ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಪೇಳಲಿ ನಿನ್ನ ತನಯನ ಚರ್ಯವ ಮಾನಿನಿಮಣಿಯೆ ಯಶೋದೆಯ ಕೇಳೆ 1 ವಾರಿಧಿಯೊಳು ಪೊಕ್ಕು ವಿಹರಿಸುವನೆ ಮತ್ತು ಭಾರಿಯಾದ ಕ್ಷಿತಿಧರೆಯನೆ ಹೊರುವನೆ 2 ಕುಂಭಿಣಿಯನೆ ಅತಿ ಸಂಭ್ರಮದಲ್ಲಿ ತಂದು ಸ್ತಂಭವ ಭೇದಿಸಿ ಸಂಭವಿಸಿದನಲ್ಲಿ 3 ಮೂರು ಹೆಜ್ಜೆಯ ಭೂಮಿ ಬೇಡಿದನೇ ಏಳು ಮೂರು ಬಾರಿ ನೃಪತಿಗಳ ಭೇದಿಸಿದನು 4 ವಾನರರನು ಸೇರಿ ಜಾನಕಿಯನೆ ತಂದೆ ಮಾನವ ಕುಲಕೆ ಸನ್ಮಾನವ ತಂದನೆ 5 ಘೋರ ಪೂತನಿ ಪ್ರಾಣ ಹಾರ ಮಾಡಿದ ಜಾರ ಚೋರತನದಿ ಶೂರನಾದನೆ ನೋಡೆ 6 ಬತ್ತಲೆ ನಿಂತನೆ ಸಸ್ತಿಯನೇರಿದ ಮತ್ತು ನಾಮಗಿರಿ ನರಹರಿ ಇವನೆ 7
--------------
ವಿದ್ಯಾರತ್ನಾಕರತೀರ್ಥರು
ದೊರೆಯೆನ್ನನು ಕಾಯೈ ಶ್ರೀಚಕ್ರಪಾಣಿ ಪ ನಿರುತವು ಶರಣೆಂದೆನ್ನುತ ಕೋರುವೆ ಪರಿಯೊಳುಸೇರೇ ಬಂದಿಹೆ ಕರಪಿಡಿ ಅ.ಪ ಆಯುರಾರೋಗ್ಯ ಸುಖಸಂಪದಕೊಡುವ ಸೌಭಾÀಗ್ಯ ಕರ್ತೃವು ಶ್ರೇಯದ ವಿದ್ಯೆಯ ಕರುಣಿಸ ಪ್ರಭೆಯೊಳು ಸನ್ಮಾನವೀವಾ ಧ್ಯೇಯನೇಭತ್ತಿಜ್ಞಾನವೈರಾಗ್ಯವನಿತ್ತುವಿಮುಕ್ತಿಕೊಡುವ ಅ ನ್ಯಾಯದೆ ನಡೆವರ ವ್ಯರ್ಥರಗೈವನು ನೀನೈ ಶ್ರೀಶ್ಯಾಮಸುಂದರ 1 ಮನ್ನರೋಗಕ್ಕೆ ನಿನ್ನ ಪಾದತೀರ್ಥ ಔಷಧವು ಬೇಡ ಉನ್ನತ ಭಯಕ್ಕೆ ಸುದರ್ಶನ ಸ್ಮರಣೆ ಮಂತ್ರವೇತಕ್ಕೆ ಇನ್ನಿತರ ಕಷ್ಟಗಳಿಗೆಲ್ಲ ನಿನ್ನ ನಾಮಮಂತ್ರ ಭಜನ ಚೆನ್ನಪಾದಕೃಪೆ ಇನ್ನೊದಗಿಹುದೈ ನಾಂ ನಿತ್ಯಸಂತೊಷಿ 2 ನಿರಾಯಾಸದಿಂ ದಾಸಗಂತ್ಯದಲಿ ಪ್ರಶಾಂತನಾಗಿ ಹರಿನಾರಾಯಣ ನಾರಾಯಣಯೆಂದು ಕರೆವಂತೆ ಮಾಡಿ ಹರುಷದಿ ನೋಹರಾಕಾರವ ತೋರಿ ವೈಕುಂಠಕೆನ್ನನು ಕರುಣದಿ ಕರೆದೊಯ್ ಅಜಪೂಜಿತ ಹೆಜ್ಜಾಜಿಕೇಶವ 3
--------------
ಶಾಮಶರ್ಮರು
ನಾಲ್ಕನೆಯ ಸಂಧಿ ಶಶಿಹಾಸ ಕಾಳಿಯನೊಲಿಸಿ ಪೊಸತಾಗಿ ತೋರಿತಾಶ್ಚರ್ಯ ಮಿಥ್ಯದ ವಿಷವನು ಉಣಿಸಿ ಕೃತ್ಯವೆ ಪಥ್ಯವಾದುದನು 1 ಕರುಣದ ಬಗೆಯ ತನುಜೆಯು ವಿಷಯು 2 ವಿಷಯೆ ಇದ್ದೆಡೆಗೆ ತಲೆಯ ತಗ್ಗುವಳು 3 ಪನ್ನಗಧರನ ಕೃಪೆಯಿಂದ ಸನ್ಮಾನವನೆ ಮಾಡಿದರು 4 ಜಾರಿದ ಕುರುಳನೋಸರಸಿ ಚಾರುಮಾಣಿಕಖಚಿತ ಪೀಠಕ್ಕೆ 5 ಹರಸಿ ಅಕ್ಷತೆಗಳನಿಟ್ಟು ಅರಸಿನಗಳ ತಿವರಿದರು 6 ಮಜ್ಜನ ತಂಬಿಗೆಯ ಲೋಕುಳಿಯ ಬೆನ್ನಲೋಕುಳಿಯನೆರೆದರು 7 ಮುಡಿಮೈಗಳನೋಸರಿಸಿ ದುಕೂಲವ ಬಡನಡುವಿಗೆ ಅಳವಡಿಸಿ ಜಡಿತದಾಭರಣಕರಡಿಗೆಯನು ತಂದಿಡುವರು ಇಕ್ಕೆಲದಲ್ಲಿ8 ಪಾಟಿಸಿ ತುರುಬನೋಸರಿಸಿ ಮಧ್ಯದಲಿ ಇಡುವರು 9 ಬೆಳಗುವ ಮೂಗುತಿಯ ಮಂದ ಗಮನೆಯರು ಹರುಷದಲಿ 10 ಮೂಗುತಿಯನಿಕ್ಕುವರು ಕೋಕಿಲಗಾನೆ ಕುಟಿಲಕುಂತಳದಾನೆ ಬಾಗಿದ ಬಾವುಲಿಗಳಲಿ11 ಇಟ್ಟರು ತೋಳ ಚಳರಕ್ಷೆ ಮಣಿಗಳ ಗಟ್ಟಿಕಂಕಣ ಚಳಕಗಳ ಬೆರಳ ಮುದ್ರಿಕೆಯು 12 ಕಡಗ ಮುತ್ತಿನ ಹತ್ತೆ ಕಡಗ ಎಡೆಪಣಿಚಿಂತಾಕದ ಸರಿಗೆಯ ತಂದಿಡುವರಂಗನಗೆ ನಾರಿಯರು 13 ಕಂಠೀಸರ ಬಿಲ್ಲಸರವು ಸರಸಿಜ ಗಂಧಿಯರೊಲಿದು 14 ಕಣಕಾಲುಗಳೆಸೆವ ಭಾವಕಿಯ ಸಾಲುಗಂಟೆ ಗೆಜ್ಜೆ ಸರಪಳಿ ಘಲಿರೆಂಬ ಕಾಲಂದಿಗೆಯನಿಡುವರು15 ಉಂಗುರ ಮುದ್ರಿಕೆಯಿಟ್ಟು ಮಂದಗಮನೆಗೆ ಒಪ್ಪಿದವು 16 ಸಾರಿಸಿ ಅಂಗಕ್ಕೆ ತಿಗುರಿ ಹಾವುಗೆಯನೆ ಮೆಟ್ಟಿಸಿದರು 17 ನಾರಿಯರೆಡಬಲದಲಿ ಕರವಿಡಿಯಲು ಚಾರುವದನೆ ಚಂಚಲಾಕ್ಷಿ ಬಂದೇರಿದಳೊಜ್ರದಂದಣವ 18 ಹೊತ್ತರು ಕಳಸ ಕನ್ನಡಿಯ ಹೊತ್ತಿದ ಕಾಳಂಜಿಯವರು 19 ಜಗಜಗ ಬೆಳಕುಗಳು ತುಂಬಿ ಜಗಜಗಿಸುವ ಜೊ‑ಂಪಿನ ಸುರೆಪಾನವು ನೆಗಪಿದವಗಣಿತವಾಗ20 ಉದುರು ಬಾಣ ಪುಷ್ಪಬಾಣ ಸದನದಿ ನಡೆತಂದಳಬಲೆ 21 ಹೊನ್ನಂದಣವನೆ ಇಳಿಸುವರು ಬಂದಳು ವಿವಾಹ ಮಂಟಪಕೆ 22 ಪಿಡಿದಳು