ ಕನಕಕೌಸ್ತುಭಮಣಿ ಭೂಷಾ ಕಂಬುಗದಾಬ್ಜದಳ ದಿನಕರ ಕೋಟಿ ಪ್ರಕಾಶ ದಯಾಂಬುಧಿ ದೀನಜನೋದ್ದಾರ ಬಿಡಿಸೊ ನೀ ಎನ್ನ 1 ರಮಣಿಯ ಪಂಕಜದಳನೇತ್ರಿಯ ವಿಮಲ ಕುಚಾಗ್ರದಿ ಸತಿಯನು ಹಿಂಸಿಸಿ ಅಮರವಂದಿತ ಶ್ರಿತಜನ ರಕ್ಷಕ ಸಮರವಿಕ್ರಮ ಸಕಲಾಗಮಸುತ್ತ್ಯಾ ಸಾಮಗಾನ ಲೋಲ 2 ಸನ್ನುತ ಶಾಶ್ವತ ಗುಣಭಾಸ ಪರಮ ಪುರುಷಹರಿವಾಕ್ಕುಠಾರ ಪುರಾಣ ಪುರುಷದೇವ ದುರಿತಭಂಜನ ದಶರಥ ಸುಕುಮಾರ ಧಾರುಣಿಧರರಾಮ ಕರಿದೇಹ ವಿಮೋಚನ ಹೆಳವನಕಟ್ಟೆ ವೆಂಕಟರಮಣ 3
--------------
ಹೆಳವನಕಟ್ಟೆ ಗಿರಿಯಮ್ಮ
ಲಕ್ಷ್ಮೀದೇವಿ 13 ಭಾಗ್ಯವ ಕೊಡು ತಾಯೆ ಪ ಭಾರ್ಗವಿ ನಿನ್ನಯ| ಪದಯುಗಕೆರಗುವೆ| ಭಾಗ್ಯದ ಲಕ್ಷ್ಮೀ ಸೌ| ಭಾಗ್ಯದ ನಿಧಿಯೇ ಅ. ಪ ಸಾಗರಸಂಜಾತೆ| ದೇವಿ| ನಾಗವರದಪ್ರೀತೆ || ಯೋಗಿಜನಾವಳಿ| ಮಾನಸಪೂಜಿತೆ | ಅಗಣಿತಗುಣಮಣಿ| ತ್ರಿಜಗದ್ವಂದಿತೆ 1 ಸುರುಚಿರಸುಮಗಾತ್ರೆ | ದೇವಿ| ಹಿಮಕರನಿಭವಕ್ತ್ರೆ || ಕಿನ್ನರ | ಸುರಮುನಿ ಪೂಜಿತೆ | ಕಾಮಿತವೀಯುವ || ಕರುಣಾಕರೆಯೆ 2 ಜನನಿಯೆ ನಿರತವು ನೀ | ಪ್ರೇಮವ | ನಿರಿಸುತಲೆನ್ನೊಳು ನೀ | ಕನಕದ ವೃಷ್ಟಿಯ | ಕರೆಯುತಲನುದಿನ | ಮನ್ಮನದಿಷ್ಟವು | ಸಿದ್ಧಿಸುವಂದದ 3 ಅಹಿಪತಿ ಶಯನನಿಗೆ | ಮೋಹದ | ಮಹಿಷಿಯು ನೀನಾಗೆ || ಮಹಿಮಾಕರೆ ನೀ | ಮಹಿಯೊಳಗನಿಶವು | ಇಹಪರ ಸುಖವನು | ಭವಿಸುವ ತೆರದಾ 4 ಅಜಭವಸುರವಿನುತೆ | ದೇವಿ | ಸುಜನಾವಳಿಪ್ರೀತೆ || ಗಜವಾಹಿನಿ ವರ | ಮದಗಜಗಮನೆಯೆ | ವಿಜಯವಿಠಲಪ್ರಿಯೆ ಶ್ರೀ ಗಜಲಕ್ಷ್ಮಿಯೆ 