ಕರುಣಿಸು ಕಮಲಾಸನ ಮಾತಯೆ ನೀಂ ಕರಧೃತ ವರ ಕಮಲೆ ಪ
ಶರಣವ ಪÉÇಂದಿಹೆ ಕರುಣದೊಳೀಕ್ಷಿಸು ವರದೆ ವರಲಕ್ಷ್ಮಿ ಅ.ಪ.
ಕುಸುಮ ಧೂಪಾವಳಿಯಿಂದಲಿ ಸುಂದರಿ ಪೂಜಿಪೆನು
ಬಂಧುರಗಾತ್ರಿಯೆ ಅಂದದೊಳೆನ್ನಯ ಮಂದಿರದೊಳಗಿಹುದು 1
ಶ್ರಾವಣ ಮಾಸದಿ ಭಾವಕಿ ನಿನ್ನನು ಭಾವದಿ ಭಾವಿಸುತ
ತಾವಕ ಪಾದವ ಪ್ರೇಮದಿ ಪೂಜಿಪೆ ದೇವಿಯೆ ಒಲಿಯುವುದು 2
ಚಂದನಭೂಷಿತೆ ಸುಂದರ ಗಾತ್ರೆಯ ಮಂದಹಾಸಮೊಲಿಯೆ
ಚಂದದ ಕಿಂಕಿಣಿಯಂದದರವದೊಳ್ ಬಂದು ದಯಂಗೆಯ್ಯೆ3
ಹರಿಮಾನಸ ಮೋಹದ ಪ್ರಾಣೇಶ್ವರಿ ಹರಸುತ ವರಗಳಿಂದ
ವರಧೇನುನಗರ ವರಜನ ಪೋಷಿಣಿ ಕರುಣಾಕರೆ ವರದೆ4