ಸಾಂಬ ಶಿವ
ಶರಣರಿಗೊಂದು ಶರಣಾರ್ಥಿ ಪ
ನರಲೋಕದೊಳಗೆ ಸಂಚಾರವ ಮಾಡುವ
ಪರಮಾತ್ಮ ಪರಿಪೂರ್ಣ ಎಲ್ಲ ಜೀವದೊಳೆಂದು
ಅರಿತಂಥವನಿಗೊಂದು ಶರಣಾರ್ಥಿ
ಮರೆಹೊಕ್ಕ ದೀನರನು ರಕ್ಷಿಪ ಪುಣ್ಯ ಪುರು
ಪುರುಷ ಪ್ರಯತ್ನದಿಂದುದ್ಯೋಗವನು ಮಾಳ್ಪ
ಸರಿವಂಥವರಿಗೊಂದು ಶರಣಾರ್ಥಿ 1
ಧಾರಣಿಯೊಳು ಪೆಸರೊಡೆದು ರಂಜಿಸುವಂಥ
ಕಾರುಣಿಕರಿಗೊಂದು ಶರಣಾರ್ಥಿ
ದವರಿಗೊಂದು ಶರಣಾರ್ಥಿ
ನಿತ್ಯ ಕರ್ಮವ ರಚಿಸುವ
ಚಾರು ಶೀಲರಿಗೊಂದು ಶರಣಾರ್ಥಿ
ಸ್ಸಾರ ಮಾಡಿದಗೊಂದು ಶರಣಾರ್ಥಿ 2
ಕೆರೆಭಾವಿ ದೇವಾಲಯಗಳ ಕಟ್ಟಿಸಿ ದೇವರುತ್ಸವವನು ಬರಿಸುವಗೆ
ದ್ಧರಿಸಿ ಭುಂಜಿಪಗೊಂದು ಶರಣಾರ್ಥಿ
ಪರದಾರ ಪರದ್ರವ್ಯ ಪರದ್ರೋಹವಿಲ್ಲದ ಮಹಾ
ಪುರುಷರಿಗೊಂದು ಶರಣಾರ್ಥಿ
ಹರಿಹರರೊಳಗೆ ಭೇದವ ಮಾಡಿ ನಡೆಯದ
ದುರಿತ ದೂರರಿಗೊಂದು ಶರಣಾರ್ಥಿ 3
ಸತ್ತು ಹುಟ್ಟುವ ಭವಶರಧಿಯ ಗೆಲುವಂಥ
ಉತ್ತಮರಿಗೊಂದು ಶರಣಾರ್ಥಿ
ನಿತ್ಯ ಸಾಲಿಗ್ರಾಮಂಗಳನು ಪೂಜಿಸಿ ಹರಿ
ತೀರ್ಥಗೊಂಬನಿಗೊಂದು ಶರಣಾರ್ಥಿ
ಕೃತ್ತಿ ವಾಸನ ಆಗಮೋಕ್ತದಿ ಪೂಜಿಪ
ಭಕ್ತಿವಂತರಿಗೊಂದು ಶರಣಾರ್ಥಿ
ತತ್ವ ವಿಚಾರ ವೇದಾಂತದ ಅರ್ಥವ ಯಾ
ವತ್ತರಿದವಗೊಂದು ಶರಣಾರ್ಥಿ 4
ಅರವಟ್ಟಿಗೆಯನು ಚೈತ್ರದೊಳಿಕ್ಕಿ ಜನರಿಗೆ
ನೀರೆರಸಿದವರಿಗೊಂದು ಶರಣಾರ್ಥಿ
ಸಿರಿ ತುಳಸಿಯನ್ನು ನೇಮದಲಿ ಪೂಜಿಸುವಂಥ
ಹರಿ ಶರಣರಿಗೊಂದು ಶರಣಾರ್ಥಿ
ತರಣಿಯೆ ತ್ರಿಗುಣಾತ್ಮಕನೆಂದು ಹೃದಯದೊಳರಿ
ದೆರಗುವಗೊಂದು ಶರಣಾರ್ಥಿ
ಮರುಸುತನ ಕೋಣೆ ವಾಸ ಲಕ್ಷ್ಮೀಶನ
ಚರಣ ಪಂಕಜಕೊಂದು ಶರಣಾರ್ಥಿ 5