ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಲೆಯ ತೂಗಿ ನಗುವುದೇನೊ ಚೆಲುವ ತಿಮ್ಮರಾಯ ನೀ ತಿಳಿಸಿದಂತೆ ನುಡಿದೆನಿಂದು ಸಲುಹಬೇಕು ಜೀಯ ಪ. ಯೋಗ ಮಾಯ ಶಕ್ತಿ ತಾಳ ರಾಗ ರಚನೆಯರಿಯೆ ಲಾಘವಾದಿ ವರ್ಣಭೇದವಾಗಲಿದನು ತೊರೆಯೆ ಶ್ರೀಗುರು ಮುಖೇಡ್ಯ ನಿನ್ನಾದಾಗಲು ನಾ ಮರೆಯೆ ನಾಗಶಯನ ನಿನ್ನ ಪದಕೆ ಬಾಗಿ ನುಡಿವೆ ದೊರೆಯೆ 1 ಮಾನಸ ವಾಕ್ಕರ್ಮವೆಲ್ಲ ನೀನೆ ಮಾಳ್ಪಿಯೆಂದು ಧ್ಯಾನಿಸಿಕೊಂಡಿಹೆನು ಭಕ್ತಾದೀನ ಕರುಣಾಸಿಂಧು ಮಾನವಿಯ ನುಡಿಯೊಳಿರುವ ನಾನಾ ಥರವ ಕುಂದು ನೀನೆ ಕ್ಷಮಿಸಬೇಕು ಪದ್ಮಮಾನ ದೀನ ಬಂಧು 2 ಬುದ್ಧಿಹೀನ ಶಿಶುವು ನುಡಿವಾ ಬದ್ಧ ಮಾತಿನಿಂದ ಲೆದ್ದು ಬಂದು ಜನನಿ ತೊಡೆಯೊಳಿದ್ದು ಕೇಳುವಂದ ಸಿದ್ಧವಾಗು ಶ್ರೀನಿವಾಸ ಶುದ್ಧ ಪೂರ್ಣಾನಂದ ಗೋಪಿ ಕಂದ 3
--------------
ತುಪಾಕಿ ವೆಂಕಟರಮಣಾಚಾರ್ಯ
ನಿನ್ನ ನಂಬಿದೆನಯ್ಯ ಚನ್ನಕೇಶವರಾಯ ಇನ್ನಾದಾರೂ ಕೃಪೆಯ ತೋರಿಸಯ್ಯ ಪ ಎನ್ನ ಕರ್ಮದ ಫಲದಿ ಬನ್ನಗೊಂಡಿಹೆನಯ್ಯ ನಿನ್ನ ಚರಣವನೆನಗೆ ಸನ್ನಿಹಿತ ಮಾಡಯ್ಯ ಅ.ಪ ನಡೆವುದೂ ನಿನಗಾಗಿ ನುಡಿವುದೂ ನಿನಗಾಗಿ ಪಡೆವುದೂ ನಿನಗಾಗಿ ಎನ್ನಿಸಯ್ಯ ಕೊಡುವವನು ನೀನಾಗಿ ಪಡೆವವನು ನಾನಾಗಿ ಪೊಡವಿಯಲೆಷ್ಟುದಿನ ಬಾಳ್ವುದಯ್ಯ 1 ಕಲಿಯುಗದಿ ಭಜನೆಯಿಂದಲೆ ಭವವು ಕಳೆವುದೆಂದು ಉಲಿದರೈ ವ್ಯಾಸಾದಿ ಮುನಿವರ್ಯರು ಕಲುಷ ಪೂರಿತನಾಗಿ ಬಲುನೊಂದೆ ಕೈ ಪಿಡಿಯೊ ಮಾಂಗಿರಿರಂಗ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಭದ್ರಾಮೂರುತಿ ನಿರ್ವಾತಾಂಹ್ವ ಪ ಹೃದ್ರೋಗ ಕಳೆದು ಜ್ಞಾನಾದ್ರ್ರ ಸ್ವಾಂತನ ಮಾಡು ಪದ್ರಾ ಸಾಮಗಾಘ ಸಮುದ್ರ ದಾಟಿಸಿ ಬೇಗ ಅ ಏಸೇಸು ಕಲ್ಪಗಳಲ್ಲಿ ನಿನ್ನಾ ದಾಸನೆಂದು ಎನ್ನ ಬಲ್ಲೀ ಈಶ ನೀನೆಂಬುದು ಲೇಶವರಿಯೆ ಕ್ಲೇಶನಾಶನ ಪ್ರಭುವೆ ವಾರಾಶಿಜೆ ವಲ್ಲಭ ವಾಸವಾನುಜ ವನಧಿಶಯನ ಮ ಹೇಶವಂದಿತ ವರದ ಹೇ ಕರು ಣಾ ಸಮುದ್ರ ಕರಾಳವದನನೆ ನೀ ಸಲಹದಿರೆ ಕಾಣೆ ಕಾಯ್ವರ 1 ಹೇಮ ಕಶ್ಯಪು ತನ್ನ ಸುತನಾ ನೋಯಿಸೆ ಶ್ರೀ ಮನೋಹರನೇ ಆನತನಾ ವ್ಯೋಮ ಪರ್ವತಾಂಬುಧಿ ಧಾಮದೊಳುಳುಹಿದ ಭೂಮ ಸನ್ಮುನಿ ಗಣಸ್ತೋಮ ವಂದಿತ ಪಾದ ಸಾಮಜೇಂದ್ರನನರಸಿಯೊಳು ಸು ತ್ರಾಮನಂದನನಾ ರಣದಿ ಕುರು ಭೂಮಿಪತಿ ಸಭೆಯೊಳಗೆ ದ್ರೌಪದಿ ಯಾ ಮಹಾತ್ಮರ ಕಾಯ್ದ ಕರುಣಿ 2 ವೇದಗಮ್ಯನೆ ವೇದ ವ್ಯಾಸ ಕಪಿಲ ಯಾದವೇಶ ಮಹಿದಾಸ ಶ್ರೀದ ಶ್ರೀಶ ಅ ನ್ನಾದಾ ಕಲ್ಕಿ ಧನ್ವಂತ್ರಿ ಮೇಧಾವಿ ಪತಿಯ ಏವ ಷಾದರೋಗಂಗಳನಳಿದು ಮಹ ದಾದಿದೇವ ಜಗನ್ನಾಥ ವಿಠ್ಠಲ ಆದರದಿ ಪ್ರಹ್ಲಾದವರ 3
--------------
ಜಗನ್ನಾಥದಾಸರು
ವರುಣಗೂ ನಾರಾಯಣಗು ನೆಂಟತನ ಮಾಡುವದಕೆ |ಸರಿಯೆ ಸಂದೇಹವೇನು ಸಮ್ಮೀಸಿ ನೋಡಿರಿ ಪಹೆಂಡಾರು ಬಹು ಮಂದಿ ಜಾರಾ ಪುತ್ರನು ಒಬ್ಬ |ಪಂಡೀತ ಮಗನೊಬ್ಬ ಸಮನೆಲ್ಲಿ ನೋಡಿ1ವಂಶಾ ವಂದೆ ಇಬ್ಬರದು ಛಲದಿಂದ ಕೊಲ್ಲುವಂಥಾ |ಕೂಸು ಪಾಲಿಸಿದಾರು ಸಮನೆಲ್ಲಿ ನೋಡಿ 2ಸ್ಥೂಲಾ ವಿಗ್ರಹದವರು ಜಡ ಚೇತನಗಳಿಗೆ |ಆಲಯವಾಗಿಹರು ಸಮನೆಲ್ಲಿ ನೋಡಿ 3ಕನಕಾ ಭೂಮಿ ವಜ್ರದಾಹಾರ ಒಬ್ಬಾಗೊಬ್ಬಾಗೆ |ವನಮಾಲಿವೈಜಯಂತಿಸಮನೆಲ್ಲಿ ನೋಡಿ 4ತುಳಿಸೀಕೊಂಡೂ ಕೋಪಿಸದೆಲೆವೇ ಹಿಗ್ಗಿದಾರು |ಕಲುಷಾ ವಿದೂರರೂಪಸಮನೆಲ್ಲಿ ನೋಡಿ 5ದ್ವಾರಕ ಪಟ್ಟಣವ ಪ್ರೀತಿಂದ ಪಾಲೀಸೀ |ಹಾರಾವ ಮಾಡಿದಾರು ಸಮನೆಲ್ಲಿ ನೋಡಿ 6ವೃದ್ಧಿ ಹ್ರಾಸಗಳಿಲ್ಲಾ ಅನ್ನಾದಾಪೇಕ್ಷವಿಲ್ಲ |ನಿದ್ರಾ ಶೂನ್ಯರಾಗಿಹರು ಸಮನೆಲ್ಲಿ ನೋಡಿ 7ಸರಸೀಜಾರೂಪಉಳ್ಳವರು ಪೂರ್ತಿ ಮಾಡಿದಾರು |ಸುರರಾ ಮನೋಭೀಷ್ಟಿಯಾ ಸಮನೆಲ್ಲಿ ನೋಡಿ 8ವಿಧಿಯಿಂದ ಜನಿಸಿದಾರು ಜನರೀಗಸಹ್ಯವಾಗಿ |ಒದರುವರು ಇದರಿಂದ ಸಮನೆಲ್ಲಿ ನೋಡಿ 9ನೂತನ ಯಜೊÕೀಪವೀತಾವ ಧರಿಸುವರು ಪ್ರ- |ಖ್ಯಾತಿ ವಸ್ತು ಕೊಟ್ಟಾರು ಸಮನೆಲ್ಲಿ ನೋಡಿ 10ದಾರಿ ತೋರಿದಾರು ವಾನರಾಗಳಿಗೆ ಗುಂಜಿ |ಹಾರಾಯೀಸೂವರಿದು ಸಮನೆಲ್ಲಿ ನೋಡಿ11ವಾಸಾವಿವರ್ಜಿತಾರು ದ್ವೇಷಿಗಳ ಶರೀರ |ನಾಶಾಗೈಸಿದರಿದು ಸಮವೆಲ್ಲಿ ನೋಡಿ12ಶೋಧಿಸೀ ನೋಡಿದಾರೆ ಕರ್ದಾಮ ಜಾಲಯಳ |ಭ್ಯೋದಯಕ್ಕೆ ಕಾರಣರು ಸಮವೆಲ್ಲಿ ನೋಡಿ13ಧರಿಗಾನಂದಾವಿತ್ತಾರಾಲಂಕಾರವಾಗಿ ಖಳರಾ |ತರಿದು ಭಾರವ ಕಳದು ಸಮವೆಲ್ಲಿ ನೋಡಿ 14ಶ್ರೀನಿವಾಸಾಗೆ ಮಾವನೀತಾ ನೀತಾಗು ಹಾಗೆ |ಪ್ರಾಣೇಶ ವಿಠ್ಠಲನು ಸಮವೆಲ್ಲಿ ನೋಡಿ 15
--------------
ಪ್ರಾಣೇಶದಾಸರು