ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಲಿಸೆನ್ನೆ ಜೀವರೋತ್ತಮ ಪ ರಾಮದೂತನೆನಿಸಿಕೊಂಡ್ಯೋ ನೀ ರಾಕ್ಷಸರ ವನವನೆಲ್ಲ ಕೆಡಿಸಿ ಬಂದ್ಯೋ ನೀ ಭೂಮಿಪುತ್ರಿಗೆ ಮುದ್ರೆಯಿತ್ತು ಜಗತ್ತಿಗೆಲ್ಲ ಹರುಷವಿತ್ತು ಪ್ರಖ್ಯಾತನಾದ್ಯೋ ನೀ 1 ಗೋಪಿಸುತನ ಪಾದಪೂಜಿಸಿ ಗದೆಯ ಧರಿಸಿ ಕೌರವಕುಲವ ಸವರಿದ್ಯೋ ನೀ ದ್ರೌಪದಿಯ ಮೊರೆಯ ಕೇಳಿ ಕಷ್ಟವೆಲ್ಲ ಬಿಡಿಸಿ ಭೀಮರೂಪನೆನಿಸಿದ್ಯೋ ನೀ 2 ಮದ್ಯಗೇಹದಲ್ಲಿ ಜನಿಸಿ ಬಾಲ್ಯತನದ ಮಷ್ಕರಿಯ ರೂಪಗೊಂಡ್ಯೋ ನೀ ವೇದ ವಿಠಲವ್ಯಾಸದಾಸನಾಗಿ ಭಾಷ್ಯವನೋದಿ ಸನ್ಮುದದಿಂದ ಸಂತೆಬಿದನೂರಿನಲ್ಲಿ ನಿಂತ್ಯೋ ನೀ 3
--------------
ಬಡಣ್ಣಯ್ಯಾಚಾರ್ಯರು
ಕಂಡೆ ನಾ ಬ್ರಹ್ಮಾಂಡಯೊಡೆಯ ಶ್ರೀ ವೆಂಕಟೇಶನ ಪ ಕಂಡೆ ನಾ ಭಕುತರ ಹಿಂಡುಗಳು ನೆರೆ ಕೊಂಡಾಡುತಲಿದೆ ಪದಪುಂಡರೀಕವ ನಾ ಅ.ಪ ತುಂಗ ಮಹಿಮ ಸತ್ಸಂಗವಿತ್ತು ಮನದಂತರ ವರಿ- ತಾಂಗೀರಸದೀ ಮಂಗಳ ಪೌರ್ಣಿಮೆಭಾರ್ಗವವಾಸರದಿ ಭಾರ್ಗವಿಪತಿ ನಿನ್ನನು ಗ್ರಹದಿ ನಗದೊಡೆಯ ಭಕ್ತ- ರಘಹರಿಸುತ ಪನ್ನಗಗಿರಿಯೊಡೆಯ ನಿನ್ನಯ ಗುಡಿಯನ್ನು ಬಗೆ ಬಗೆ ಸುತ್ತಿಪರ ಹಿಂಡನ್ನು ನಾ ಕಂಡೆನೋ ಜಾಗು ಮಾಡದೆ ಬಾಯಿಬೀಗವ ಕೈಕೊಂಡು ಸಾಗಿ ಕಾಸಾರದಿ ಸ್ನಾನ ಮಾಡಿಕೊಂಡು ಬಾಗಿ ವರಾಹದೇವರ ವಂದಿಸಿ ಬೇಗದಿ ಹರಕೆ ಕೈಕೊಂಡಿಹ ದೇವನ 1 ಮುಕ್ತರೊಡೆಯ ಪುರುಷೋತ್ತಮ ನಿನ್ನಯ ಭಕ್ತರ ವಿಪತ್ತುಗಳೆಲ್ಲ ಹರಿಸಿಶಕ್ತ್ಯಾನುಸಾರ ತ್ವ- ದ್ಭಕ್ತರೆಸಗುವ ಅತ್ಯಲ್ಪಭಕ್ತಿಯ ಸ್ವೀಕರಿಸಿ ಭಕ್ತಿಯಿಂದ ಪ್ರಾಕಾರದಿ ಸುತ್ತಲು ಹೊತ್ತಗಂಡದೀಪಸಾರುತಲಿ ನಿತ್ಯನೂತನ ನಿನ್ನ ಸ್ತುತಿಸುತಲೀ ಮತ್ತೆ ಉರುಳುತಲೀ ಉತ್ತಮಗತಿಪ್ರದ ವ್ಯಕ್ತನಹುದೊ ತ್ವ- ದ್ಭಕ್ತರ ಮನೋರಥ ಪೂರ್ತಿಮಾಡುವ ಭಕ್ತವತ್ಸಲನೆಂಬ ಬಿರುದು ಪೊತ್ತ ಸ- ರ್ವೋತ್ತಮ ಶ್ರೀ ಪುರುಷೋತ್ತಮ ನಿನ್ನನು2 ಬೊಮ್ಮಜನಕ ಪರಬೊಮ್ಮನೆ ನಿನ್ನಯ ಸನ್ಮಹಿಮೆಯ ನಾ ಒಮ್ಮನದೀ ಒಮ್ಮೆಯಾದರು ಮನ್ಮನದಲಿ ನಿನ್ನಯ ಸನ್ಮಂಗಳರೂಪವ ನಿಲ್ಲಿಸದೆ ಸುಮ್ಮನೆಕುಳಿತು ಇಮ್ಮನನಾಗಿರೆ ಘಮ್ಮನೆ ಎನ್ನನು ಒಳಕ್ವೈದೆ ಕಣ್ಮನದೆದುರಲಿ ನೀ ನಿಂದೆ ನೀನೆನ್ನಯ ತಂದೆ ಸನ್ಮುದದಿಂದೆ ಪಾಮರನೆಂದೆನ್ನ ಪ್ರೇಮದಿ ಕರುಣಿಸಿ ಸನ್ಮಹಿಮೆಯ ತೋರ್ದೆ ಜಗದೀಶ ಕಾಮಿತಜನರ ಕಲ್ಪದ್ರುಮ ನೀನೆಲೊ ಈ ಮೇಲುಗಿರೀಶ ಶ್ರೀ ವೆಂಕಟೇಶಾ ನಿನ್ನ3
--------------
ಉರಗಾದ್ರಿವಾಸವಿಠಲದಾಸರು
ಚೋದ್ಯ ಚೋದ್ಯ ಸರ್ವದ ವೇದ ವೇದ್ಯ ನಂಬಿದ ಭಕ್ತ ಜನರಿಗಾಗುವ ಸುಖಸಾಧ್ಯ ಪ. ಶ್ರೀ ಮಹೀಶ ಸತ್ಯಭಾಮೆಯರರಸ ಸು- ಧಾಮ ತಂದವಲಕ್ಕಿ ಪ್ರೇಮದಿಂದಲಿ ಮೆದ್ದ 1 ಅಂಡಜವಾಹ ಬ್ರಹ್ಮಾಂಡಗಣಾತತ ಪಾಂಡುಕುವರನಿಗಾದನು ಭಂಡಿಸೂತ 2 ಆದರೀ ಕೃತಮಾಯ ಕೃತ್ಯಕದಂಡ ಸ- ನ್ಮುದದಿಂದ ವಿದುರನ ಮನೆಯ ಪಾಲುಂಡ 3 ಶ್ರೀವರೀವರಿಯಿಂದ ಸರಸಮಾಡುತಲಿರೆ ಗೋಪಿಯರಿಗೆ ಮೆಚ್ಚಿ ಗೋವುಗಳ ಕಾಯ್ದ 4 ಗೊಲ್ಲರ ಹುಡುಗರ ಪೆಗಲೇರಿ ಮೆರೆದ 5 ಘೋರ ಸಂಸಾರಪಹಾರಿ ನಾರದ ವಂದ್ಯ ಜಾರ ಚೋರ ಕೃತ್ಯ ತೋರಿದ ವರದ 6 ಮಾನವ ದೈತ್ಯ ಗಣರಿಗಾಧಾರ ಮ- ತ್ತಾವ ಕಾಲಕು ಭೇದಭೇದವ ಸೇರಾ 7 ತೇಜಸ್ತಿಮಿರಾದಿ ಸೋಜಿಗ ಶಕ್ತಿಮ- ಹೋಜಸನೀತ ಪರಾಜಯ ರಹಿತಾ 8 ಪರದೇಶಿಯ ಮೇಲೆ ಕರುಣ ಕಟಾಕ್ಷದಿ ಸಿರಿಯೊಡಗೂಡಿ ಬಂದಿರುವ ಶೃಂಗಾರ 9 ಸರ್ವಕಾಲದಿ ತನ್ನ ನೆನವಿತ್ತು ದುಷ್ಕøತ ಪರ್ವತಗಳ ಪುಡಿ ಮಾಡುವ ಧೀರ 10 ತನಯನ ಕಲಭಾಷೆ ಜನನಿ ಲಾಲಿಸುವಂತೆ ಸಾರ 11 ಪೋರಭಾವವ ಶುಭವೇರಿಸುವನು ತುಷ ವಾರಿಯು ಗಂಗೆಯ ಸೇರುವಾಕಾರ 12 ವಿದ್ಯ ಬುದ್ಧಿಗಳಿಲ್ಲದಿದ್ದರು ದಾಸರ ನಿರವದ್ಯ ಬೇಗದಲಿ 13 ಸನ್ನುತ ಕರ್ಮವ ಮನ್ನಿಸನೆಂದಿಗು ಮುರನರಕಾರಿ 14 ಚಿಂತಾಕ್ರಾಂತಿಗಳಿರದಂತೆ ಸರ್ವದ ನಿ- ರಂತರ ಪೂಜೆಗೊಂಬರ ಚಕ್ರಧಾರಿ 15 ನಿರುಪಮಾನಂದ ನಿರ್ಭರ ಪುಣ್ಯಮೂರ್ತಿ ಶ್ರೀವರ ಶೇಷ ಭೂಧರವರನ ಸತ್ಕೀರ್ತಿ 16
--------------
ತುಪಾಕಿ ವೆಂಕಟರಮಣಾಚಾರ್ಯ