ಪರಮಾನುಗ್ರಹ ಮಾಡು -ಈ
ತರಳನ ದಯದಿಂ ನೋಡು ಪ
ನರಹರಿ ನೀನಲ್ಲವೆ ಕರುಣಾಳು ಅ.ಪ
ಅನ್ನ ಸೇರಲಿಲ್ಲವಂತೆ -ಮಲಗಿ
ನಿನ್ನಿಂದಲಿ ಹೀಗಿಹನಂತೆ
ಘನ್ನಮಹಿಮ ನಿನ್ನವರಿಗೆಲ್ಲ -ಈ
ಬನ್ನ ನ್ಯಾಯವೆ ಪ್ರಸನ್ನ ನೃಸಿಂಹ 1
ತುಡುಗಾಟಗಳಾಡಿ ಬಳಲಿ -ಈ
ಹುಡುಗ ಮನೆ ಮನೆಯ ತೊಳಲಿ
ಕಡುಭೀತಿಯ ಹೊಂದಿರುವ ನಾವು ನಿ-
ನ್ನೊಡವೆಯಲ್ಲವೆ ಒಡೆಯ ನರಹರಿಯೆ 2
ಔಷಧ ಪಥ್ಯಗಳೇಕೆ -ನಿ
ರ್ದೋಷ ನೀನೊಳಗಿರಲಿಕ್ಕೆ
ಶೇಷಶಯನ ಗುರುರಾಮವಿಠಲ
ಪÉೂೀಷಿಸುವನು ನೀನೆ ನೀನೆ ನಿಜ3