ಪ(ಪಾ)ವನಾ ಗುರು ಪವಮಾನ ಪ
ಪಾವನ ಗುರು ಪವಮಾನ ದೇವ
ಅವಾವಕಾಲದಿ ಸಲಹುವ ಕರುಣಿ ಕೃಪಾ
ವಲೋಕನದಿಂದ ಕಾವುದೆಮ್ಮನು ಗುರುಅ.ಪ
ಪರಮ ಮಹಿಮ ಶ್ರೀ ಮುಕುಂದಾ ನಿಂದ
ಕರುಣಾದಿಂದ ಜನಿಸಿಬಂದ ಬಂದು
ಸರ್ವಜೀವರೊಳಾನಂದದಿಂದ
ಕರಣದೊಳು ನಿಂತಚಂದಾ ||ಆಹ||
ನಿರುತದಿ ಹರಿಪ್ರೇರಣೆಯಿಂದ ಕಾರ್ಯವ
ಪರಿಪರಿಮಾಡಿ ಶ್ರೀಹರಿಗರ್ಪಿಸುವ ದೇವ 1
ತರುಚ್ಛಾಯೆಯಂತೆ ಶ್ರೀ ಹರಿಗೆ ನೀನೆ
ಪರಮ ಪ್ರತಿಬಿಂಬನಾಗೆ ಸರ್ವ
ಚರಾಚರಾದಿಗಳೊಳಗೆ ಅದರ
ದರಯೋಗ್ಯತೆಗನುವಾಗೇ ಆಹ
ನಿರುತಕಾರ್ಯವ ಮಾಳ್ವೆ ಅಣುಮಹದ್ರೂಪನೆ
ಪರಿಪರಿ ಪ್ರಾಣಾದಿಗಳ ಕಾರ್ಯ ನಿನ್ನಿಂದ2
ಚಕ್ರವರ್ತಿ ಆಜ್ಞೆಯಂತೇ ಪುರದ-
ಧಿಕಾರಿನಿಯಮದಂತೇ ಅದಕ-
ಧಿಕೃತರಿರುವರಂತೇ ಅಂತೆ ತ-
ತ್ವ ಕಾರ್ಯವು ನಿನ್ನಿಚ್ಛೆಯಂತೇ ||ಆಹ||
ಮಿಕ್ಕಾದ ತತ್ವರಿಗೆ ತಕ್ಕ ಕಾರ್ಯವನಿತ್ತು ನಿ-
ಯುಕ್ತರ ಮಾಡುವೆ ಹರಿಉಕ್ತಿಯ ಮೀರದೆ 3
ಇಭರಾಜವರದನ ಪ್ರೀಯ ನೀನೆ
ಪ್ರಭುವಾಗಿರುವೆ ಸರ್ವಕಾಯದೊಳು
ಶುಭಾಶುಭಂಗಳ ಕಾರ್ಯ ನಿತ್ಯ
ನಿಬಿಡ ನಿನ್ನಿಂದಲೆ ಜೀಯಾ ||ಆಹ||
ಅಬುಜಾಂಡದೊಳಗೆಲ್ಲ ಪ್ರಬಲ ನಿನ್ನಯ ಶೌಂiÀರ್i
ಅಬುಜಭವನ ಪದಪಡೆವ ಪ್ರಭುವೆ ನೀನು4
ಪ್ರಾಣಾದೇವ ನಿನ್ನಿಂದ ಪಂಚ-
ಪ್ರಾಣಾದಿರೂಪಗಳಿಂದ ತನು
ಸ್ಥಾನದಿಭೇದಗಳಿಂದ ಜಡ
ಪ್ರಾಣಭೂತ ಪಂಚದಿಂದಾ ||ಆಹ||
ಕಾಣಿಸಿಕೊಳ್ಳದೆ ಜಾಣತನದಿ ಪುಣ್ಯ
ಪಾಪ ಜೀವಗೆ ಉಣಿಸುತಲಿರುವೆಯೊ5
ಪಾಯೂಪಸ್ಥದಿ ಅಪಾನ ಮುಖ
ನಾಸಿಕ ಶ್ರೋತ್ರ ಪ್ರಾಣಾ-ನಾಭಿ
ಅಯನವಾಗಿರುವ ಸಮಾನಾ ಇನ್ನು
ಪಯಣವು ನಾಡಿಯೊಳು ವ್ಯಾನ ||ಆಹ||
ಒಯ್ದುಕೊಡುವ ಫಲಕಾರ್ಯವೆಲ್ಲ
ಉದಾನನಿಂದ ಕೂಡಿ ಜೀಯ ನೀ ನಡೆಸೂವೆ 6
ಸೃಷ್ಟಿಯೊಳು ನೀ ಪ್ರವಿಷ್ಟನಾಗಿ
ಸೃಷ್ಟಿಕಾರ್ಯದೊಳು ಚೇಷ್ಟಾ ಮಾಡಿ
ಸೃಷ್ಟೀಶನೊಲಿಸಿ ಪ್ರತಿಷ್ಠಾ ತತ್ವ
ಶ್ರೇಷ್ಠರೆಲ್ಲರ ಮನೋಭೀಷ್ಠ ||ಆಹ||
ತುಷ್ಟಿಪಡಿಸಿ ಪರಮೇಷ್ಠಿಯಾಗುವೆ ಕಪಿ
ಶ್ರೇಷ್ಠನೆ ಉರಗಾದ್ರಿವಾಸವಿಠಲನದೂತ 7