ಒಟ್ಟು 5 ಕಡೆಗಳಲ್ಲಿ , 2 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಷ್ಟು ದಿನದ ಪೂಜೆ ಹಿಡಿದೆಣ್ಣಾ ಸತಿಯೆಂಬ ಮಾರಿದಿ- ನ್ನೆಷ್ಟು ದಿನ ಪೂಜೆ ಮಾಡಬೇಕಣ್ಣಾ ಪ ಎಷ್ಟು ದಿನದ ಪೂಜೆ ಹಿಡಿದಿ ನ್ನೆಷ್ಟುದಿನ ಮುಂದೆ ಬಾಕಿ ಉಳಿದಿದೆ ಕಷ್ಟಕಂಜದೆ ಬಿಡದೆ ಅನುದಿನ ನಿಷ್ಠೆಯಿಂದ ಪೂಜೆ ಮಾಡುವಿ ಅ.ಪ ಒಬ್ಬರ ಮನೆ ಮುರಿದು ತರುವಿ ಅವಳಿಗೇನೆ ಹಬ್ಬಮಾಡಿ ಉಣಿಸುತಿರುವಿ ಮತ್ತು ಇನ್ನು ಒಬ್ಬರೈತರ ಬೊಬ್ಬೆ ಹೊಡೆಯುವಿ ದಬ್ಬಿ ಓಡಿಸುವಿ ಹಬ್ಬ ಹುಣ್ಣಿಮೆ ಬರಲು ವೈಭವದುಬ್ಬಿಉಬ್ಬಿವಸ್ತ್ರ ಒಡವೆ ಅಬ್ಬರದಿಂದುಡಿಸಿ ತೊಡಿಸಿ ಮಬ್ಬಿನಿಂದ ಹಿಗ್ಗುತಿರುವಿ 1 ಧನವ ತಂದು ಅವಳಿಗರ್ಪಿಸಿ ಮತ್ತು ನಿನ್ನಯ ಮನವ ಅವಳ ವಶಕೆ ಸಲ್ಲಿಸಿ ಎಂಟುಗೇಣಿನ ತನುವು ಅವಳಾಧೀನದಲ್ಲಿರಿಸಿ ಕುಣಿವಿ ಪಶುವೆನಿಸಿ ಪಾಲಿಸಿ ದಿನಗಳೆಯುವಿ ನೋಡಿಕೊಳ್ಳದೆ 2 ಬಂದಕಾರ್ಯ ಮರೆದುಬಿಟ್ಟ್ಯಲ್ಲ ಹೆಡತಲೆಮೃತ್ಯು ಹಿಂದೆ ನಿಂತು ನಲಿಯುತಾಳಲ್ಲ ಹೇ ಪಾಪಿ ನೀನು ಒಂದೂ ವಿಚಾರ ಮಾಡಿ ಅರೀಲಿಲ್ಲ ಮಂದನಾದೆಲ್ಲ ತಂದೆ ಶ್ರೀರಾಮನ್ನಂತಂಘ್ರಿಗೊಂದಿ ಭಜಿಸಿ ದಾಸನಾಗಿ ಅಂದಮಾದ ನಿತ್ಯಮುಕ್ತಿ ಪಡೆವ ಸುಸಂಧಿ ನಡುವೆ ಹೋಗುತಾದರ್ಲ3
--------------
ರಾಮದಾಸರು
ಎಷ್ಟು ಮಾತ್ರ ನಿಂದಲ್ಲದ್ದು ಹರಿ ಸೃಷ್ಟಿಯೊಳಗೆ ಎನ್ನ ಹುಟ್ಟಿಸಿದ್ದು ಪ ನಷ್ಟದೇಹ ಕೊಟ್ಟು ದುಷ್ಟ ಬವಣೆಯಿಂದ ಕಷ್ಟದೊಳಗೆ ಎನ್ನ ನೂಕಿದ್ದುಅ.ಪ ಉಳಿದ ಪಾಪಶೇಷ ಕಳೆಯದಲೆ ಎನ್ನ ಇಳೆಯವಾಸಕ್ಯಾಕೆಳೆಸಿದಲೇ ನಳಿನನಾಭ ನಿನ್ನ ಬಳಿ ಇದೆ ನ್ಯಾಯವೆ ಕಳವಳಪಡಲು ನಾನೊಳಿತೇನು ನಿನಗೆ 1 ಎಷ್ಟು ರೀತಿ ಕಷ್ಟ ತಡಿಬೇಕೊ ಇ ನ್ನೆಷ್ಟುದಿನ ಹೀಗೆ ಕಳೀಬೇಕೊ ಕರ್ಮ ಎನ್ನದಿರಲಿಕ್ಕಾಗಿನು ಶಿಷ್ಟಜನುಮ ಮತ್ತು ಕೊಟ್ಟ್ಯಾಕೊ 2 ಭಕ್ತವತ್ಸಲನೆಂಬ ಬಿರುದೇನೋ ನಿನ್ನ ಭಕ್ತರ ಅಭಿಮಾನ ತೊರೆದೇನೊ ಭಕ್ತರಿಗೀತೆರ ಮೃತ್ಯುಬಾಧೆಯೇನು ಮುಕ್ತಿದಾಯಕ ಜಗತ್ಕರ್ತ ಶ್ರೀರಾಮನೆ 3
--------------
ರಾಮದಾಸರು
ತಾಳು - ತಾಳು - ತಾಳಬೇಕೆನ್ನುವಿರೋ ಗುರುವೇ ಪ ಇನ್ನೆಷ್ಟುದಿನ ತಾಳಬೇಕೋ ತಿಳಿಯಾದೋ ಅ.ಪ. ಆಶ್ರಿತಜನ ರಕ್ಷಕನೆಂದೂ ನಂಬಿದೇನೊ ಪ್ರಭುವೇ | ಪಾದ ಶ್ರೀ ರಾಘವೇಂದ್ರ ಪ್ರಭವೇ 1 ತನುವಿನೊಳಗೆ ಬಲವು ಇಲ್ಲಾ ಮನದೊಳಗೆ ಧೃಡಾವಿಲ್ಲ ಇನ್ನಾದರು ದಯಮಾಡಿ ಸಲಹಯ್ಯ ಪ್ರಭವೇ2 ದುರಿತ ರಾಶಿಗಳ ನಾಶಗೊಳಿಸೆ ನಿನ್ಹೊರತ್ಯಾರಿಲ್ಲ ಪ್ರಭುವೇ ತ್ವರಿತದಿ ಕರುಣ ಕಟಾಕ್ಷದಿ ನೋಡು ಶ್ರೀ ರಾಘವೇಂದ್ರ ಗುರುವೇ 3 ಈ ಸಂಸಾರ ಶರಧಿಯೋಳ್ ಮುಳುಗಿ ಬಳಲಿದೆ ಗುರುವೇ ಘಾಸಿಗೊಂಡಿಹೆ ಕೃಪೆಮಾಡೈ ಶ್ರೀ ರಾಘವೇಂದ್ರ ಗುರುವೇ 4 ತಡೆಮಾಡದೆ ಕಡೆಹಾಯಿಸೋ ಶ್ರೀ ರಾಘವೇಂದ್ರ ಪ್ರಭವೇ 5
--------------
ರಾಧಾಬಾಯಿ
ನೀನೆ ದಯಾಸಿಂಧು ದೀನಜನರ ಬಂಧು ಧ್ಯಾನಿಪ ಭಕುತರ ಪ್ರಾಣಪದಕನೆ ರಂಗ ಪ ತೊಳಲಿಬಳಲುವ ಮಾನರಕ್ಷಿಸು ಜಾನಕೀಶ ಅ.ಪ ಎಷ್ಟುಪರಿ ಅನೃತವನಾಡಿದೆ ಈ ಹೊಟ್ಟೆಗಾಗಿ ಕೆಟ್ಟ ಕೃತ್ಯಮಾಡಿ ನಾ ದಣಿದೆ ಇ ನ್ನೆಷ್ಟುದಿನ ಈ ದುಷ್ಟ ಬವಣೆ ಎನಗೆ ಸ್ಥಿರವಿದೇ ಭ್ರಷ್ಟನಾಗುಳಿದೆ ಕೊಟ್ಟ ಒಡೆಯರು ಬಿಡದೆ ಕಟ್ಟಿಕಾಡ್ವರು