ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೈತ್ಯರಲ್ಲೆ ದುರ್ಜನ ಸೇವೆ ಪ ಪರರ ಲಾಭವನು ಧರಿಯೊಳು ನೋಡುತ | ಧರಿಸಲಾರ ಧಿಕ್ಕರಿಸುತ ನುಡಿವನು | ಪರರ ಹಾನಿಯಲಿ ಮರುಗದೆ ಮನದೊಳು | ಹರುಷ ಬಡವುತ ಚರಿಸು-ನೈಯ್ಯಾ 1 ಖಳ್ಳೆದೆಯೊಳು ಮನದಲ್ಲಿ ಕಪಟವು | ಸೊಲ್ಲಿತೆ ನೋಡಲು ಬೆಲ್ಲನೆ ಬೀರುವಾ | ಒಳ್ಳಿತು ಗುಣಗಳ ಯಳ್ಳಿಲಿ ನಿತೈಣಿಸದೆ | ಕ್ಷುಲ್ಲತನದಿ ಕುಂದಲ್ಲಿಡುವ-ಕೈಯ್ಯಾ 2 ಸತಿ | ಎನ್ನ ಮಗÀನೆ ಮಗ ಯನ್ನ ಗುಣವೇಗುಣ | ತನ್ನನೆ ಹೊಗಳುತ ಅನ್ಯಕ್ಹಳಿವರೆ 3 ಆವದು ಅರಿಯದ ಭಾವಿಕ ಜನರನು | ತಾವೀಗ ಕಂಡರೆ ಆವನನುಗ್ರಹ | ಆವ ಮಂತ್ರ ನಿನಗಾವ ನ್ಯಾಸವೇ | ದಾವಾಗ ಛಲಣಿಯ ಭಾವಿಪರವರೇ 4 ತಂದೆ ಮಹಿಪತಿ ನಂದನ ಪ್ರಭುವಿನಾ | ಒಂದರಗಳಿಗೆಯ ಛಂದದಿ ಸ್ಮರಿಸದೆ | ನಿಂದೆಯ ಮನೆಯೊಳು ಸಂದಿಸಿ ಅನುದಿನಾ | ಮಂದ ಮತಿಯರೇ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿನಗೆ ನೀನೇ ಕೃಷ್ಣ ದಯಮಾಡಿ ಸಲಹೋಎನಗೊಂದು ಸಾಧನ ಲೇಶ ಕಾಣಬರದೋ ಪ ಸ್ನಾನವ ಮಾಡಿ ನಿನ್ನ ಸಮತಿಸುವೆನೆಂದರೆಸ್ನಾನ ಮಾಡದೆ ಕಪ್ಪೆ ಸರ್ವಕಾಲದಲೀಧ್ಯಾನವ ಮಾಡಿ ನಿನ್ನ ಸಮತಿಸುವೆನೆಂದರೆಧ್ಯಾನವ ಬಕ ಸರ್ವಕಾಲದಲೀ 1 ಉರಗ ಸರ್ವ ಕಾಲದಲೀ 2 ಸನ್ಯಾಸವೇ ನಿನ್ನ ಸಾಧನವೆಂದರೆಸನ್ಯಾಸವಿರದೇ ಆ ರಾವಣಗೇಕನ್ಯಾದಾನವೆ ನಿನ್ನಾ ಸಾಧನವೆಂದರೆಕನ್ಯಾದಾನ ಮಾಡಾನೆ ಕಂಸಗೆ ಜರಾಸಂಧ3 ದುರುಳ ದುರ್ಯೋಧನಗೆ 4 ಬಂಧುತ್ವವೇ ನಿನ್ನ ಸಾಧನವೆಂದರೆಬಂಧುತ್ವವಿರದೇ ಆ ಶಿಶುಪಾಲಗೆಒಂದೂ ಸಾಧನ ಕಾಣೇ ಉಚಿತಾವೇ ಶ್ರೀಕೃಷ್ಣಎಂದೆಂದಿಗೂ ನಿನ್ನ ದಾಸನೆನಿಸೊ 5
--------------
ವ್ಯಾಸರಾಯರು
ಹರಿಯ ನೆನೆಯದ - ನರಜನ್ಮವೇಕೆ ? ಶ್ರೀಹರಿಯ ಕೊಂಡಾಡದ ನಾಲಿಗೆಯಿನ್ನೇಕೆ ಪ.ಸತ್ಯ - ಶೌಚವಿಲ್ಲದ ಆಚಾರವೇಕೆ ?ಚಿತ್ತ ಶುದ್ಧಿಯಿಲ್ಲದ ಜ್ಞಾನವೇಕೆ ?ಭಕ್ತಿ - ಭಾನವಿಲ್ಲದ ದೇವಪೂಜೆ ಏಕೆ ?ಉತ್ತಮರಿಲ್ಲದ ಸಭೆಯು ಇನ್ನೇಕೆ ? 1ಕ್ರೋಧವ ಬಿಡದಿಹ ಸಂನ್ಯಾಸವೇಕೆ ?ಆದರವಿಲ್ಲದ ಅಮೃತಾನ್ನವೇಕೆ ?||ವೇದ - ಶಾಸ್ತ್ರವಿಲ್ಲದ ವಿಪ್ರತನವೇಕೆಕಾದಲಂಜುವನಿಗೆ ಕ್ಷಾತ್ರ ತಾನೇಕೆ ? 2ಸಾಲದಟ್ಟುಳಿಯೆಂಬ ಸಂಸಾರವೇಕೆ ?ಬಾಲಕರಿಲ್ಲದ ಭಾಗ್ಯವಿನ್ನೇಕೆ ?ವೇಳೆಗೆ ಒದಗದ ನೆಂಟರಿನ್ನೇಕೆ ? ಅನುಕೂಲವಿಲ್ಲದ - ಸತಿಯ ಸಂಗವೇಕೆ 3ಮಾತೆ - ಪಿತರ ತೊರೆದ ಮಕ್ಕಳಿನ್ನೇಕೆ ?ಮಾತು ಕೇಳದ ಮಗನಗೊಡವೆ ಇನ್ನೇಕೆ ||ನೀತಿ ತಪ್ಪಿದ ದೊರೆಯ ಸೇವೆ ಇನ್ನೇಕೆ ? ಅನಾಥನಾಗಿರುವಗೆ ಕೋಪವಿನ್ನೇಕೆ ? 4ಅಳಿದುಳಿದಿಹ ಮಕ್ಕಳುಗಳಿನ್ನೇಕೆ ?ತಿಳಿದು ಬುಧ್ಧಿಯ ಹೇಳಿದ ಗುರುತನವೇಕೆ ?ನಳಿನನಾಭ ಶ್ರೀ ಪುರಂದರವಿಠಲನಚೆಲುವ ಮೂರುತಿಯ ಕಾಣದ ಕಂಗಳೇಕೆ 5
--------------
ಪುರಂದರದಾಸರು