ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ವ್ಯಾಘ್ರಗಿರಿವಾಸ-ಶ್ರೀ ಶ್ರೀನಿವಾಸ ಸೂರಿ ಸೇವ್ಯ ಪಾದಾಬ್ಜ ಪ ಕಮಲಸಂಭವ ಜನಕ ಕಮಲಾಪ್ತಕುಲತಿಲಕ ಕಮಲ ಸನ್ನಿಭಚರಣ ಕಲುಷಗಣ ಹರಣ ಕಮನೀಯ ಗುಣಹಾರ-ಕಲ್ಯಾಣಗುಣ ಪೂರ ಕಮಲಾ ಮನೋಹರ ಕಲಿತಶೃಂಗಾರ 1 ಲೋಕ ಮೋಹನ ರೂಪ ಲೋಕರಕ್ಷಣ ಚಾಪ ಶೋಕಮೋಹವಿದೂರ ಸುಕೃತಿಪರಿವಾರ ನಾಕನಿಳಯ ಸಮಾಜ ನಮಿತ ಪಾದಾಂಭೋಜ ಪಾಕರಿಪು ಮಣಿನೀಲ ಪದ್ಮಾನುಕೂಲ 2 ಮಾಂಡವ್ಯ ಮುನಿಸೇವ್ಯ ಮಾನಸಾಂಬುಜ ಭವ್ಯ ಪಾಂಡುಸುತ ಪರಿಪಾಲ ಪಾವನ ಸುಶೀಲ ಭಾಗವತ ಸನ್ಮೋದ ಗಾಂಡೀವಿ ಸುಶ್ಯಾಲ-ಗಾನರಸಲೋಲ 3 ತವಚರಣ ಪಂಕಜಂ-ತೃಪ್ತಜನ ಸುರಕುಜಂ ಭವಜಲಧಿತಾರಣಂ ಭವತುಮಮ ಶರಣಂ ತವನಾಮ ಕೀರ್ತನಂ ತಾಪಪರಿಮೋಚನಂ ಶ್ರವಣಯೋರ್ದೇಹಿಮಮ-ಶಮಿತಾಘಮಹಿಮಾ4 ಸಕಲ ಲೋಕ ಶರಣ್ಯ ಸರ್ವದೇವ ವರೇಣ್ಯ ನಿಖಿಲ ಭೂತವಾಸ-ನಿರ್ಮಲಸುವೇಷ ಅಕಲಂಕ ಚರಿತ-ನಿತ್ಯಾನಂದ ಗುಣ ಭರಿತ ಶಿಖರಿಷವಿಹರಣ ಕುಶಲ-ಶ್ರೀವರದವಿಠಲ5
--------------
ಸರಗೂರು ವೆಂಕಟವರದಾರ್ಯರು