ನಿನ್ನವ ನಾನು ಎನ್ನಯ್ಯ ನೀನು
ನಿನ್ನಿಂದೆನಾನಾ ಎಂದೆಂಬೆ ನಾನು ಧ್ರುವ
ನಿನ್ನೊಳು ದಾವ ನಾನು ಎನ್ನೊಳಗಿಹೆ ನೀನು
ನಿನ್ನಿಂದೆ ಜೀವಿಸುವನಾಗಿಹೆನು 1
ನನ್ನವಿಡಿದು ನಾನು ಎನ್ನ ಬಾಹ್ಯಾಂತ್ರ ನೀನು
ಸೂತ್ರ ನೀನು 2
ಎನ್ನ ಪ್ರೇರಕ ನೀನು ನಿನ್ನ ಪ್ರೀತ್ಯರ್ಥ ನಾನು
ನಿನ್ನಿಂದಾದೆ ಪವಿತ್ರ ಪಾತ್ರ ನಾನು 3
ನೀನೆ ಸ್ವಯಂ ಭಾನು ನಿನ್ನಿಂದುದಯ ನಾನು
ನಿನ್ನಿಂದಾದ ಮಹಿಗೆ ಪತಿಯೇ ನೀನು 4