ಮದನನರ್ಧಾಂಗಿ23 ಮುಕುಂದಗರ್ಪಿತವಾಗಲೆಂದು ಮಂದಾರಮಾಲೆ ಹಾಕಿದರು 24 ಪೊರೆಯಲಿ ತಂದು ನಿಲ್ಲಿಸಿದರು ಅರುಹಬೇಕೆಂದು ಕೇಳಿದರು 25 ಎನ್ನ ಪರಮ ಗುರುವೆಂದ 26 ಸಮಯವು ಲಗ್ನವೆಂದೆನುತ ಬ್ರಾಹ್ಮಣೋತ್ತಮರು ಹೇಳಿದರು 27 ಸಮಯವು ಲಗ್ನವೆಂದೆನುತ ಮೇಲೆ ಸೂಸಿದನು 28 ಶತಪತ್ರನಯನೆ ಸಮಗಾತ್ರೆ ಚಮತ್ಕಾರದಿಂದ ಸೂಸಿದಳು 29 ಸೊಡರುಗಳನೆ ಹಚ್ಚುವರು ಪಿಡಿದರು ಇತ್ತಂಡದಲ್ಲಿ 30 ಮುತ್ತೈದೆಯರೆಲ್ಲ ಅಲಂಕರದಿ ವಿಷಯೆ ಸಂಭ್ರಮದಿ 31 ಕೈಯಿಂದ ತೋರುವರು ಸುತ್ತ ನಕ್ಷತ್ರದ ಮಧ್ಯದಿ ಕಂಡಳು ಪ್ರತ್ಯಕ್ಷದಿಂದರುಂಧತಿಯ 32 ದಿನಕರ ಪ್ರತಿಬಿಂಬದಂತೆ ಅನುಕೂಲಗಳನೆ ಮಾಡಿದರು 33 ಮಾಡಿದನು ಶ್ರೀಪತಿಯ ಆಜ್ಯತಂಡುಲ ಆಪೋಶನೆ ಮಾಡಿದ ನಿರ್ಜರಪತಿ ಮೆಚ್ಚುವಂತೆ34 ಎಡೆಮಾಡಿ ಚಪ್ಪರದೊಳಗೆ ಭೋಜನಕೆ ಕುಳ್ಳಿರಿಸಿ 35 ಉಪ್ಪಿನೆÀಸರುಕಾಯಿ ಪರಿಪರಿ ಶಾಕವು ಹಪ್ಪಳ ಬಾಳಕಗಳನು ಅಪ್ಪಲು ಅತಿರಸ ಸೂಪಾಕ್ಷತಶಾಲ್ಯನ್ನ ಚಪ್ಪರದಲಿ ಬಡಿಸುವರು 36 ಕಾಮಿನಿಯರು ಕನಕದ ಹರಿವಾಣದಿ ಶಾವಿಗೆ ಪರಮಾನ್ನಘೃತವ ಭೂಮಕ್ಕೆ ಬಡಿಸಿದರಾಗ 37 ರಾಜೀವ ಮುಖಿ ತನ್ನ ಪತಿಗೆ ಮ- ಹಾಜನರೆಲ್ಲ ಉಂಡು ಕೈತೊಳೆದರು ಹೂಜಿಯಲ್ಲುದಕವ ಪಿಡಿದು38 ಸಂಭ್ರಮದಿಂದ ಸೂಸಿದರು39 ವಾಸುದೇವ ಕೃಷ್ಣ ಎನುತ ಮದನ ವಿಲಾಸದಿಂದಲಿ ನಿದ್ರೆಗೈದ 40
--------------
ಹೆಳವನಕಟ್ಟೆ ಗಿರಿಯಮ್ಮ
ಬೆರಗದಿರು ಮನವೇ ನೀ ತತ್ವವನು ತಿಳಿಯದೆ ಮರುಗಬೇಕಾಗುವುದು ಅವಿವೇಕಕೆ ಪ ಸಿರಿಯರಸ ನರಹರಿಯ ಮರೆತು ಬಾಳುವ ನರನು ನರಕಕ್ಕೆ ಗುರಿಯಾಗಿ ಸೊರಗುವನು ನಿಜದಿ ಅ.