ಹರಿಯೇ ನಿನ್ನಯ ಸಿರಿಯನು ಬಣ್ಣಿಸೆ
ನರನಾದೆನಗಳವೇ ಪ
ಕರುಣಾಳುವೆ ನಾಂ ಕರಗಳ ಮುಗಿವೆ
ಪÀರವಾಸುದೇವ ಪರಮಾತ್ಮಾ ಅ.ಪ
ಸತಿಶ್ರೀದೇವಿಯು ನುತಚತುರಾನನ
ಪತಿತೋದ್ಧರೆ ಗಂಗೆಯು ಮಗಳು
ಸ್ತುತಿಗೈಯುವವೇದ ತತಿಯಿಂ ನಿತ್ಯ
ಭೃತ್ಯರು ಸುರಗಣ ಸರ್ವೇಶಾ 1
ಸಾಗರ ಮಧ್ಯದಿ ಭೋಗಿಯನೊರಗಿ
ಯೋಗೀಜನರ ಹೃದಯದಿ ನೆಲಸಿ
ಆಗಮ ಪೂಜೆಯ ರಾಗದಿ ಪಡೆವ 2
ಶಂಖಸುದರ್ಶನ ಪಂಕಜಧರಶ್ರೀ
ವೆಂಕಟವರದ ಶೀರಂಗ
ಕಿಂಕರ ಪಾಲಕ ಜಾಜೀಶಾ 3