ಸಂಸಾರದೊಳ್ ಪ
ನಾನುನನ್ನದೆಂದು ವೃಥಾ ನರಳಿಬಳಲುವೆ ಅ.ಪ
ತಂದೆ ತಾಯಿಯು ಬಂಧು ಬಳಗವು ಸಂ
ಬಂಧಿಗಳೆಲ್ಲರು ಸತಿಸುತರೂ
ಎಂದಿಗು ರಕ್ಷಕರೆಂದು ನೀ ತಿಳಿದು
ಮಂದಮತಿಯೆ ಮುಂದೇ ಕೆಡುವೆಯೊ 1
ದುರ್ವಿದಗ್ಧ ವಿಜ್ಞಾನನಾಗಿ
ಗರ್ವಪಡಲೂ ಸುಪರ್ವರ್ ನಗರೇ 2
ಸತ್ಯವೆಂಬುವದು ಮಾತೃ ಪಿತನು ಸ-
ರ್ವೋತ್ತಮ ಜ್ಞಾನವು ಭೂತದಯೆಯು ಸ-
ನ್ಮಿತ್ರಧರ್ಮವು ಭ್ರಾತೃಗಳ್ ಶಾಂತಿಯು
ಪತ್ನೀ ಕ್ಷಮೆಯೂ ಪುತ್ರರ್ ನಿತ್ಯರಿವರು 3
ನಡೆವುದು ಯಾತ್ರೆಯು ನುಡಿವುದು ಮಂತ್ರ
ನಡೆಸುವನು ಎಂದು ಧೃಡವಾಗಿ ನಂಬದೆ4
ಧ್ಯಾನನದೀಯೊಳು ಸ್ನಾನಮಾಡಿಸು-
ಶ್ರೀನಿವಾಸನ ಸೇವೆಯಿದೆನ್ನದೆ 5
ಮೂರು ವಿಧವಾದ ಜೀವ ಕೋಟಿಯೊ-
ಳಾರು ನಾನೆಂದು ದೂರದೃಷ್ಟಿಯಿಂ
ಧೀರ ನಾಗಿದರ ಪರವ ಗಾಣದೆ 6
ನೀಮನವಲಿದು ವ್ಯರ್ಥನಾದೆ
ನಾಮಾ ಜಪಿಸೀ ಕಾಮಿತ ಪಡಿಯದೆ 7