ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೈ ಮುಗಿದು ಬೇಡುವೆನು ಕೈಲಾಸವಾಸಾ ||ವಹಿಲದಲಿ ಸಲಹೆನ್ನ ಈಶ ಗಿರಿಜೇಶಾ ಪಅಷ್ಟ ಭಾಗ್ಯವು ನೀನೆ | ಇಷ್ಟಮಿತ್ರನು ನೀನೆ |ಹುಟ್ಟಿಸಿದ ತಾಯ್ತಂದೆ |ವಿದ್ಯೆಗುರುನೀನೆ |ಸೃಷ್ಟಿ ಮೂರಕೆ ನೀನೆ ಅಧ್ಯಕ್ಷನೆನಿಸಿರುವೆ |ರಕ್ಷಿಸೆನ್ನನು ಜಟಾಜೂಟ ನಿಟಿಲಾಕ್ಷ 1ಮಾಯಾಪಾಶದಿ ಸಿಕ್ಕಿ |ಕಾಯಸುಖವನು ಬಯಸಿ |ಆಯತಪ್ಪಿದೆ ಮುಂದುಪಾಯವೇನಿದಕೆ |ಜೀಯನೀನೆಂದೆಂಬ | ನ್ಯಾಯವರಿಯದೆ ಕೆಟ್ಟೆ |ಕಾಯೊ ದಯದಲಿ ಮೃತ್ಯು | ಬಾಯಿಗೊಪ್ಪಿಸದೆ 2ಘೋರತರ ಸಂಸಾರ ಸಾಗರದಿ ಮುಳುಮುಳುಗಿ |ಕ್ರೂರ ನಕ್ರನ ಬಾಯಿಗಾಹಾರವಾದೆ |ದಾರಿಕಾಣದೆ ಬಳಲಿ ಮಾರಹರ ನಿನ್ನಂಘ್ರಿ |ಸೇರಿದೆನು ಗೋವಿಂದದಾಸನನು ಸಲಹೋ 3
--------------
ಗೋವಿಂದದಾಸ