ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪೂಜೆಯ ನಾನೇನ ಮಾಡುವೆ|ವiಹಾ ರಾಜರಾಜ ಕುರುಣಾನಂದ ಮೂರುತಿ ಹರಿಯೇ ಪ ಧ್ಯಾನಧಾರಣ ಮಂಗಳ ಮೂರ್ತಿಯ ಮಾಡುವೆನೆಂದರೆ| ನಿನ್ನ ಸುಖದ ನೆಲೆಯ ಇಂದಿರಾ ದೇವಿಯರಿಯಳು ಹರಿಯೇ 1 ಶಂಖೋದಕದಿ ಅಭಿಷೇಕ ಮಾಡುವನೆಂದರೆ|ನಿನ್ನಪದ ಪಂಕಜದಲಿ ಭಾಗಿರಥಿ ಬಂದಳೂ ಹರಿಯೇ2 ವಸ್ತ್ರವನುಡಿಸುವೆನೆಂದರೆ ದ್ರೌಪದಿಯವಸರದಿ|ನಿನ್ನಯ ವಸ್ತ್ರದಿಂಡಿನ ಎಣಿಕೆಯ ದೋರದೆನಗೆ ಹರಿಯೇ3 ಗಂಧಪುಷ್ಪವನೀವೆನೆಂದÀರೆ ನಿನ್ನ ಚರಣಾಬ್ಜದಾ|ಮಕ ಭ್ರಮರ ಅಜಭವರಾದರು ಹರಿಯೇ 4 ಆರೋಗಣೆಯ ಮಾಡಿಸುವೆನೆಂದರೆ ನಿನ್ನಕೈಯದಿ|ಸುರರು ಆರೋಗಣೆಯ ಮಾಡಿ ಅಮರರಾದರು ಹರಿಯೇ 5 ನೀರಾಂಜನ ಮಾಡುವನೆಂದರೆ ಕೋಟಿ ಸೂರ್ಯಪ್ರಭೆಯತೇಜ| ಮೀರಿತು ಸ್ತುತಿಗಿನ್ನು ಶ್ರುತಿಗಳು ನಿಂತವು ಹರಿಯೇ6 ಗುರುವರ ಮಹೀಪತಿನಂದನ ಸಾರಥಿ|ನಿನ್ನ ಸ್ಮರಣೆಯ ಕೊಟ್ಟನುದಿನದಿ ರಕ್ಷಿಸುಹರಿಯೇ7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಭವ ಭಯಂಕರ ಪ ಶಂಕರ ತ್ವತ್ಪದ ಪಂಕಜದಲಿ ಮನ ಶಂಕೆಯಿಲ್ಲದೆ ಕೊಟ್ಟು ಕಿಂಕರನನು ಪೊರೆ 1 ಮೃತ್ಯುಪಾಶಕೆ ಸಿಕ್ಕಿ ತತ್ತರಿಸುತಲಿದ್ದ ಭಕ್ತನ ಸಲಹಿದ ಮೃತ್ಯುಂಜಯ ಸಲಹೆನ್ನ 2 ವಿಷವು ಆವರಿಸಲು ತ್ರಿದಶರು ಬೇಡಲು ನಸುನಗುಗಲಿ ವಿಷ ಧರಿಸಿದ ಸದಾಶಿವ 3 ಶಿವಶಿವಾವಲ್ಲಭ ಭವಾಭವ ಪ್ರಭವನೆ ಭುವನ ಪವಿತ್ರನೆ ಭವಹರ ಸಲಹೆನ್ನ 4 ಅಂಬಿಕನಾಥನೆ ನಂಬಿದೆ ನಿನ್ನನೆ ಶಂಭುವೆ ಭಕ್ತನ ಬೆಂಬಿಡದೆಲೆ ಪೊರೆ 5 ಅಷ್ಟ ವಿಭೂತದ ಅಷ್ಟಮೂರ್ತಿಯೆ ಪದ ಮುಟ್ಟಿ ಭಜಿಪ ಮನ ಕೊಟ್ಟು ರಕ್ಷಿಸು 6 ದಿಗಂಬರ ದಯಾಕರ ಭಗೀರಥ ಹಿತಕರ ಅಘಹರ ಮೃಗಧರ ಹಗರಣಗೊಳಿಸಿದೆ 7 ವಿಘ್ನಪ ಜನಕನೆ ಅಜ್ಞತೆ ಬಿಡಿಸಯ್ಯ ಸುಜ್ಞನೆ ಭವಾಂಬುಧಿ ಮಗ್ನನನುದ್ಧರಿಸಯ್ 8 ಲಕುಮಿಕಾಂತನ ಪ್ರಿಯಸÀಖನೆ ಶ್ರೀಕಂಠನೆಭಕುತಿ ಭಾಗ್ಯವನೀಯೊ ಶಕುತ ಬಿಡದೆ ಕಾಯೊ 9
--------------
ಲಕ್ಷ್ಮೀನಾರಯಣರಾಯರು
ಸತ್ಯ ಸಂಕಲ್ಪ ನೀನಹುದೆಲೊ ಜಗದೊಳು ಭೃತ್ಯವತ್ಸಲ ಹರಿಯೆ ಪ. ನಿತ್ಯ ತೃಪ್ತನೆ ವ್ಯಾಪ್ತ ಜಗದಿ ಹರಿಯೆ ದೊರೆಯೆ ಅ.ಪ. ಜನನ ಮರಣ ವಿದೂರನೆ ದೇವಕಿ ತನಯ ರುಕ್ಮಿಣೀಶ ಘನಭವ ವನಧಿಯ ದಾಟಿಸಿ ಸಲಹೋ ವನಜ ನಯನ ದೇವ ಸತತದಿ 1 ಕಮಲಾಕ್ಷ ಕಮಲೇಶ ಕಮಲಪಾಣಿ ಪದ ಕಮಲವೆನಗೆ ತೋರೊ ಕಮಲನಾಭ ಹೃತ್ಕಮಲದಿ ನಿಲ್ಲೊ ಕಮಲಮುಖನೆ ದೇವ ಶ್ರೀಹರಿ 2 ಭಕ್ತಕಮಲ ಬಂಧು ವ್ಯಾಪ್ತ ದಯಾಸಿಂಧು ಉತ್ತಮನೆ ನೀನೆಂದು ಎತ್ತ ನೋಡಲು ಸುರರೆತ್ತಿ ಕೈ ಪೊಗಳಲು ಮತ್ತೆ ನಿನಗೆ ಸರಿಯೆ ಜಗದೊಳು 3 ಶ್ರೀನಿವಾಸನೆ ಕಾಯೊ ಮಾನನಿಧಿಯೆ ಎನ್ನ ಹೀನ ಕರ್ಮವ ಕಳೆಯೊ ಶ್ರೀನಿಧಿ ದ್ರೌಪದಿ ಮಾನ ಕಾಯ್ದನೆ ಗಾನಲೋಲ ಕೃಷ್ಣ ನರಹರಿ 4 ಸಂಕರ್ಷಣನೆ ಮನ ಪಂಕಜದಲಿ ನಿಂತು ಶಂಕಿಸದಲೆ ಕಾಯೊ ಪಂಕಜಮುಖ ಹರಿ ಗೋಪಾ- ಲಕೃಷ್ಣವಿಠ್ಠಲ ಶಂಖ ಚಕ್ರಧರನೆ ಪೊರೆಯೊ ನೀ5
--------------
ಅಂಬಾಬಾಯಿ