ಒಟ್ಟು 6 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಏ) ವಿಶೇಷ ಸಂದರ್ಭದ ಹಾಡುಗಳು ಬರಗಾಲ ಮತ್ತು ಯುದ್ಧವನ್ನು ಕುರಿತು ನಿರ್ದಯನಾಗಬೇಡವೋ ಭಗವಂತ ದುರ್ದಿನ ದೂರಮಾಡೋ ದೇಶಕ್ಕೆ ಪ್ರಶಾಂತ ಪ ಮಳೆಗಾಲ ಮರೆತುಹೋಗಿ ಬೇಸಗೆ ಬೆಳೆದು ಬಂದು ನೆಲವೆಲ್ಲ ದುರ್ಭಿಕ್ಷ ತಾಂಡವವಾಡುತಿದೇ 1 ಕೆರೆಕಟ್ಟೆತೊರೆಭಾವಿ ಹೊಳೆಯಲ್ಲಿ ನೀರಿಲ್ಲ ಧರೆಯಲ್ಲಿ ತೃಣವಿಲ್ಲ ಬರಿಗಾಡಾಯ್ತೋ 2 ಹೊಲಗದ್ದೆ ತೋಟಗಳ ಬೆಳೆಯೆಲ್ಲ ಒಣಗಿತು ಫಲವಿಲ್ಲ ಜನವೆಲ್ಲ ಗೋಳಾಡುತಿಹರೋ 3 ಅನ್ನಾಹಾರಗಳಿಲ್ಲ ಗೋಗಳಿಗೆ ಗ್ರಾಸವಿಲ್ಲ ಚಿನ್ನದಂಥ ಮಕ್ಕಳೆಲ್ಲ ಉಣಿಸಿಲ್ಲದಿಹರೋ4 ಧನಿಕರ್ಗೆ ಧನದಾಸೆ ಬಡವರ್ಗೆ ಕೂಳಿಲ್ಲ ದಿನಕಳೆವುದು ಕಷ್ಟವಾಗಿ ಬರಗಾಲ ಬಂತೋ 5 ಕಳವು ಕೊಲೆಯು ದಂಗೆ ದಾರಿದರೋಡೆಯು ಉಳಿಗಾಲ ಬರಲಿಲ್ಲ ಯುದ್ಧದ ಭಯವು6 ಒಂದೊಂಬತ್ತಾರೈದು ಹತ್ತು ಹನ್ನೊಂದರ ಮಧ್ಯೆ ಬಂದು ಜಗದ ಕುತ್ತು ಕತ್ತಿಯಂತೆ ಕಂಡಿತು 7 ಬೆಳಗುಪೂರ್ವ ಆಶ್ವಿಜ ಕಾರ್ತಿಕದೆ ಧೂಮಕೇತು ಇಳೆಗಂಡಕಳೆ ಯಮದ್ವಾರವ ಮುಚ್ಚಿ 8 ಅವಿಶ್ವಾಸದ ವಿಶ್ವವಸುವ ಪರಾಭವದಿಂ ಪ್ರೀತಿತೋರಿ ಭಂಗ ಹರಿಸೋ 9 ಪಾಕಿ-ಚೀನಾ ಪತನಗೈದು ಜೋಕೆಯಿಂ ಭಾರತವ ರಕ್ಷಿಸಿ ಲೋಕಕ್ಕೆ ಕ್ಷಾಮಹರಿಸಿ ಕ್ಷೇಮಕೊಟ್ಟು ಪೊರೆಯೋ10 ನಗೆಯಿಲ್ಲ ಸಂತೋಷ ಸುದ್ಧಿ ಕೇಳುತಲಿಲ್ಲ ಮಿಗಿಲಾಗಿ ಜನರೆಲ್ಲ ಸೊರಗಿ ಸುತ್ತುವರೋ11 ಕನ್ನಡದ ನಾಡಿಗೆ ಹೊನ್ನಿನ ಬಿರುದಿದೆ ಖಿನ್ನತೆ ತಾರದೆ ಉನ್ನತಿ ಕಾಪಾಡು 12 ಮುಂದೆಮಗೆ ಗತಿಯೇನು ಬಾಳುವಬಗೆಯೆಂತು ಬಂಧು ನೀನಿದ್ದುಕೊಂಡು ಅನ್ಯಾಯವಾಗಿದೆ13 ತಂದೆ ತಾಯಿಯು ನೀನು ಹೊಂದಿದ ಬಳಗ ನೀನು ಕುಂದಿಲ್ಲದೆಮ್ಮನ್ನು ಕಾವ ಪ್ರಭು ನೀನು 14 ಸುವೃಷ್ಟಿ ಸಸ್ಯವೃದ್ಧಿ ಜೀವನ ಸಮೃದ್ಧಿಯು ಸುವೃತ್ತಿ ಕರುಣಿಸಿ ಪೊರೆ ಜಾಜಿಶ್ರೀಶ 15
--------------
ಶಾಮಶರ್ಮರು
ಇಂಥಾದೆಲ್ಲದೆ ತಾಂ ನೋಡಿ ಸತ್ಸಂಗದಸುಖಾ ಇಂಥಾ ಅಂಥಿಂಥವರಿಗಿಂಥಾದೈಲ್ಲದೆ ನೋಡಿ ಧ್ರುವ ಒಂದೊಂದುಪರಿ ಕೇಳಿಸುವ ಹ ನ್ನೊಂದರ ಮ್ಯಾಲಿನ್ನೊಂದರ ಘೋಷ ಧೀಂ ಧೀಂ ಧೀಂ ಧೀಂ ಧೀಂ ಧೀಂ ಧೀಂ ಧೀಂ ಮಿಡುಗತಿಹ್ಯ ಆನಂದಸುಖ 1 ಉದಯಾಸ್ತಿಲ್ಲದೆ ಬೆಳಗಿನ ಪ್ರಭೆಯು ತುದಿಮೊದಲಿಲ್ಲದೆ ತುಂಬಿತು ಪೂರ್ಣ ಬುಧಜನರನುದಿನ ಸೇವಿಸುತಿಹ್ಯ ಸದಮಲವಾದ ಸದಾ ಸವಿಸುಖ2 ವಿಹಿತ ವಿವೇಕದ ಅನುಭವಗೂಡಿ ಬಾಹ್ಯಾಂತ್ರದ ಘನದೋರುತಲಿಹ್ಯ ಸ್ವಹಿತಸುಖದ ಸುಧಾರಸಗರೆವ ಮಹಿಪತಿಗುರು ಕರಣದ ಕೌತುಕ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದಯದೊಲವಿನ ಮೆಚ್ಚು ಧ್ರುವ ಮಾಡದ ಮಾಡಿಸಿತು ನೋಡಿದರೇನ ತಾಂ ನೋಡಿಸಿತು ಕೂಡದ ಕೂಡಿಸಿತು ಬಿಡದಾಗಿಹ್ಯದ ಬಿಡಿಸಿತು 1 ತನ್ನ ತಾನರಸಿತು ಇನ್ನೊಂದರನೆ ಮರೆಸಿತು ಭಿನ್ನ ಭೇದ್ಹರಿಸಿತು ಚಿನ್ಮಯದ ಸುಖ ಬೆರೆಸಿತು 2 ಕಾಣದ ಕಾಣಿಸಿತು ಉಣದೂಟನೆÀ ತಾ ಉಣಿಸಿತು ಅನುಮಾನಗಳಿಸಿತು ಘನ ಮಹಿಪತಿಗೆ ನುಡಿಸಿತು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಧಗಧಗಿಪ ಬಿಸಿಲೊಳಗೆ ಜಗವು ಸುಡುತಿಹುದು ಪ ಮಗಳಾದ ಭಾಗೀರಥಿಯ ಕಳುಹಿ ಸಲಹೊ ಅ.ಪ ಪೋಷಣೆಗೆ ಗತಿಯೇನು ಶೇಷಶಯನ 1 ಮಾಯಾ ದೀನ ವತ್ಸಲನೆಂದು ನನ್ನೊಂದರಿಕೆ 2 ಧರಧರನೆ ಸುರಿಸಿದೆ ಸದಾನಂದಗೈದೆ 3
