ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈತನೆ ಗತಿಯೆಂದು ನಂಬಿದೆನೆ ನಾ ನೀತನಂಥ ನಿಷ್ಕರುಣನ ಕಾಣೆ ಪಾತಕಹರ ಅ ನಾಥರಕ್ಷಕ ಮಹದಾತ ಪರಮಭಕ್ತ ಪ್ರೀತನೆಂಬುದ ಕೇಳಿ ಪ ಮರುಳಾಗಿವನ ಬೆನ್ಹತ್ತಿದೆನೆ ಮನೆ ಮಾರುಗಳೆಲ್ಲವ ತೊರೆದೆನೆ ಕರುಣವಿಲ್ಲ ತುಸು ಹೊರಳಿ ನೋಡುವಲ್ಲ ತಿರುತಿರುಗಿ ಮನಕರಗಿ ಸಾಕಾಯಿತು 1 ಜಾತಿಹೀನನೆಂಬುವೆನೇನೆ ಲೋಕ ನಾಥನಿಗೆ ಕುಲ ಅದೇನೆ ಈತನ ಹೊರ್ತು ಮತ್ತಾರಾಸೆನಗಿಲ್ಲ ನೀತಿಯೆ ಈತಗೆ ಜಾತಿಭೇದವೆಂಬ 2 ಹೊಲೆಯರ ಮನೆಯಲ್ಲುಂಡನೆ ಇವ ಗೊಲ್ಲರ ಕುಲದಲ್ಹುಟ್ಟಿದನೆ ಗೊಲ್ಲರ ನಲ್ಲೆಯರಲ್ಲಿ ಹೋಗಿ ಈತ ಗುಲ್ಲುಮಾಡಿ ಬೆಣ್ಣೆಗಳ್ಳನೆನಿಸಿಕೊಂಡ 3 ಪಾತರದವಳಲ್ಲಿಗ್ಹೋದನೆ ತಾ ನೀತಿವಂತನ ಕಟ್ಟೊಡ್ಹೆಸಿದನೆ ನೀತಿವಂತರು ಕೇಳಿರೀತನ ರೀತಿಯ ದಾತ ಜಗನ್ನಾಥ 4 ನಿಲ್ಲದು ಮನ ಘಳಿಗಿವನಲಿ ನಾ ಸಲ್ಲದ್ಹಾಂಗ್ಹೋದೆ ಮತ್ತೆಲ್ಲ್ಹೋಗಲಿ ಬಲ್ಲಿದ ಶ್ರೀರಾಮನೆಲ್ಲ್ಹೋದರು ಬಿಡೆ ಕಲ್ಲೆದೆಯವಗಾಗಿ ಪ್ರಾಣಹೋಗಲಿನ್ನು 5
--------------
ರಾಮದಾಸರು
ನಡತೆ ನನ್ನದು ಕೇಳಿರಯ್ಯ ಪ ಒಡೆಯ ವಲಿವ ಹ್ಯಾಗೆ ಪೇಳಿರಯ್ಯ ಅ.ಪ. ಒಡವೆ ತರದಿಹನೆಂದು ಕೋಪ ಮಡದಿನಟಿಸುತ ಹೆದರೀ ಒಡನೆ ಸ್ನಾನವ ಮಾಡಿತಂದು ಕೊಡುವ ಪ್ರಸನ್ನ ಗೈಯ್ಯಲವಳಾ ಆಹಾ ಒಡಿಯ ದೇವಗೆ ಹರಕೆ ನಡಿಸಬೇಕೆನ್ನಲು ಭೂರಿ ನೋಡುವೆನೆಂತೆಂಬೆ 1 ಒರಿಸೆ ಸಾಲಿಗ್ರಾಮ ಗೃಹದಿ ಅರಿವೆ ಹರಕು ಸಹ ಇಲ್ಲವೆನ್ನೇ ತರುವೆನೆನುತ ತಿಂಗಳಾರು ಕಾಲ ಬರಿದೇ ಆಹಾ ತರಲು ಸೂಳೆಗೆ ಸೀರೆ ಭರದಿ ಕೂಡಿಯೆ ಅವಳ ಪುರವ ಪೇಟೆಪೇಟೆಗಳೆಲ್ಲ ತಿರುಗಿ ತಿರುಗುವೆ ಮುದದೀ 2 ಹರಿಗೆ ದೀಪವ ಹಚ್ಚೆ ತೈಲ ಇರದು ತಾರೆನೆ ಹಡೆದ ತಾಯಿ ಬರಲಿ ಸಂಬಳ ತರುವೆ ಕೊಡುವಿ ಉರಿವ ಕಾಟವನೆಂದು ನುಡಿವೆ ಆಹಾ ಪರಮ ಸಂಭ್ರಮದಿಮದ ತಿಂಡಿ ಅಂಗಡಿಯಲಿ ಹರಕು ಜಿಹ್ವೆಂiÀi ಚಪಲ ಪೂರ್ಣಮಾಡುವೆ ನಿರುತ 3 ವೃತ್ತಪತ್ರಿಕೆಯಲ್ಲಿ ಹೆಸರು ಎತ್ತಿಹಾಕುವರೆನೆ ಒಡನೆ ವಿತ್ತದಾನವಗೈವೆ ಬರಿ ಉ- ನ್ಮತ್ತಕಾರ್ಯಕಾದರು ಸರಿಯೇ ಆಹಾ ಉತ್ತಮಭಕ್ತರು ಅರಸುತ್ತ ಬರ್ಪುದ ಕಂಡು ವತ್ತಿ ಬಾಗಿಲು ಕೊಂಡಿ ಸ್ವಸ್ಥವಿಲ್ಲೆಂಬೆ4 ಕಂಡು ಕರೆಯುತ ಭಾರಿ ಊಟ ತೊಂಡನಂದದಿ ನೀಡಿ ಮನದಿ ಉಂಡು ಹರುಷವ ನೆನೆವೆ ಧನ್ಯ\ ಆಹಾ ಕೆಂಡ ಬಿಸಿಲಲಿ ಬಡವ ಕಂಡು ಮಹಡಿಯ ಬರಲು ಪಿಂಡ ಪಿಡಿಯನು ಹಾಕೆ ತಂಡುಲವಿಲ್ಲೆಂಬೆ5 ದಾನಗೈದರು ಒಮ್ಮಿಂದೊಮ್ಮೆ ಮಾನಪಡೆಯಲು ಊರ ಒಳಗೆ ನಾನೆಂಬ ಹಂಕಾರ ಬಿಡದೆ ಶ್ರೀನಿಧಿ ಸ್ವಾಮಿತ್ವ ನೆನೆಯೆ ಆಹಾ ಸ್ವಾನುಭವ ಕಾಣದೆಲೆ ಜ್ಞಾನ ಭಾಸ್ಕರನಂತೆ ಪು- ರಾಣಪೇಳುತ ನನ್ನ ಸಮಾನ ವಿಲ್ಲಂತೆಂಬೆ6 ನೂರಿತ್ತು ಸಂಬಳ ಹಿಂದೆ ಮನದಿ ಊರಿತ್ತು ಹರಿಭಕ್ತಿ ಎಲ್ಲಿ ಈಗ ನೂರ್ಹತ್ತು ಕೊಟ್ಟರು ದೇವ ಬೆ- ನ್ಹತ್ತಿದೆ ತಾಪತ್ರಯ ಬಹಳ ಆಹಾ ಸಿರಿ ಕೃಷ್ಣವಿಠಲನೆ ದೃಷ್ಟಿ ವಾರುಗಾಣೆನು ಕಾಣೆನು ಸತ್ಯ ಪೊರೆಯೋ ಶರಣೆಂತೆಂಬೆ7
