ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲನು ನಿನಗೆ ಕೂಡಿತಯ್ಯ ಹರಿ ಪುಲ್ಲನಾಭ ದಯ ಮಾಡಯ್ಯ ಪ ಖುಲ್ಲನು ನಾಬಲು ಎಲ್ಲಿಯುಸಲ್ಲದೆ ತಲ್ಲಣಿಸುತ ನಿನ್ನ ಬಲವಂದೆ ದೇವ ದೇವ ಅ.ಪ ಧೃಢಗುಣ ಎನ್ನೊಳಿಲ್ಲಯ್ಯ ಬಲು ನುಡಿ ಹೀನ ನಾಕಡು ಪಾಪ್ಯಯ್ಯ ನಡೆ ನುಡಿ ಇಲ್ಲದೆ ಕಡುನೊಂದೀಗ ನಿಮ್ಮ ನ್ಹುಡುಕುತ ತಿರುಗುವೆ ಜಡಜಾಕ್ಷನೆ ಪೊರೆ 1 ಪರರದ್ರವ್ಯವಪಹರಿಸಿದೆನೊ ನಾ ಪರಮನೀಚನಾಗಿ ಚರಿಸಿದೆನೊ ಅಗಣಿತ ದುರಿತವನುನಾ ಜರೆಯದೆ ಪರಿಪರಿ ಮಾಡಿದೆನೊ ಮರೆವೆಲಿ ಮಾಡಿದ ಪರಮ ಎನ್ನತಪ್ಪು ಕರುಣಾಕರನೆ ನೀಕರುಣದಿ ಕ್ಷಮಿಸಯ್ಯ 2 ಶರಣಾಗತ ವತ್ಸಲನೆಂದು ನಿನ್ನ ಮರೆಯಹೊಕ್ಕೆನೆಯ್ಯ ದಯಾಸಿಂಧು ಮೊರೆಕೇಳು ಭಕ್ತರ ಪ್ರಿಯಬಂಧು ಎನ್ನ ದುರಿತದಿ ಕಡೆ ಹಾಯ್ಸಯ್ ಇಂದು ಶಿರಬಾಗಿ ನಿಮಗೆ ಸೆರೆಗೊಡ್ಡಿ ಬೇಡುವೆ ಕರಪಿಡಿ ಬಿಡಬೇಡ ಸಿರಿವರ ಶ್ರೀರಾಮ 3
--------------
ರಾಮದಾಸರು
ಬಂದೆನೊ ರಂಗ ಬಂದೆನೊ ಹಿಂದಿನ ಸುಕೃತದಿ ತಂದೆ ನಿನ್ನ್ಹುಡುಕುತ ಪ ಹಲವು ಜನುಮಜನುಮಗಳಲಿ ತಿರುತಿರುಗಿ ತೊ ಳಲಿತೊಳಲಿ ಬಂದು ಬಳಲಿ ಮರುಗಿ ಹೊಲಸಿನ ಮಲಮೂತ್ರ ಕುಣಿಲಿ ಕೊರಗಿ ಎಲುವೊಂದು ಗಿರಿಯೋಪಾದಿಯಲಿ ಆಹ ಇಳೆಯೊಳು ಬಿದ್ದಿಹ್ಯವು ಬಲು ಬಲು ಹೊಲೆಬವಣೆ ಯಲಿ ನೋಯಲಾರದೆ ಕಳವಳಗೊಳುತ 1 ಜಡÀಸದೃಸ ಶರೀರಗಳ್ಹೊತ್ತು ಬಿಡದೆ ಎಡರು ತೊಡರಿನೊಳಗೆ ಬೆರೆತು ಕೆಡುವ ಪೊಡವಿಸುಖಕೆ ಮನವಿತ್ತು ದೃಢವನ್ಹಿಡಿಯದೆ ಮರೆವಿನಿಂ ಸಂಪತ್ತು ಆಹ ಒಡನೊಡನ್ಹುಟ್ಟ್ಹುಟ್ಟ ಕಡುಕಷ್ಟಬಡುವಂಥ ಸುಡಗಿಯ ತಡಿಯದೆ ಗಡಗಡ ನಡುಗತ್ತ 2 ನೋಡೆಲೊ ಕರುಣಾಂತರಂಗ ದಯವ ಮಾಡೆಲೊ ಸುಗುಣ ಶುಭಾಂಗ ಅಭಯ ನೀಡೆಲೊ ನಿರುತ ನೀಲಾಂಗ ದುರ್ಭವ ಕಡಿಯೆಲೊ ಭವಭಯಭಂಗ ಆಹ ತೊಡರು ಕಡೆಮಾಡಿ ಎನಗೆ ಮುಕ್ತಿ ನೀಡಿ ಸಲಹು ಎಂದು ಬೇಡುತ ಶ್ರೀರಾಮ 3
--------------
ರಾಮದಾಸರು