5 ಶುಭ | ಮಂಗಳೆ ಸುಪವಿತ್ರೆ || ಮಂಗಳಾಂಗಿ ನರ | ಸಿಂಗನ ರಮಣಿಯೆ | ಮಂಗಳಕಾರ್ಯಗ | ಳನುದಿನವೆಸಗುವ 6 ಪಂಕಜದಳನೇತ್ರೆ | ದೇವಿ | ಕಿಂಕರನುತಿಪಾತ್ರೆ || ಶಂಖಚಕ್ರಾಂಕಿತ | ಶ್ರೀ ವೈಕುಂಠನ |ಅಂಕದಿ ಮೆರೆವಖಿ | ಳಾಂಕ ಮಹಿಮಳೇ 7
--------------
ವೆಂಕಟ್‍ರಾವ್
ವೆಂಕಟರಮಣ ಶ್ರೀ ಲಕ್ಷ್ಮೀರಮಣ ಪಂಕಜದಳ ನೇತ್ರ ಮುಗುಳ್ನಗೆ ವದನ ಪ ಧರೆಯ ಈರಡಿಯ ಮಾಡಿದ ಚಾರುಚರಣ ದುರಿತ ಸಂಹರಣ 1 ಉಟ್ಟ ಪೊಂಬಟ್ಟೆ ಪೀತಾಂಬರಾವರಣ ಇಟ್ಟ ಶ್ರೀಗಂಧ ಕಸ್ತೂರಿಸಿರಿವದನ 2 ಅರಿಗದೆ ಶಂಖಾಬ್ಜವರ ಚತುರ್ಭುಜನ ಕೊರಳ ತುಳಸಿಯ ಮಾಲೆ ವನಮಾಲಾಭರಣ 3 ರತ್ನ ಕಿರೀಟಿ ವಿಚಿತ್ರದಾಭರಣ ಗು ಗಮನ ದುಷ್ಟ ಧೈತ್ಯ ಸಂಹರಣ 4 ದುರ್ಗ ಮೂಡಲ ಗಿರಿಯಲಿ ವಾಸವಿಹನ ಹೆಗ್ಗಾಳೆ ಮೌನಿ ವೆಂಕನ ಮೇಲೆ ಕರುಣ 5
--------------
ಕವಿ ಪರಮದೇವದಾಸರು
ವೆಂಕಟೇಶ ಜಗದೀಶ | ವೆಂಕಟೇಶ || ವೆಂಕಟೇಶ ಜಗದೀಶ ಸದರುಶನ | ಶಂಖಪಾಣಿ ಅಕಳಂಕ ಚರಿತಾ ಪ ನಭಾಸ್ಥಾನನರಸಿಜನಾಭ ಭಜಕರ ಸು | ಲಭಾ ವಸುಧಾ ಶ್ರೀ ದುರ್ಗಾವ | ಭೂಷಣನ ಪಾಲಿಸಿದ ಪಾವನಕಾಯ | ದಾಸರುಗಳ ಕಾಹುವ ಶೇಷಭೂಷಾ 1 ದತ್ತ ವೈಕುಂಠ ಮಹಿದಾಸ ಹಯಗ್ರೀವ ಹಂಸಾ | ಸೂನು ತಾಪಸಾ | ಚಿತ್ತಜಪಿತ ದೇವೋತ್ತಮ ಆಗಮಾ | ಸ್ತೋತ್ರವಿನುತ ಜಗವ ಸುತ್ತಿಪ್ಪ ಸುರಗಂಗೆ | ಪೆತ್ತೆ ಮಂದರಗಿರಿ | ವಿತ್ತ ಸಂಪತ್ತು ಇತ್ತಾ 2 ಅಜಿತ ನಾರಾಯಣಾ ವಿಷ್ವಕ್ಸೇನ | ಗಜವರದ ಹರಿವಿದ್ಭಾನು | ಸುಜನಪಾಲ ಪಂಕಜದಳ ಲೋಚನ | ತ್ರಿಜಗದೈವವೆ ದನುಜಕುಲ ಮದರ್Àನ | ಅಜಕಾನನ ವಾಸ ವಿಜಯವಿಠ್ಠಲ ರವಿತೇಜ ವಿದ್ವದ್ ರಾಜಾ 3