--------------
ಸದಾನಂದರು
ಬನ್ನಿಗಡ ಸುಜನರೆಲ್ಲ ಪಾವನಕಾಯ ಸುಜನಪ್ರಿಯಪುಣ್ಯ ಸತ್ಯನಾಥಯತಿರನ್ನನ ಪಟ್ಟಣಕಿಂದು ಪ.ಪರಬೊಮ್ಮನೆಂಬುವ ಮನೆದೈವನಾಗಿಹಪರಸುಖವನೀವ ಮರುತದೇವನೆಂಬಾತಪರಮಪದದ ಗುರುವು ಯುಕ್ತಿಯಿಂದ ಕಾಪುರುಷರಗಲಿಸುವಂತೆ ಸತ್ಯನಾಥಪುರಪತಿಗೆ ಬೋಧಿಸುವ ಪರಮವಾರ್ತೆಯ ಕೇಳ 1ನವಭಕುತಿರತುನದಿಂದ ನಿರ್ಮಿತ ಪ್ರಾಕಾರಕೆನವದ್ವೇಷಿಗಳು ದಾಳಿಯಿತ್ತು ಅಂಡಲೆಯಲು ದಾನವಾರಿಯ ನಾಮಾಯುಧವ ಸತ್ಯಾಭಿನವÀÀ ತೀರ್ಥರೆಂಬೊ ಪುತ್ರಗೆ ನೀಡುತಮಾನವ ಹರಿಯೆಂಬಸುರರ ಮಡುಹಿಸುವುದು ನೋಡ 2ಕಾಯಜಚೋರನೆಂಬವ ತಾ ಕಳ್ಳ ಹನ್ನೊಂದರ ಕೂಡಿಕಾಯವೆಂಬ ರಾಜಗೃಹಕೆ ಕನ್ನವಿಕ್ಕುವುದ ಕಂಡುಕಾಯುವ ಜ್ಞಾನೆಂಬ ಭಟನು ಅಟ್ಟಲವನಕೈದು ಚಾಪವ ಸೆಳೆದು ಮಿಕ್ಕು ಚೋರನೀಕಾಯಕಟ್ಟಿಸುವಂಥ ಕರುಣಿಗೆ ನಮಿಸುವ3ಹರಿದಾಸರೆನಿಸುವ ಹಲವು ದೊರೆಗಳುಂಟುಹರದಾರಿಕ್ಕೆಲದಿ ಪಣ್ಯವ ಮಾಡಿ ಸುಧೆüವೀರಿಹರಿತತ್ವ ನಾಣ್ಯದೊಳು ರಾಮನಾಮದಹಿರಿದುಮುದ್ರೆಯನೊರೆದು ಪರಂಪರಹರುಷ ವ್ಯವಸಾಯವುಂಟು ಹಿರಿಯಾಮೃತವುಣ್ಣ 4ಅಭಿನವ ಚಂದ್ರಿಕೆದೋರಿ ಅಭಿಜ್ಞಾನತೆ ಮೆರೆದಅಭೀತ ಮಂಗಳಗಾತ್ರ ಅಮಿತ ಬುಧರಮಿತ್ರಅಭಿಜÕಗುರು ಸತ್ಯನಿಧಿಯ ಸುತ ಸತ್ಯನಾಥಅಭು ಪ್ರಸನ್ವೆಂಕಟೇಶನ ಭಜಕನ ಕವಿತಅಬುಜ ಪರಿಮಳಮಂದಾನಿಲವಿಡಿವಳಿಯಂತೆ 5
--------------
ಪ್ರಸನ್ನವೆಂಕಟದಾಸರು