ಯತಿಗಳು
ಟೀಕಾಚಾರ್ಯರು
ಜಯರಾಯಾ ಜಯರಾಯಾ ಪ
ದಯಕರ ಸಜ್ಜನಭಯಹರ ಗುರುವರ ಅ.ಪ
ವಾಸವ ನೀ ವಸುಧೀಶನ ನಿಜ
ಕೂಸೆನಿಸೀಪರಿ ದೇಶದಿ ಮೆರೆದೆ 1
ಸತಿಯಳ ತ್ಯಜಿಸಿ ಯತಿರೂಪ ಧರಿಸಿ
ಪÀತಿತರ ಶಾಸ್ತ್ರವ ಹತಮಾಡಿದಿ ನೀ 2
ಸುಧಾದಿಗ್ರಂಥವ ಮುದದಲಿ ರಚಿಸಿ
ಬುಧಜನಸ್ತೊಮಕೆ ಒದಗಿಸಿ ಕೊಟ್ಟಿ3
ಅಲವಬೋಧರ ಮತ ಬಲವತ್ತರಮಾಡಿ
ಜಲಜನಾಭನ ಮನ ಒಲಿಸಿದ್ಯೊ ಜೀಯಾ 4
ಪ್ರಮಿತಜನಗಣನಮಿತ ಪದಾಂಬುಜ
ಅಮಿತಮಹಿಮ ನಿನ್ನ ನಮಿಸುವೆ ದಿನದಿನ 5
ಯಾತಕೆ ಎನ್ನನು ಈ ತೆರನೋಡುವಿ
ದಾತಗುರುಜಗನ್ನಾಥ ವಿಠಲ ಪ್ರೀಯ6