--------------
ವಿಜಯದಾಸ
ಹೃತ್ಪದ್ಮದೊಳಿದ್ದು ಹೃತ್ತಾಪಗಳ ಕಳೆಯೊ ಜೀ- ವತ್ಪಿತಾಮಹ ಜನಕನೇಪ ಮೃತ್ಪಿಂಡದಂತೆನ್ನ ಉತ್ಪತ್ತಿಗೆ ಕ- ಣ್ಣೆತ್ತಿ ನೋಡಲರಿಯಾ ಜೀಯಾ ಅ.ಪ ನಿತ್ಯ ನಿತ್ಯ ಜಗವೆಲ್ಲವು ನಿತ್ಯವು ನಿತ್ಯತ್ವವೆಲ್ಲ ಸರಿಯೇ ಏನಿದ್ದರೇನು ಅನಾದಿಕರ್ಮದ ಬವಣೆ ಬೆನ್ನಟ್ಟಿ ಬರುತಿರ್ಪುದ- ಜ್ಞಾನಾಂಧಕಾರದಿಂ ಧ್ಯಾನವನು ತಿಳಿಯದೇ ಕಾನನದೊಳಿಪ್ಪೆನೋ ಜ್ಞಾನಗಮ್ಯನೆಂದು ಸಾರುತಿದೆ ಶ್ರುತಿ ಶಾಸ್ತ್ರ ಜ್ಞಾನಗುರು ದೊರೆತಿಲ್ಲವೋ ಸಾನುರಾಗದಿ ನೀನೆ ಸಾಧನಕೆ ಕರುಣಿಸಿ ಧ್ಯಾನದಲಿ ಮನಸು ನಿಲಿಸೋ ಉಳಿಸೋ 1 ಬಂಧ ಮೋಕ್ಷಕೆ ಎಲ್ಲ ಮನವೆ ಕಾರಣವೆಂದು ಎಂದೆಂದಿಗು ಪೇಳುತಿಹರು ಸಿಂಧುಶಯನನೆ ಭವಬಂಧಮೋಚಕನೆಂದು ವಂದಿಸಿ ಪೊಗಳುವರೊ ಮಂದರೊದ್ಧರ ನಿನ್ನ ಮಂದಮತಿಯಿಂದಲಿ ವಂದಿಸಲು ನಾನರಿಯೆನೊ ಕಂದರ್ಪಜನಕ ನೀ ಮಂದಭಾಗ್ಯನ ಮನವ ನೋಯಿಸದೆ ನಿನ್ನ ಪದದಲ್ಲಿರಿಸೊ ಅಂದೆ ಎನ್ನಯ ಭವಬಂಧನಾಶವಾಗುವು- ದೊಂದೆ ನಿನ್ನನು ಬೇಡುವೆನೊ ಜೀಯ 2 ಜೀವರೆಲ್ಲರು ಗುಣತ್ರಯಾವರಣದಿಂದ ಕರ್ಮ- ಪ್ರವಹದೊಳಿಪ್ಪರೊ ಕವಿಸಿ ಮೋಹವ ನೀನು ಭವಕೆ ಕಾರಣವಹುದು ದೇವೇಶ ನಿನ್ನಾಟವೋ ಶ್ರವಣದಿಂದಲಿ ಭವಬಂಧಮೋಚಕನೆಂದು ತವ ಬಿರುದು ಸಾರುತಿದೇಕೋ ಭಾವ ಬಲ್ಲವರಾರೋ ಕಾವ ಕರುಣಿ ನೀನೆ ಭಾವಜನ ಪಿತನು ಅದೇ ಭವಪಾಶ ಬಿಡಿಸೆ ನಾ ಭಕುತಿಪಾಶದಿಂದ ಪಾದ ಬಿಗಿವೆನಯ್ಯ ಜೀಯ 3 ಸ್ವಾತಂತ್ರ್ಯವೆಲ್ಲಿಹುದು