ನಿಲ್ಲಗೊಡದೆ ಇಷ್ಟ ಸತಿಸುತರ್ಹೊಟ್ಟೆಗಿಲ್ಲೆಂದಟ್ಟಿ ಬಡಿವರು ಬಿಟ್ಟುಬಿಡದೆ ಬಿಟ್ಟಿದುಡಿದೆಷ್ಟು ಬಳಲಲಿ ಸೃಷ್ಟಿಗೀಶ ದಯಾದೃಷ್ಟಿಯಿಂ ನೋಡೋ ಕೃಷ್ಣ 1 ಮೋಸಹೋದೆ ಬಲು ಭ್ರಮಿಸದ್ದನು ಭ್ರಮಿಸಿ ತುಸು ಕರುಣವಿಲ್ಲದೆ ಘಾಸಿಯಾದೆ ಮಾತೆಪಿತರ ಮನ ನೋಯ್ಸಿ ವ್ಯಸನಕೂಪದಿ ವಾಸಮಾಡಿದೆ ಕಾಸುಹಣಬಯಸಿ ಅಧಮಸುಖನೆನೆಸಿ ಆಸೆÀಯೆಂಬುವ ಪಾಶ ಎನ್ನನು ನಾಶಮಾಡಿತು ಮುಸುರೆಯನು ಕಟ್ಟಿ ಭಾಷೆ ಕೆಡಿಸಿ ದೋಷಕೆಳಸಿತು ದೋಷ ಗಣಿಸದೆ ಶ್ರೀನಿವಾಸ ಜಗದೀಶ ಕೇಶ 2 ಪಾಪಲೋಪನೆ ಶ್ರೀಶ ಶ್ರೀರಾಮ ಕೃಪೆಯಿಂದ ನೋಡೊ ಪಾಪಿಯಿವನೆಂದು ಮರೆಯದಿರು ಪ್ರೇಮ ಹೇ ಪರಮನೆನ್ನಯ ಪಾಪರಾಶಿಯ ಕಳೆದುಕೊಡಲಿ ಕ್ಷೇಮ ಹೇ ಪರಬ್ರಹ್ಮ ಸ್ಥಾಪಿಸೆನ್ನಯ ಉದರಕಮಲದಿ ಶ್ರೀಪತಿಯೆ ನಿಮ್ಮ ನಾಮ ಅಮೃತ ತಾಪಬಿಡಿಸದೆ ಗಜವ ಸಲಹಿದೆ ಶಾಪದಿಂ ಪೊರೆದಂಬರೀಷನ ದ್ರುಪದನುಜಳ ಮಾನಕಾಯ್ದಾಪತ್ತು ಬಾಂಧವ ಭಕ್ತವತ್ಸಲ ದೇವ 3
--------------
ರಾಮದಾಸರು
ಸಾಗಿಬಾರಯ್ಯ ನಾಗಶಯನ ಪ ಭೋಗದಾಸೆ ನೀಗಿಸೆನ್ನು ಬೇಗ ರಕ್ಷಿಸು ಬಾಗಿ ಬೇಡ್ವೆ ಅ.ಪ ದುಷ್ಟಭವದರಿಷ್ಟದಲಿ ಇ ನ್ನೆಷ್ಟುದಿನ ನಾ ಕಷ್ಟಬಡಲಿ ದೃಷ್ಟಭ್ರಷ್ಟತೆ ನಷ್ಟಗೊಳಿಸಿ ಶಿಷ್ಟಸಂಗದೊಳಿಟ್ಟು ಸಲಹೊ 1 ಜನನ ಮರಣವ ನೆನೆಸಿಕೊಳ್ಳದೆ ಬಿನಗುತನದಲಿ ದಿನವಗಳೆದೆ ಅಣುಗನ ಘನತಪ್ಪು ಗಣಿಸದೆ ಘನ ಘನ ನಿಮ್ಮ ನೆನಹ ಪಾಲಿಸು 2 ಸ್ವಾಮಿಯೆನ್ನಯ ನೇಮವಿಲ್ಲದ ಕಾಮಿತಂಗಳ ದೂರಮಾಡಿ ಪ್ರೇಮದೆನ್ನಗೆ ಕ್ಷೇಮಕೊಡು ಶ್ರೀ ರಾಮ ಮೂಜಗ ಸಾರ್ವಭೌಮ3
--------------
ರಾಮದಾಸರು