ನ್ನಿಂತಾವಳೀ ಜಗದೊಳುಂಟೇನೆ ರಮಣೀ ಪ
ನಿಂತಾಗೆ ನುಂಗಿದಳು ಕಂತೆ ಕಬ್ಬಾ ಅ.ಪ
ಗರತಿಯು ತಾನಲ್ಲ ಗೌಡಿಯ ತಾನಲ್ಲ
ಗುರುತೇಳುತದೆ ನೀವೆದ್ದರೆ ಕೇಳಿರೈ
ಸರಿತಾಯಿ ಪರಿಯುತ್ತೆ ವರಗಂಡನಿಗೆ ಮೋಸ
ಕರಿಯುತ್ತಳಿಹ ಪ್ರಖ್ಯಾತ ನಳ್ಳಿಯೊಳು 1
ಆದಿಲಿ ಹೊಗ ಪರಬೀದಿಯೊಳು ತಾನೆಂತೂ
ವಾದಿಸಿ ಅವರೊಳು ಭೇದವಿಡಿದೆ
ಕಾದಿರುವೆ ನಿನಗಾಗಿ ಕಾಮನಯ್ಯನೆ ಬಾರೊ
ವೇದಗೋಚರ ಗುರು ಶ್ರೀತುಲಸೀರಾಮಾ2