--------------
ಕೃಷ್ಣವಿಠಲದಾಸರು
ಬಿದ್ದ ಹುಣ್ಣು ಮಾಯವಲ್ಲದವ್ವಾ ಹ್ಯಾಂಗೆ ಸಹಿಸಲಸಾಧ್ಯ ಬೇನೆ ನಿದ್ರೆ ಬರದವ್ವಾ ಪ ಬಿದ್ದ ಹುಣ್ಣು ಮಾಯವಲ್ಲದು ಮುದ್ದು ಮುಖ ನಿನ್ನಪಾದ ಪದ್ಮಕೆ ಬಿದ್ದು ಬೇಡುವೆ ಸದ್ದು ಮಾಡದೆ ಅಬ್ದಿಶಯನನೆಂಬ್ವೈದ್ಯನ್ನ್ಹಿಡಿತಾ ಅ.ಪ ಮುತ್ಯ ಅಜ್ಜರನಳೀತು ಯೀ ಹುಣ್ಣು ಮತ್ತು ಎನ್ನ ಹೆತ್ತ ತಾತ ಮಾತಾ ಪಿತರನು ಹತ್ತಿಕೊಂಡು ಭ್ರಾತೃ ಬಂಧುವನು ಗೊತ್ತಿಗ್ಹಚ್ಚಿತು ಎತ್ತಪೋದರೊ ಪತ್ತೆಗಾಣೆನು ಅತ್ತು ಅತ್ತು ಇದರ ಬೇನೆಗೆ ಸತ್ತು ಸತ್ತು ಹೋದರೆಲ್ಲರು ಪುತ್ರ ಮಿತ್ರ ಕÀ ಳತ್ರರೆಲ್ಲರ ವ್ಯರ್ಥಕೊಲ್ಲಿ ಬೆನ್ಹತ್ತಿದೆನ್ನಗೆ 1 ಎಷ್ಟು ಬಂಧುಬಳಗವನೀ ಹುಣ್ಣು ನುಂಗಿಬಿಟ್ಟಿದೆ ಇಷ್ಟು ಖೂನಕ್ಕುಳಿಸಿಲ್ಲೋರ್ವರನು ಶಿಷ್ಟಜನರಿಗೆ ಮೃತ್ಯು ಕಾಣ್ಹುಣ್ಣು ಬಿಟ್ಟಿಲ್ಲಾರನು ಎಷ್ಟು ಪೇಳಲಿ ನಷ್ಟಸುದ್ದಿಯನು ದುಷ್ಟಶಿಷ್ಟರೆಂಬರೆಲ್ಲರ ಕಟ್ಟಿ ಮುರಿದು ಮುಟ್ಟಿಗಿಯಮಾಡಿ ಮೊಟ್ಟೆಕಟ್ಟಿ ಕೊಟ್ಟು ಮೃತ್ವಿಗೆ ಕಟ್ಟಕಡಿಗೆ ಬೆನ್ನಟ್ಟಿದೆನಗೆ 2 ಕುಂತೆನೆಂದರೆ ಕುಂದ್ರಗೊಡದಮ್ಮ ಸಂತಜನರೊಳು ನಿಂತೆನೆಂದರೆ ನಿಂದ್ರ ಗೊಡದಮ್ಮ ಸಂತಸೆಂಬುದು ಇನಿತು ಇಲ್ಲಮ್ಮ ಅಂತರಂಗದಿ ನಿಂತು ಸುಡುವುದು ತಾಳಲೆಂತಮ್ಮ ಅಂತ:ಕರಣದಿ ಪೋಗಿ ಎನ್ನಯ ಅಂತ್ಯಕ್ವೈದ್ಯನಾದಂಥ ಪ್ರಾಣದ ಕಾಂತ ಶ್ರೀರಾಮನನ್ನು ಕರೆತಂದು ಕಾಂತೆ ಈ ಹುಣ್ಣು ಮಾಯ್ಸೆ ಬೇಗನೆ 3
--------------
ರಾಮದಾಸರು