(ಬಪ್ಪನಾಡಿನ ಪಂಚದುರ್ಗೆ)
ಮಂಗಲಂ ಶ್ರೀಪಂಚದುರ್ಗೆಗೆ ಜಯ
ಮಂಗಲಾರತಿಯೆತ್ತಿ ಶ್ರೀಮಹೇಶ್ವರಿಗೆಪ.
ಶಂಕರನಂಕಾಲಂಕಾರಿಗೆ
ಕುಂಕುಮಬೊಟ್ಟಕಸ್ತೂರಿ ಲಲಾಟೆಗೆ
ಪಂಕಜಗಂಧಿ ಶ್ರೀಪಾರ್ವತಿಗೆ1
ಕೋಕಿಲಗಾನೆಗೆ ಕೋಕಪಯೋಜೆಗೆ
ಶ್ರೀಕಂಠನರ್ಧಾಂಗಿ ಶ್ರೀಗೌರಿಗೆ
ಏಕದಂತನ ಜನನಿಗೆ ಜಗದಂಬೆಗೆ
ಲೋಕನಾಯಕಿ ಶ್ರೀಮಹಾಕಾಳಿಗೆ2
ಕಂಜದಳಾಕ್ಷಿಗೆ ಕಲಧೌತಗಾತ್ರೆಗೆ
ಕುಂಜರಗಮನೆ ಕಂಧರಜಾತೆಗೆ
ಮಂಜೀರನೂಪುರರಣಿತಪದಾಬ್ಜೆಗೆ
ನಂಜುಂಡನ ಮನಮಂಜುಳೆಗೆ3
ಅಂಗಜರೂಪೆಗೆ ಮಂಗಲದಾತೆಗೆ
ಭೃಂಗಕುಂತಳೆ ಸರ್ವಮಂಗಲೆಗೆ
ಬಂಗಾರಮಕುಟೋತ್ತಮಾಂಗದಿ ಧರಿಸಿದ
ಸಂಗೀತಲೋಲೆಗೆ ಶರ್ವಾಣಿಗೆ4
ರೂಢಿಗಧಿಕ ಬಪ್ಪನಾಡಿಗೊಡತಿಯಾಗಿ
ಮೂಡಿತೋರಿದ ಶ್ರೀಮುಕಾಂಬಿಕೆಗೆ
ಕ್ರೋಡಾವತಾರ ಲಕ್ಷ್ಮೀನಾರಾಯಣ ಸೊಸೆ
ಬೇಡಿದಿಷ್ಟವನೀವ ಸರ್ವೇಶೆಗೆ5