ಪ ಸುಲಭವಲ್ಲವೊ ನಿನಗೆ ಮನುಜ ಜನ್ಮದ ಲಾಭ ತನುಭೋಗವಲ್ಲವೊ ಅದರ ಫಲವು ವನಜನಾಭನ ಮನದಿ ನೆನೆನೆನೆದು ದಿವ್ಯ ಸ ನ್ಮಾನವ ಪಡೆಯುವತನಕ ಶುನಕಕ್ಕೆ ಸಮನೋ 1 ಭವಮೋಹದಿಂದ ನೀ ಘನ ಪಾಪಗಳ ಮಾಡಿ ಧನಿಕನೆಂದೆನಿಸಿದರೆ ಎಣಿಕೆ ಬಾರದೋ ದಿನದಲ್ಲಿ ಧನದಿಂದ ಪಡುವ ಭೋಗಗಳು ಬಂ ಧನದಲ್ಲಿ ಕೆಡಹುವುವು ನಿನ್ನನು ನಿಜದಿ 2 ಪ್ರೇಮಪಾಶಕೆ ಸಿಲುಕಿ ವಾಮಲೋಚನೆಯರ ಕಾಮಿತಕೆ ಬಿದ್ದು ನಿರ್ನಾಮವಾಗದಿರೊ ಹೇಮದಾಸೆಗೆ ನಿನ್ನ ಕಾಮನೆಂದ್ಹೊಗಳುವರೋ ರೋಮ ರೋಮದಿ ಸುಲಿದು ಕೊನೆಗೆ ಬಿಸುಡುವರೋ 3 ಮುನ್ನ ಏಸೇಸು ಜನ್ಮಗಳ ಪೊಂದಿದೆಯೊ ನೀ ನಿನ್ನವರು ಯಾರೆಂದು ಪೇಳಲಳವೇ ಘನ್ನ ಮಹಿಮನಲಿ ಸಂಪನ್ನಮತಿಯನೆ ಪೊಂದು ಪನ್ನಗಶಯನ ಪ್ರಸನ್ನನಾಗುವನು 4
--------------
ವಿದ್ಯಾಪ್ರಸನ್ನತೀರ್ಥರು
ಸರಸ್ವತಿ ನಲಿಯೆ ನೀ ಜಿಹ್ವೆಯಲಿ ಚತುರಾನನ ಪ್ರಿಯ ರಾಣಿ ನಾನಾ ಧನಕನಕಾದಿ ವಿಭವಗಳು ಹಿರಿದುಕ್ಕುತಲಿರಲು ಪ ನೀನೊಲಿಯದಿರಲು ಮಾನವನಿಗೆ ಸ ನ್ಮಾನವೆಂತು ಬರುವುದು ಜಗದೊಳಗೆ ಅ.ಪ ಕರ ಧೃತ ವೀಣಾಪಾಣಿ ಉನ್ನತ ಮಹಿಮ ಪ್ರಸನ್ನ ಹರಿಗೆ ಸತಿ 1
--------------
ವಿದ್ಯಾಪ್ರಸನ್ನತೀರ್ಥರು
ತನಗಲ್ಲದಾ ವಸ್ತು ಎಲ್ಲಿದ್ದರೇನುಮನಕೆ ಬಾರದ ಹೆಣ್ಣು ಮತ್ತೆ ಬಂದರೆ ಏನು ? ಪ.ಆದರಣೆಯಿಲ್ಲದೂಟ ಅಮೃತಾನ್ನವಾದರೇನುವಾದಿಸುವಸತಿ - ಸುತರಿದ್ದು ಫಲವೇನು ?ಕ್ರೋಧ ಬಳೆಸುವ ಸಹೋದರರು ಇದ್ದರೇನುಮಾದಿಗರ ಮನೆಯೊಳೆ ಮದುವೆಯಾದರೇನು ? 1ನಾಲಿಗಿಲ್ಲದ ಪÀದವು ಸಂಚಿತುಂಬ ಇದ್ದರೇನುದೇವಾಂಕಿತವಿಲ್ಲದ ಕವಿತ್ವವೇನು ?ಹೇಮವಿಲ್ಲದ ಹೆಣ್ಣು ಹೆಚ್ಚು ಬಾಳಿದರೇನುಹಾವಿನ ಘಣಿಯೊಳಗೆ ಹಣವಿದ್ದರೇನು ? 2ಸನ್ಮಾನವಿಲ್ಲದೆ ದೊರೆ ಸಾವಿರಾರು ಕೊಟ್ಟರೆ ಏನುತನ್ನ ತಾನರಿಯದ ಜ್ಞಾನವೇನು ?ಎನ್ನುತ ಪುರಂದರವಿಠಲನ ನೆನೆಯದವಸಂನ್ಯಾಸಿಯಾದರೇನು ಪಂಡಿತನಾದರೇನು ? 3
--------------
ಪುರಂದರದಾಸರು