ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಿ ನೀನೆ ವೇಲಾಪುರಿ ಶ್ರೀ ಚನ್ನರಾಯಾ ಪ ಪೊಳೆವ ನಂದನವನದಲಲರ್ದ ಮಾವಿನ ನೆಳಲ ಲಲರುವಾ ಸಿರಿತೋಳ ತಲೆಗಿಂಬನೊರಗೀ ಅಳಿಯ ಮೃದುಗಾನಕ್ಕೆ ತಲೆದೂಗುತಲೆ ನುಡಿದ ವಿಲಸಿತದ ಸರಸ ವಚನವ ಚೆನ್ನರಾಯಾ 1 ಬೆಳದಿಂಗಳೆರಕದಂದದ ಸಾರದ್ಹಂದರದಿ ಪೊಳೆವಿಂದುಕಾಂತದ ಜಗುಲಿಯೊಳೆನ್ನ ತಲೆಯ ಮಗ್ಗಲನೊರಗಿ ಸುಳಿವೆಲರಗಾಳಿಗಂಜಿಸುತ ಕಲೆಯರಿತು ಮೈಮರಸಿದುದ ಚನ್ನರಾಯಾ 2 ತನುಮಿಸುಕೆ ಬಹುವಿಧದಿ ಧ್ವನಿಗೈವ ಶಕುನಿ ಪೆಸ- ರಿನ ಮಂಚದಲಿ ಹಂಸತೂಲ ತಲ್ಪದಲಿ ಮನಸಿಜಾಗಮವರಿತು ಮನವ ಮೆಚ್ಚಿಸಿದೆ ಎ- ನ್ನಿನಿಯ ಶ್ರೀ ವೈಕುಂಠಪತಿ ಚೆನ್ನರಾಯಾ 3
--------------
ಬೇಲೂರು ವೈಕುಂಠದಾಸರು
ನೀಲವರ್ಣ ವಿಠಲ ನಾ ನಿನ್ನ ಮೆಚ್ಚಿದೆ ಎನ್ನಪಾಲಿಸಯ್ಯ ಪರಮಪಾವನ್ನ ಮೆಚ್ಚಿದೆ ಪ. ಶರಧಿ ಲೋಚನಕೆ ಭಯ ನಿನ್ನವರ ನೀಲೋತ್ಪಲದೀ ವಕ್ಷದೊಳ್ ಘಾಯಸ್ಮರನ ಧಾಳಿಗೆ ಕಡುನೊಂದೆನೊ ಪ್ರಿಯಾ ನಿನ್ನಕರುಣಕವಚವನ್ನು ತೊಡಿಸೊ ಜೀಯ 1 ಪಾದ ಬಾಲರವಿಯ ನಿನ್ನತರಳಲೋಚನಕೆ ಮುಖೇಂದು ಛವಿಯಗುರುಮಾಡಿ ಸಲಹಯ್ಯ ಸಿರಿದೇವಿಯ ಎನ್ನೊಡನೆವರವ[ಪಡೆವೆನು] ನಿನ್ನಂಘ್ರಿಸೇವೆಯ 2 ಮುನಿಜನ ಮನಕೆ ಸಿಲುಕದಿಪ್ಪನ ಎನ್ನಮನೆಗೆ ಬಾರೆಂಬುದುಚಿತವಲ್ಲ ನಿನ್ನಅನಿಮಿತ್ತ ಬಂಧುವೆ ನೀ ದಯಾಸಂಪನ್ನಎನ್ನಿನಿಯ ಬಾರಯ್ಯ ನೀನು ಹಯವದನ್ನ 3
--------------
ವಾದಿರಾಜ