ಚ್ಚಂದಿರವದನೆ ಶಾರದೆ ಪ
ಇಂದೀವರಾಕ್ಷಿ ಶತಾನಂದನ ಪ್ರಿಯೆ ದೇವಿ
ಕುಂದು ನೋಡದೆ ಶ್ರುತಿವಂದೆ ಜ್ಞಾನವ ನೀಡೆ ಅ.ಪ.
ಸಿತಾಬ್ಜಾಸನೆ ಸುಖದಾಯಕಿ ಸುರ
ನಾಥಾರಾಧಿತೆ ವಿಶ್ವನಾಯಕೀ
ವೀತದುರಿತೆ ಶಿವ ಮಾತೆ ಸದ್ಗುಣಮಣಿ
ವಾಗ್ದೇವಿ ಮಾತೆ 1
ಕೋಕಿಲವಾಣಿ ಕವಿಸೇವಿತೆ ಎನ್ನ
ವಾಕು ಲಾಲಿಸೆ ಮನಿವಂದಿತೆ
ತೋಕನೆಂದು ಸುವಿವೇಕ ಬುದ್ಧಿಯನಿತ್ತು
ವಾಕು ಮನ್ನಿಸು ತಾಯೆ 2
ಪಾತಕಿಗಳೊಡನಾಡಿ ನಾ ನಿನ್ನ
ಪೋತಾಬ್ಜಪದ ಭಜಿಸದ್ಹೋದೆ ನಾ
ಪಾತಕವೆಣಿಸದೆ ಸೀತಾರಮಣ ಜಗ
ನ್ನಾಥವಿಠ್ಠಲನಘ್ರಿ ಗೀತಾಮೃತವನುಣಿಸು 3