ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಸಳುಗಂಗಳ ಕಾಂತಿ ಹೊಳೆವ ಮುಖದ ಢಾಳಶಶಿಮುಖಿ ಚೆಲುವಿಕೆಯ ಪ ಕುಸುಮನಾಭನ ಕೂಡೆನೆಂಬೋ ಭರದಿಂದಬಿಸಿ ಹಾಲನೆ ಹೊತ್ತಳು ಅ ಮಾನಿನಿ ರನ್ನೆಕೇಳೀದ್ದು ಕೊಡುವೆನೆಂದ 1 ಕಮ್ಮನೆ ಕಾದಿಹ ಎಮ್ಮೆಯ ಹಾಲಿಗೆಒಮ್ಮನ ಹೊನ್ನೆಂದಳುಬೆಣ್ಣೆಗಳ್ಳ ಕೃಷ್ಣ ಕಣ್ಣು ಸನ್ನೆಯ ಮಾಡಿನಿನ್ನ ಮೋಹಿಪೆನೆನ್ನಲು 2 ಕೆಟ್ಟೆ ಕೆಟ್ಟೆನೊ ಕೃಷ್ಣ ಇತ್ತಲೇತಕೆ ಬಂದೆಅತ್ತೆ ಮಾವಂದಿರುಂಟುಥಟ್ಟನೆ ಕಂಡರೆ ಬಿಟ್ಟು ಬಿಡರು ನಿನ್ನಮುಟ್ಟದಿರೆಂದಳಾಕೆ3 ಎಂದ ಮಾತಿಗೆ ನಾನಂಜುವನಲ್ಲವೆಇಂದಿನ ದಿನದೊಳಗೆಮಂದಿರದೊಳಗಿದ್ದು ಮರುದಿನ ಪೋಗೆಂದುಮುಂಗೈಯ ಪಿಡಿದುಕೊಂಡ4 ಗಂಡನುಳ್ಳವಳ ಮುಂಗೈಯ ಪಿಡಿವಂಥಪುಂಡುತನವು ಸರಿಯೆಪುಂಡರೀಕಾಕ್ಷಿ ಕೇಳ್ ದುಂಡುಮಲ್ಲಿಗೆ ಹುವ್ವಕಂಡರೆ ಬಿಡುವರೇನೆ 5 ಬಾಳುವ ಹೆಣ್ಣಿನ ತೋಳನೆ ಪಿಡಿವುದುನ್ಯಾಯವೇನೋ ನಿನಗೆಫುಲ್ಲನಯನೆ ಕೇಳೆ ಆಯ್ದ ಮಲ್ಲಿಗೆ ಹುವ್ವಬಲ್ಲವರು ಬಿಡುವರೇನೆ6 ಬೈಗಾಯಿತು ಬೈದಾರು ಮನೆಯಲ್ಲಿಬಿಡು ಬಿಡು ಎಲೊ ಗೋವಳಐಗಾರ ನಾ ಕಾಣೆ ಜಗದಲ್ಲಿ ಜೀವರಹಿಡಿದು ಬಿಡುವನಲ್ಲವೆ 7 ಸಕ್ಕರೆ ಚಿಲಿಪಾಲು ಅರ್ಥಿ ಆಯಿತೆಂದುಎತ್ತಿಕೊಂಡು ಕುಡಿದಅಕ್ಕರೆಯಿಂದಲಿ ಬೇಡು ನೀ ಕೇಳಿದವಸ್ತುವ ಕೊಡುವೆನೆಂದ8 ವಸ್ತುವೇತಕೆ ಪರವಸ್ತುವೆ ನಾ ನಿನ್ನಮೆಚ್ಚಿ ಬಂದೇನೆಂದಳುಭಕ್ತರ ಸಿರಿಕೃಷ್ಣ ಕುಕ್ಷಿಯೊಳಗೆ ಇಟ್ಟುರಕ್ಷಿಸು ಎಂದಳಾಕೆ 9
--------------
ವ್ಯಾಸರಾಯರು
ನ್ಯಾಯ ವೇನೋ ಕೃಷ್ಣಯ್ಯ _ ನ್ಯಾಯವೇನೋ ಪ ಜೀಯ ನಿನ್ನ ಸ್ಮರಣೆ ಕೊಡದೆ ಎರಡು ಭ್ರಷ್ಟ ಮಾಡಿಸೊದು ಅ.ಪ. ಇತ್ತಲಿಲ್ಲ ಅತ್ತಲಿಲ್ಲ ಅರ್ಥಮಾನ ಹೋಯಿತಲ್ಲಾ ಕಾಲ ಕಳೆಸಿ ಸುತ್ತಿ ಸುತ್ತಿ ಚರಿಸೋದು 1 ಹೊಟ್ಟೆಬಟ್ಟೆಗಾಗಿ ಹೊಗಿ ಕೆಟ್ಟ ಜನರ ಸೇವೆ ಮಾಡಿ ಕಾಯ ಭ್ರಷ್ಟನಾಗಿ ಮಾಡೋದೆನ್ನ 2 ಮಾಯಪಾಶದಲ್ಲಿ ಹಾಕಿ ಹೇಯ ವಿಷಯ ಆಶೆಕೊಟ್ಟು ನ್ಯಾಯ ಮಾರ್ಗ ತೋರದೇನೆ ನೋಯಿಸೋದು ಎನ್ನನೀನು 3 ಮೋಸಮಾಡಿ ಪರರಗಂಟು ಆಶೆಯಿಂದ ಕೂಡಿಹಾಕಿ ಘಾಸಿಭವದಲಿ ನೂಕಿ ಕ್ಲೇಶಪಡಿಸುವುದು ಎನ್ನ 4 ಇಂದು ಎಂದು ಹೇಳಿ ಮಂದನಾಗಿ ಕಾಲಕಳೆಸಿ ಪಾದ ದ್ವಂದ್ವ ಧ್ಯಾನ ಮರೆಸೋದು 5 ಮಧ್ವಮತದಲ್ಲಿ ಪುಟ್ಟಿ ಮಧ್ವಗ್ರಂಥ ಓದದೇನೆ ಶುದ್ಧಮೂಢನಾಗಿ ತಿರುಗಿ ಗದ್ದನೆನಿಸುವುದು ಎನ್ನ6 ಇನ್ನು ಮುನ್ನು ನೀನೆ ಗತಿ ಎನ್ನ ಕೈ ಪಿಡಿಯೊ ಬೇಗ ಘನ್ನ ನವನೀತಧರ ಚೆನ್ನ ಶ್ರೀ ತಾಂಡವ ಕೃಷ್ಣವಿಠಲ 7
--------------
ಕೃಷ್ಣವಿಠಲದಾಸರು