ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಶೇಷಶಾಯಿಯ ವರ್ಣನೆ) ಸ್ವರಮಣನೆನುತಲಿ ಮೊರೆಯಲು ಶ್ರುತಿಗಳು ಹೊರಳುವದೇನುಚಿತ ಅರೆ ನಿಮಿಷವು ನಿನ್ನುರವ ಬಿಟ್ಟಗಲದೆ ಇರುವಳು ರಮೆ ನಿರತ ಪ. ಕವಿಗಳು ಗುಣರಸ ಸವಿದು ಸುಖಭರದಿ ದಿವಿಜರ ಲೆಕ್ಕಿಸರೂ ಪವಿಧರ ಪಾಲಕ ರವಿ ಉದಿಸಿದ ಬಳಿ ಕವಿಕುಲ ಮಲಗುವರೆ 1 ಇಂದಿರೆ ನಿನ್ನನು ಹೊಂದುತ ಪರಮಾ- ನಂದದಿ ಮುಳುಗಿರಲು ಎಂದಿಗು ಮಲಗದ ಸುಂದರ ವಿಗ್ರಹ ಇಂದು ನೀ ಮಲಗುವರೆ 2 ದೋಷವಿದೂರ ಅಶೇಷ ಸುರಾರ್ಚಿತ ದಾಸ ಜನಾನಂದ ಶೇಷಗಿರಿ ವಿಶೇಷಾಸನ ಯಿ- ನ್ನೇಸು ಶಯನ ಚಂದ 3
--------------
ತುಪಾಕಿ ವೆಂಕಟರಮಣಾಚಾರ್ಯ
ನಮೋ ನಮೋ ಶ್ರೀರಂಗ ಶ್ರೀನಿವಾಸ ವರದಗೆ ನಮೋ ನರಹರಿ ನಾರಾಯಣ ಶ್ರೀಪರಮಪುರುಷಗೆ ಪ ನಂದನಕಂದ ಮುಕುಂದ ಇಂದಿರೇಶಗೆ ಮಂದರೋದ್ಧಾರ ಹರಿಸುಂದರಾಂಗಗೆ ಅ.ಪ ಕಂದನ ನುಡಿಯ ಕೇಳಿ ತಾಯಿ ತಂದೆಗಳು ಆ ನಂದ ಪಡುವ ತೆರದಿ ಮಂದಮತಿ ಯಿಂದ ಪೇಳಿದ ಹೊಂದಿಕೆಯಿಲ್ಲದ ನುಡಿಯ ಕುಂದ ಕ್ಷಮಿಸಿ ನಿಮ್ಮ ಪಾದದ್ವಂದ್ವದಲಿರೆಸೆನ್ನ 2 ವಾಸುದೇವ ನಿಮ್ಮ ಪಾದದಾಶೆಯಿಂದಿದೆ ಆತ್ಮ ಇ ನ್ನೇಸು ದಿನ ಈ ಹೇಸಿಕೆಭವದಿ ಘಾಸಿಪಡುವುದೈ ವಾಸುಕಿಶಯನ ಶ್ರೀನಿ ವಾಸ ರಂಗ ಶೀಘ್ರದಿಂಮುಕ್ತಿಯ ಪಾಲಿಸೋ 3
--------------
ಯದುಗಿರಿಯಮ್ಮ
ಬಿಡು ಬಿಡು ವಾಜಿಥರವಲ್ಲಾ | ಪ್ರಾಣಿ ಪ ಕಡಲಶಯನೆಚ್ಚರ ಗಳದೆಲ್ಲಾ | ಬಿಡದೇ ನಿನ್ನ ನೀ ಮರೆವುದು ಸಲ್ಲಾ | ಎಡಬಲ ನೋಡದೆ ನೀ | ವಿಡಿ ಗುರುಗಳ ಅಡಿಗಳ | ಪಡಿ ನಿಜಗತಿಯಾ 1 ಏಸು ಜನ್ಮವ ಸುತ್ತಿ ಬಂದ್ಯೋಯತ್ತಿ | ನ್ನೇಸು ಜನ್ಮವ ತಾಳಬೇಕು ಮುಂದ | ಹೇಸಲಿಲ್ಲವನೊಂದು ಘಾಸಿಯಿಂದ | ಅಶನ ವ್ಯಸನ ತೃಷಿ ಭಸಿಯೊಳು ನಿಶಿದಿನ | ಪಶುವಿನ ಪರಿಯಲಿ ದೆಶೆಗೆಡ ಬ್ಯಾಡಾ 2 ಎಂತು ಹೇಳಲಿನ್ನು ಮನವೇ ನಾನು | ಸಾಧು | ಸಂತರ ಸಂಗದಿ ಬಾಳು ನೀನು | ಅಂತರಂಗದಿ ಹರಿ ಮೂಡುವನು | ಹಿತಾಹಿತ ನರಿತು ಸುಮತಿಯಲಿ ಗುರು ಮಹೀ | ಪತಿ ಸುತ ಪ್ರಭು ಸ್ತುತಿರತಿಯಲಿ ಬಾಳು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಯಾತಕೀಹಂಕಾರವು ಸರ್ವವು ಜಗನ್ನಾಥನ ಪರಿವಾರವು ಪ. ಸ್ವಾತಿಯ ಮಳೆಯೊಳು ಸುರಿವಂಥ ನೀರನು ಜಾತಕ ಪಕ್ಷಿಗೆ ದೊರಕುವ ತೆರದೊಳಿಂನ್ಯಾತಕೀ ಅ.ಪ. ಈಶ ಪ್ರೇರಣೆಯಿಲ್ಲದೇಸು ಮಿಡುಕಿದರು ಶ್ವಾಸ ಬಿಡಲು ಸಲ್ಲದು ಘಾಸಿಗೊಂಡರೆ ನುಂಗಲೋಸುಗ ಮನುಜಗಿ- ನ್ನೇಸು ನಂಬಿಕೆ ಇಹದು ಮೂರ್ಖತ್ವ ಸರಿದು ಘಾಸಿಗೊಳದೆ ರಮೇಶನಿತ್ತದೆ ಲೇಸೆನುತ ಅವನಂಘ್ರಿಕಮಲದ ದಾಸಜನರೊಡನಾಡಿಕೊಳದೆ ದುರಾಸೆ ಕಡಲೊಳಗೀಸಲಾರದೆ 1 ತಾನೆಂಬ ಹಂಕೃತಿ ತಾಳ್ವ ಮನುಜಗಿಂತ ಹೀನರ ಕಾಣೆನಿನ್ನು ಯಾ- ಕೆನಲನ್ನಪಾನದೊಳಿಚ್ಛೆಯನು ತಡೆಯಲನು- ಮಾನಗೊಳುವನಾತನ ಸ್ವಾತಂತ್ರ್ಯವೇನು ಶ್ರೀನಿಕೇತನ ಮನದೊಳನುಸಂಧಾನಗೊಳಿಸುವ ತೆರವಹುದು ಪವ ಮಹಿಮೆಯರಿಯದೆ 2 ವಾರುಧಿಯೊಳಗೆ ಸಂಚಾರಮಾಡುತ ಪರಿ- ವಾರವ ಸೇರಿರುವ ಯೋಚಿಸುವ ನಿತ್ಯದಿ. . . . ಶ್ರೀ ರಮಣ ಚರಣಾರವಿಂಧಾಧರವೆ ಗತಿಯೆಂದು ನಂಬು ಖ- ತನ್ನಿರವ ಮನದಲಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಹುಡುಕಿದಳೆಶೋದ ಕಂದನ ಪಿಡಿದು ದಾರೆತ್ತಿಕೊಂಡ್ಹೋದರೆನುತ ಪ ಕಂಗಳನಿಕ್ಕಿ ಕಾದಿಹ್ಯದು ಸಿಂಗರದ ಗೋಪಿರ್ಹೆಂಗಳೆಯರು ರಂಗನ ಸುಖಕವರು ಗುಂಗುಹಿಡಿದು ಕುಳಿತಿಹ್ಯರು ರಂಗುಮಂಟಪದೊಳಗೆ ಎನ್ನ ಕಂಗಳಿದರ ಕಾಣನಾವ ಅಂಗನೆಯರಡಗಿಸಿದರೆಂದು ಅಂಗಲಾಚಿ ಅಂತರಂಗದಿ 1 ಉನ್ನತೋನ್ನತ ಋಷಿಗಣರು ಪನ್ನಂಗಶಾಯಿಯ ಸನ್ನಿಧಿಲವರು ಮುನ್ನಾವ ಕಾಲದಿಂ ಕುಳಿತಿಹರು ಭಿನ್ನವಿಲ್ಲದೆ ತಪವ ಮಾಳ್ಪರು ಇನ್ನು ಕಾಣಲವರು ತಮ್ಮಿಷ್ಟ ವನ್ನು ಪೂರ ಪಡೆವನಕ ಎನ್ನ ಕಣ್ಣಿಗೆ ಹಾಕರೆಂದು ಬನ್ನಬಡುತ ತನ್ನೊಳ್ತಾನು 2 ದೂಷಣೆ ಭೂಷಣಗಳನೊದೆದ ಮೋಸ ಕ್ಲೇಶಗಳನು ತರಿದ ಆಶಾ ಪಾಶಗಳನು ಜರಿದ ಈಶನುನ್ನತ ನಿಜವ ತಿಳಿದ ಶ್ರೀಶ ಶ್ರೀರಾಮ ನಿನ್ನ ಪಾದ ದಾಸರು ಕಾಣಲು ತಮ್ಮ ಭಕ್ತಿ ಪಾಶದಿಂದ ಬಿಗಿದು ಕಟ್ಟಿ ನ್ನೇಸು ಕಾಲದಿ ಬಿಡರೆಂದರಿದು 3
--------------
ರಾಮದಾಸರು
ನೆಚ್ಚಿಕೆಯಿಲ್ಲದ ದೇಹ ನಂಬಬೇಡಿರೊ ಗಡಅಚ್ಯುತಾನಂತನ ಪಾದದಿಂಬು ಬೇಡಿರೊ ಪ.ದಿನಪನುದಯದಲೆದ್ದು ನಿತ್ಯಕರ್ಮವಜರಿದುದೀನ ವೃತ್ತಿಯಲಿ ಧನವನೊದಗಿಸಿದಿರೊವಿನಯವಿಲ್ಲದೆ ವೈವಸ್ವತನ ಭಟರೊಯ್ವಾಗಮನಸಿನ ಹವಣು ಸಂಗಡ ಬಾಹದೆ 1ಅರಿಯಾರು ವರ್ಗಾಳಿಗೊಳಗಾಗಿ ಸತಿಸುತರಪರಕಿಂದಧಿಕರೆಂದು ಬಗೆವರೇನೊಕರುಣವಿಲ್ಲದೆ ಯಾತನೆಗೆ ಪೊಗಿಸಿ ಬಡಿವಾಗತರುಣಿ ಸಂಪದವಾಗ ಸಹಾಯವಾಹದೆ 2ಮುನ್ನೇಸು ಜನ್ಮಗಳ ವೃಥಾ ಕಳೆದೆಯಲ್ಲದೆ ಪ್ರಸನ್ನವೆಂಕಟನ ಪದವಿಡಿಯಲಿಲ್ಲಚೆನ್ನಾಗಿ ಮರುತಮತವಿಡಿದು ನಡೆದರೆ ನಿಮ್ಮಮನ್ನಿಸಿ ಗತಿಗೊಡದಿಹನೆ ರಂಗ ನೋಡಿ 3
--------------
ಪ್ರಸನ್ನವೆಂಕಟದಾಸರು