ಬಾರೋ ರಂಗಯ್ಯ ಬಾರೋ ಕೃಷ್ಣಯ್ಯ
ಬಾರೋ ರಂಗ ನವನೀರದ ನಿಭಾಂಗ ಪ
ನಂದಗೋಪನಂದನ ಸುಂದರ ನಾರಾಯಣ
ಇಂದು ವದನ 1
ಗಮನ ವರ ಶ್ರೀವತ್ಸಲಾಂಛನ
ದುರಿತ ಹರಣ ನರಹರಿ ಪರಮಪಾವನ 2
ಪಂಕಜದಲಲೋಚನ ವೆಂಕಟಾಚಲರಮಣ
ಭಂಜನ 3
ಅನಘ ವನಧಿಶಯನ ಮುನಿ ಹೃತ್ಕಮಲ ಪೋಷಣ
ಘನಮಣಿ ಖಚಿತಾಭರಣ ಕನಕಾಂಬರ ಭೂಷಣ 4
ಬಲಿಬಂಧನ ವಾಮನ ಜಲಜೋದರ ಜನಾರ್ಧನ
ವಿಲಸಿತ ಹೆನ್ನೆ ಪಟ್ಟಣ ನಿಲಯ ಶ್ರೀ ಮಧುಸೂದನ 5