ಸ್ವಾಮಿತ್ವವೆಲ್ಲಿಹುದು ಅ- ಸ್ವತಂತ್ರನಾಗಿಪ್ಪೆನೊ ಕಾತುರದಿ ನಾ ಮಾಳ್ಪ ಕ್ರಿಯೆಗಳೆಲ್ಲವು ಎನ್ನ ಸ್ವಾತಂತ್ರ್ಯವೆಂದ್ಹೇಳುವೆ ನೀ ತಂತ್ರಿಯಾಗಿದ್ದೆನ್ನ ನಡೆಸುವುದನರಿಯೆ ಕು- ತಂತ್ರವನು ನಾ ಮಾಡುವೆ ಸ್ವಾ- ತಂತ್ರನು ನೀನು ಸೂತ್ರನಾಮಕ ದೇವ ಮಂತ್ರಿಯಾಗೀದೇವ ಯಂತ್ರ ನಡೆಸುವ ಎಂತಾದರಡಿಗಡಿಗೆ ಅತಂತ್ರನಾಗಿಹೆ ನಾನೇ ಭ್ರಾಂತಿಪರಿಹರಿಸಿ ಕಾಯೊ ಶೌರೇ 4 ಭಕ್ತಿ ಇಲ್ಲದೆ ನಿನ್ನ ಭಕ್ತನಾಗುವುದೆಂತೋ ಭುಕ್ತಮಾತ್ರನು ನಾನು ಮುಕ್ತರೊಡೆಯ ನೀನು ಯುಕ್ತಿತೋರಿಸು ಎನಗೆ ಭಕ್ತಾಪರಾಧಸಹಿಷ್ಣು ಶಕ್ತ ನೀನಹುದೊ ವೇದೋಕ್ತ ಮಹಿಮಾತೀತ ಸಕ್ತವಾಗಲಿ ನಿನ್ನ ಪದದಿ ಮನಸು ವ್ಯಕ್ತನಲ್ಲವೊ ಸರ್ವ ಸಾರಭೋಕ್ತನು ನೀನು ಭಕ್ತವತ್ಸಲ ಪುರುಷಸೂಕ್ತಮೇಯ ಅಪ್ರಮೇಯ ಯುಕ್ತಿಮಾತಲ್ಲಿದು ಭಕ್ತಿಪೂರ್ವಕ ನಿನ್ನ ಭಕ್ತ ಶ್ರೇಷ್ಠರ ಸೇವೆ ಕೊಟ್ಟು ರಕ್ಷಿಸೊ ದೇವಾ 5 ನಾದಕ್ಕೆ ಪರನಾಗಿ ವಾದಕ್ಕೆದೊರೆಯೇ ನೀ ವೇದವೇದಾಂತವೇದ್ಯ ಸಾಧನವು ಕಾಣೆ ಸಾಧನಶರೀರವಿದು ಸಾದರದಿ ಕರುಣಿಸಿದೆ ಅನಿರುದ್ಧದೇವ ಬಾಧಿಪುದು ಬಂಧಗಳು ಅನಾದಿಕರ್ಮದಿ ಬಂದು ನಾ ಅಧಮತಮಸಾಧನವನ್ನೆಸಗಿದೆ ನೀ ದಯಾಸಿಂಧು ಎಂದಡಿಗಡಿಗೆ ಬೇಡುವೆನು ಕೃದ್ಧನಾಗದೆ ಇನ್ನು ಉದ್ಧರಿಸು ತಂದೇ ಎಂದೇ 6 ಶಂಖಚಕ್ರಾಂಕಿತನೆ ಮಂಕುಬುದ್ಧಿಯ ಬಿಡಿಸೋ ಅಂಕಿತವೆನಗೆ ಇಲ್ಲ ಅಂಕೆ ಇಲ್ಲವೊ ನಿನ್ನ ನೆನೆಹುದಕೆ ಎಂದಿಗೂ ಶಂಕೆಯ ಪಡುವನಲ್ಲ ವೇಂಕಟಾದ್ರಿಯ ವಾಸ ಶ್ರೀ ವೇಂಕಟೇಶನು ಮಮಕುಲಸ್ವಾಮಿ ದೈವವೆಂದನುದಿನ ಸಂಕಟಾಗಾಮಿಗಳ ಕಂಟಕವ ಹರಿಸಿ ಪದ ಪಂಕಜದಿ ಮನವ ನಿಲ್ಲಿಸೋ ಬಿಂಕದ ಮಾತಲ್ಲ ಪಂಕಜದಳಾಯತಾಕ್ಷ ಅಕ- ಳಂಕಮಹಿಮ ಕಾಯೋ ಜೀಯಾ7
