ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯ ಜಯ ವೈಷ್ಣವ ಪಯನಿಧಿ ಚಂದ್ರಗೆ ಜಯ ಜಯ ವ್ಯಾಸಯತೀಂದ್ರರಿಗೆ ಪ ಜಯ ಜಯ ವರ ಕರ್ಣಾಟಕ ಪತಿಗೆ ಜಯ ಸಿಂಹಾಸನವೇರಿದಗೆ ಅ.ಪ ನಾಕು ಶಾಸ್ತ್ರಗಳ ಪಾರಂಗತರಿಗೆ ಕಾಕುಮತಗಳನು ತುಳಿದವಗೆ ಆ ಕಮಲಾಪತಿ ಭಕುತವರೇಣ್ಯಗೆ ಶ್ರೀಕರ ಚಂದ್ರಿಕಾಚಾರ್ಯರಿಗೆ 1 ಹನುಮನ ಭಾಷ್ಯವ ಅಣಿಮಾಡಿದಗೆ ಹನುಮಗೆ ಭವನಗಳನು ಕಟ್ಟಿದಗೆ ಹನುಮನ ಯಂತ್ರದಿ ಬಿಗಿದಪ್ಪಿದಗೆ ಮುನಿತ್ರಯದಲಿ ಸೇರಿದ ದೊರೆಗೆ 2 ಮಾಯಾವಾದಗಳನು ಗೆಲಿದವಗೆ ನ್ಯಾಯಾಮೃತಧಾರೆಯ ಅಭಿಷೇಕದಿ ಆ ಯದುಪತಿಯನು ಕುಣಿಸಿದಗೆ 3 ಚಕ್ರಧರನ ಸುಳುಗಳ ತಿಳಿದವಗೆ ಮಿಕ್ಕಮತಗಳನು ಅಳಿದವಗೆ ವಕ್ರಯುಕುತಿಗಳನು ತುಕ್ಕುಡಗೈಯ್ಯವ ತರ್ಕ ತಾಂಡವದಿ ನಲಿದವಗೆ 4 ಕೃಷ್ಣದೇವರಾಯನ ಕುಲಪತಿಗೆ ಕಷ್ಟದ ಕುಹಯೋಗವ ಕೊಂದವಗೆ ಶಿಷ್ಟಜನಗಳಿಗೆ ಇಷ್ಟಾರ್ಥಗಳನು ವೃಷ್ಟಿಯಗೈವ ಪ್ರಸನ್ನರಿಗೆ 5
--------------
ವಿದ್ಯಾಪ್ರಸನ್ನತೀರ್ಥರು