ಸಲಹು ಸಲಹು ಸಲಿಲಜಾಂಬಕ ಸಲಹು ತ್ರಿಭುವನ ಜೀವನಾ|
ವಿನುತ ಪದಪಾವನಾ|
ನೆಲಿಗೆ ಪಡೆದಿಹೆ ಕಾವನಾ|
ಸುಲಭನಾಗ್ಯತಿ ಸಲಿಸುತಿರುತಿಹ|ಒಲಿದು ಭಕ್ತರ ಭಾವನಾ 1
ಕರವ ದರಿತು ಶರಣವ ಬಂದೆನಾ|
ಕೊರತೆ ನೋಡದೆ ಹಿಂದಿನಾ|
ಅರಹು ಮತಿಯಲಿ ಮಂದನಾ|
ಹರಿಯ ಸಾರ್ಥಕ ನರಜನುಮವನು |
ಭರದಿ ಮಾಡು ನೀ ಇಂದಿನಾ 2
ಪತಿ ಸಖಗತಿಗೆಳೆಯ ಸುತ|ಪಿತನ ಪರಿಯಲಿ ಲಾಲಿಸಿ|
ಶೃತಿ ವಿಹಿತ ತವ ಸ್ತುತಿಸ್ತವ ಪಾಡುತಿಹೆ ನೆರೆಯಲಿ ಬಾಳಸೀ|
ಹಿತವನರಿಯದ ಮತಿ ವಿಹೀನೋ|ನ್ಮತರ ಸಂಗವ ಜಾಳಿಸೀ|
ಪತಿತನು ದ್ಧರಿಸ್ಸತುಳ ಮಹಿಪತಿ | ಸುತ ಪ್ರಭುವೇ ದಯಪಾಲಿಸಿ 3