--------------
ಉರಗಾದ್ರಿವಾಸವಿಠಲದಾಸರು
ಜಯತು ಜಗನ್ಮಾತೆ ಪಾಲಿಸು ಜಯತು ಜಗದ್ಭರಿತೆಜಯತು ಜನಾರ್ದನ ಸ್ವಾಮಿಯ ಪ್ರೀತೆಜಯತು ಜನಾರ್ದನ ಮೋಹಿನಿ ಖ್ಯಾತೆ1ಪಂಕಜದಳ ನೇತ್ರೆ ಜಯಜಯಕಿಂಕರನುತಿ ಪಾತ್ರೆಕಂಕಣಕರಭವಬಿಂಕವಿಹಾರಿಣಿಕುಂಕುಮಗಂಧಿ ಶಶಾಂಕ ಪ್ರಕಾಶಿತೆ2ಲೋಕೋದ್ಧಾರಿಣಿಯೇಭವಭಯಶೋಕನಿವಾರಿಣಿಯೆಮೂಕಾಸುರನನು ಮರ್ದಿಸಿ ಲೋಕದಮೂಕಾಂಬಿಕೆಯೆಂಬ ನಾಮವ ಧರಿಸಿದ3ಸುಂದರಿಶುಭಸದನೇ ಸದ್ಗುಣಮಾದರಿ ಇಭಗಮನೆಕುಂದರದನೆಅಘವೃಂದ ನಿವಾರಿಣಿವಂದಿಸುವೆನುಪೊರೆಗೋವಿಂದದಾಸನ ಜಯತು4xmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'
--------------
ಗೋವಿಂದದಾಸ
ಸುರತಟನೀಧರನರಸೀ |ಪೊರೆಪಾರ್ವತಿ ದೇವಿಯೇ |ಕರುಣಾಕರೇ ದುರಿತಹರೇ | ಶರಣರ ಸಂಜೀವಿಯೆ 1ಕಂಕಣಕರೆ ಕುಂಕುಮಧರೆ | ಪಂಕಜದಳ ನೇತ್ರೆಯೆ |ಶಂಕರಿ ಭವಬಿಂಕಹರೇ | ಕಿಂಕರನುತಿ ಪಾತ್ರೆಯೇ 2ಚಂಡಿಯೆ ಚಾಮುಂಡಿಯೇ | ಪ್ರಚಂಡಿಯೆ ಓಂಕಾರಿಯೆ |ಚಂಡನ ಖಳಮುಂಡನ ಶಿರÀ | ಖಂಡನೆ ಹ್ರೀಂಕಾರಿಯೇ 3ಜ್ವಾಲಿನಿ ಮಹಮಾಲಿನಿ ದಯೇ | ಶೀಲೆ ನೀ ಶರ್ವಾಣಿಯೆ |ಕಾಳಿನಿ ಮಹಾ ಕಾಳಿನಿರಣ| ಶೂಲಿನೀ ರುದ್ರಾಣಿಯೆ 4ಸುಂದರಿ ಗುಣಮಂಜರಿ ಪೂರ್ಣೇಂದು ಸಂಕಾಶಿಯೇ |ಚಂದದಿ ಗೋವಿಂದನ ದಾಸ| ವಂದಿತೆ ಅಘನಾಶಿಯೆ 5
--------------
ಗೋವಿಂದದಾಸ