ಕಾಯೊ ಕರುಣಾಕರ ಕೃಪಾಲ ಶ್ರೀ ಗುರು ಎನ್ನ
ಕಾಯೊ ದಯದಿಂದೆನ್ನ ಪರಮಪಾವನ ಧ್ರುವ
ಹುಟ್ಟಿಸಿಹ್ಯ ಜೀವನ ಸೃಷ್ಟಿಯೊಳು ನಾ ನಿಮ್ಮ
ದೃಷ್ಟಿಸಿ ನೋಡಲು ಎನ್ನ ಕಷ್ಟಪರಿಹಾರ
ಶಿಷ್ಟಜನ ಪ್ರತಿಪಾಲ ದುಷ್ಟಜನ ಸಂಹಾರ
ಎಷ್ಟೆಂದು ಪೊಗಳಲಯ್ಯ ಕೃಷ್ಣಕೃಪಾಲ 1
ಇನ್ನೊಂದು ಅರಿಯೆ ನಾ ಅನ್ಯಪಥÀವೆಂಬುದನು
ನಿನ್ನ ಚರಣಕೆ ಪೂರ್ಣ ನಂಬಿಹ್ಯನು
ಭಿನ್ನವಿಲ್ಲದೆ ಎನ್ನ ಚನ್ನಾಗಿ ಸಲಹಯ್ಯ
ಧನ್ಯಗೈಸೊ ಪ್ರಾಣ ಚಿನ್ಮಯನೆ 2
ವಾಸನೆಯ ಪೂರಿಸೊ ವಿಶ್ವವ್ಯಾಪಕ ಎನ್ನ
ಭಾಸ್ಕರಕೋಟಿ ಪ್ರಕಾಶ ಪೂರ್ಣ
ಲೇಸು ಲೇಸಾದಿ ಪಾಲಿಸೊ ವಾಸುದೇವನೆ
ದಾಸಾನುದಾಸ ನಿಜದಾಸ ಮಹಿಪತಿಗೆ 3