ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉದ್ಧಾರ ಮಾಡಯ್ಯ ಉಡುಪಿ ನಿಲಯ ಹೃದ್ವನಜದಲಿ ನೆಲಸಿ ಅನುಗಾಲ ನಿನ ತೋರಿ ಪ. ಬಂದೆ ಬಹುದೂರದಲಿ ನಿಂದೆ ತವಚರಣದಡಿ ತಂದೆ ಮುದ್ದುಮೋಹನ ಗುರುಕರುಣದಿಂದ ಕುಂದುಗಳನೆಣಿಸದೆಲೆ ಸಿಂಧುಶಯನನೆ ಹೃದಯ ಮಂದಿರದಿ ಮನೆ ಮಾಡು ಸುಂದರಾತ್ಮನೇ 1 ಜನ್ಮಜನ್ಮಾಂತರದ ಅಜ್ಞಾನಗಳ ಕಳೆದು ಕರ್ಮಸಾಸಿರ ಕಡಿದು ಕರುಣದಿಂದ ರಮೆಯರಸನೆ ನಿನ್ನ ಅನುಗಾಲ ಸ್ಮರಿಪಂಥ ಸನ್ಮಾರ್ಗವನೆ ತೋರೊ ಸರ್ವಲೋಕೇಶ 2 ಜಪತಪಗಳೊಂದರಿಯೆ ವ್ರತ ನೇಮಗಳ ಕಾಣೆ ಉಪವಾಸದುಪಟಳವು ಗತಿ ತೋರದೆನಗೆ ಗುಪಿತಮಾರ್ಗದಿ ನಿನ್ನ ನಾಮಾಮೃತವನುಣಿಸಿ ಅಪಹಾಸಗೊಳಿಸದಲೆ ಆದರಿಸೊ ಜೀಯ 3 ಬೇಡಲೇನನು ನಿನ್ನ ಕಾಡಲೇತಕೆ ನಾನು ದಾತ ನೀ ಸರ್ವಜ್ಞನಿರಲು ಮಾಡುವೆನು ಸಾಷ್ಟಾಂಗ ಬೇಡುವೆನು ಪದದಾಸ್ಯ ನೋಡು ಕರುಣಾದೃಷ್ಟಿಯಿಂದೆನ್ನ ಕಡೆಗೆ 4 ಅಂತರಂಗದಲಿಪ್ಪ ಸರ್ವಾಂತರಾತ್ಮಕನೆ ಚಿಂತನೆಗೆ ನೆಲೆತೋರು ಚಿನ್ಮಯಾತ್ಮಕನೆ ಕಂತುಪಿತ ಗೋಪಾಲಕೃಷ್ಣವಿಠ್ಠಲನೆ ಸಿರಿ ಕಾಂತ ಕಾಪಾಡು ಕಡು ಕರುಣಿ ಮಧ್ವೇಶ 5
--------------
ಅಂಬಾಬಾಯಿ
ದಯ ಮಾಡೊ ಪ್ರೀಯಾ ದಾಸರ ಶುಭೋ-ದಯ ವಿಜಯರಾಯ ಸಾ |ಹಯವಾಗಿ ಒದಗುವೋಭಯ ನಿವಾರಣ ಮಾಡಿ ಪ ಪ್ರಬಲವಾಗಿಹ ಮೋಹ ನಿಬಿಡವಾದದರಿಂದಅಭಯದಾಯಕ ನಿನ್ನ ಶುಭವಾದ ಪಾದಕ್ಕೆಅಭಿವಂದಿಸದಲೆ ಅಲ್ಪರ ಸೇರಿಅಬಲನಾಗುತಲೆ ಪಾಪದ ವನಧಿUಭೀರ ನೋಡದಲೆ ಬಾಳಿದೆ ಯನ್ನಅಭಿಮಾನದೊಡೆಯನೆ ಅಗಡು ಮಾಡದಲೆ 1 ದುರಿತ ಪರಿ ವರಗಳ ಗರೆವ ಕಾರಣ ನಿನ್ನಬಿರಿದು ನಾ ಬಲ್ಲೆ ಎನ್ನಯ ಭಾರಸರಿ ನಿನ್ನದಲ್ಲೆ ಲೌಕೀಕದಪರಿ ಮತ್ತೊಂದೊಲ್ಲೆ ಇಹಪರದಲ್ಲೆ ಪರಮ ಸೌಖ್ಯಕೆ ನಿನ್ನ ಸ್ಮರಣೆ ವಂದಲ್ಲೆ 2 ಪಾಮರ ಜನರಿಗೆ ಸುಮಾರ್ಗಗೋಸುಗಶ್ರೀಮನೋಹರ ನಿನ್ನ ಪ್ರೇಮದಿಂದಲಿ ಸೃಜಿಸಿಭೂಮಿಯೊಳಿಡಲೂ ಹರಿಯ ದಿವ್ಯನಾಮ ನಾ ಬಿಡಲು ದುರ್ವಿಷಯವಕಾಮಿಸಿ ಕೆಡಲೂ | ಸುಮ್ಮನಿರದೆಯಾಮ ಯಾಮಕೆ ನಿನಗೆ ನಾ ಮೊರೆಯಿಡಲೂ 3 ಜಗದಂತರ್ಯಾಮಿಯ ಹಗಲು ಇರುಳು ಬಿಡದೆಸುಗುಣ ಮಾರ್ಗದಲಿದ್ದು ಬಿಗಿಯಾದ ಕವನಕ್ಕೆಬಗೆ ತೋರಿದವನೆ ಹರಿಯ ಕ್ಷಣ ಅಗಲದಿದ್ದವನೆ ಕಾಮದ ಬಲಿಗೆಸಿಗದೆ ನಡೆವವನೆ ಅನುನಯದಿ ಕರವಮುಗಿದು ಬೇಡುವರಲ್ಲಿ ಮುದದಿಂದ ನಲಿವನೆ 4 ಎನ್ನೊಬ್ಬಗಲ್ಲ ಈ ಬಿನ್ನಪ ಕರುಣಾಳೆನಿನ್ನ ಪೊಂದಿದವರ ಮನ್ನಿಸಿ ಸಲಹಯ್ಯಾಬೆನ್ನು ಬಿಡದಲೆ ವ್ಯಾಸ ವಿಠ-ಲನ್ನ ಪಾಡುತಲೆ ಕಾಲವ ಕಳೆವ ಸನ್ಮಾರ್ಗವನೆ ತೋರೋ ತಡಮಾಡದಲೆ 5
--------------
ವ್ಯಾಸವಿಠ್ಠಲರು
ಪದ್ಮಾಪತಿ ವಿಠಲ ನೀನಿವಳ ಸಲಹ ಬೇಕೋ ಪ ಪದ್ಮ ಸಂಭವ ಜನಕ ಪದ್ಮದಳ ನೇತೃ ಹೃತ್ಪದ್ಮ ದೋಷಗಳ ತಿದ್ದಿ ಕಾಪಾಡೊ ಹರಿಯೇ ಅ.ಪ. ಜನ್ಮಜನ್ಮಾಂತರದ ಪುಣ್ಯ ಸಂಚಯದಿ ಶ್ರೀಮನ್ಮಧ್ವಮತದಲಿ ಜನ್ಮ ತಾಳಿಹಳೋ |ಕರ್ಮನಾಮನೆ ಅನಾದ್ವವಿದ್ಯಾಕಾಮಕರ್ಮಗಳನೆ ಕಳೆವ ಸನ್ಮಾರ್ಗವನೆ ತೋರೊ 1 ತಾರತಮ್ಯ ಜ್ಞಾನ ಮೂರೆರಡು ಭೇದಗಳಸಾರವನೆ ತಿಳಿಸಿ ಸಂಸಾರನಿಧಿ ದಾಟಿಸೋಕಾರುಣ್ಯ ನಿಧಿ ಮೂಲ ಕಾರಣನು ನೀನೆಂದುಸಾರಿಬೇಡುವೆ ನಿನ್ನ ಪಾರು ಮಾಡಿವಳಾ 2 ಪತಿಸುತರು ಹಿತರಲ್ಲಿ | ಮತಿಮತಾಂವರಲ್ಲಿಕೃತಿಪತಿಯ ವ್ಯಾಪ್ತಿ ಸನ್ಮತಿಯನೇ ಕೊಡುತಹಿತದಿ ಸೇವೆಯಗೈಸು ಕೃತಕಾರ್ಯಳೆಂದೆನಿಸುಗತಿ ವಿಹೀನರಿಗೆಲ್ಲ ಗತಿಪ್ರದನೆ ಸ್ವಾಮೀ 3 ನಿನ್ನ ಸ್ಮøತಿಗಿಂದಧಿಕ ಅನ್ಯಸಾಧನ ಕಾಣೆಘನ್ನ ಈ ಕಲಿಯುಗದಿ ಪ್ರಾಣಾಂತರಾತ್ಮ |ಪುಣ್ಯ ಫಲದಾತ ಪ್ರಪನ್ನ ಪರಿಪಾಲಕನೆನಿನ್ನ ಸಂಕೀರ್ತನವ ಸರ್ವದಾ ಕೊಡು ಹರಿಯೇ 4 ಭಾರ ನಿನ್ನದೊಸ್ವಾಮಿಮಧ್ವಾಂತರಾತ್ಮ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಶರಣು ಶರಣು ಪ ಪರಿಹರಿಸು ಕರುಣಾಳು ಬಿನ್ನಪವ ಕೇಳು ಅ.ಪ. ವಾಸವಾದ್ಯಮರನುತ ವನಜಸಂಭವನ ಸುತ ನೀ ಸಲಹೊ ಕೈಲಾಸವಾಸ ಈಶ ಕ್ಲೇಶ ಮೋದಾದಿ ಸಮ ತಿಳಿದು ಅಶ್ವತ್ಥಾಮ ಶ್ರೀಶುಕ ದುರ್ವಾಸ ಸ್ಫಟಿಕ ಸಮಭಾಸ 1 ವೈಕಾರಿಕಾದಿ ತ್ರೈರೂಪ ನಿನ್ನಯ ಕೋಪ ಶೋಕಕೊಡುವುದು ದೈತ್ಯಜನಕೆ ನಿತ್ಯ ಲೌಕಿಕಗಳೆಲ್ಲ ವೈದಿಕವಾಗಲೆನಗೆ ಮೈ ನಾಕಿ ಹೃತ್ಕುಮುದೇಂದು ಭಕ್ತಜನ ಬಂಧು 2 ಪವಮಾನತನಯ ನಿನ್ನವರಲ್ಲಿ ಕೊಡು ವಿನಯ ದಿವಸ ಸವನಗಳಲ್ಲಿ ಎನ್ನಿರುವ ನೀ ಬಲ್ಲಿ ಪವನ ದ್ವಿತಿಯರೂಪ ಸತತ ಎನ್ನಯಪಾಪ ಅವಲೋಕಿಸದಲೆನ್ನ ಸಲಹೊ ಸುರಮಾನ್ಯ 3 ಶೇಷನಂದನ ಶೇಷಭೂಷಣನೆ ನಿಶೇಷ ದೋಷರಹಿತನ ತೋರು ಕರುಣವನು ಬೀರು ಶ್ರೀ ಷಣ್ಮುಖನ ತಂದೆ ಸತತ ನೀ ಗತಿಯೆಂದೆ ಶೋಷಿಸು ಭವಾಮಯವ ಬೇಡುವೆನು ದಯವ4 ಗರ್ಗ ಮುನಿಕರಪದುಮ ಪೂಜ್ಯ ಚರಣಾಬ್ಜ ಮಮ ದುರ್ಗುಣಗಳೆಣಿಸದಲೆ ಜಗದೆ ಮೇಲೆ ನಿರ್ಗತಾಶನ ಜಗನ್ನಾಥ ವಿಠಲನ ಸ ನ್ಮಾರ್ಗವನೆ ತೋರು ಈ ದೇಹ ನಿನ ತೇರು 5
--------------
ಜಗನ್ನಾಥದಾಸರು