ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೀಚಕಾಂತಕ ಭೀಮಸೇನರಾಯ ಯಾಚಿಸುವೆ ನಿನಗಾನು ಎಲ್ಲರನು ಸಲಹೆಂದು ಪ ಕುಂತಿ ಜಠರೋದ್ಭವನೆ ಕುವಲಯದೊಳಗಿಪ್ಪಮ ಹಂತರಿಗೆ ಬಪ್ಪ ಜನ್ಮಾದಿರೋಗ ಚಿಂತೆಗಳ ಕಳೆದ ನಿಶ್ಚಿಂತರನು ಮಾಡು ಸ ರ್ವಾಂತರಾತ್ಮಕ ಸುಖದ ಸರ್ವೇಶ ಶಕ್ರಾದಿ ನುತ 1 ದ್ರೌಪದೀರಮಣ ಜ್ಞಾತಾಜ್ಞಾತ ಕರ್ಮಜ ಮ ಹಾಪರಾಧಗಲೆಸದನು ದಿನದಲಿ ನೀ ಪೊರೆಯಬೇಕುಪೇಕ್ಷಿಸದೆ ನಿನ್ನವರ ವಿ ವಿಶ್ವ ಚೇಷ್ಟಕನೆ 2 ಕೌರವಾಂತಕನೆ ಕಾಶ್ಯಪಿಸುತರ ಸಂತೈಪ ಭಾರ ನಿನ್ನದು ಭವದಿ ಭಕ್ತಬಂಧೋ ಪ್ರೇರಕ ಪ್ರೇರ್ಯ ರೂಪಗಳಿಂದ ಸರ್ವರ ಶ ರೀರದೊಳಗಾಡುವೆ ದೇವತೆಗಳೊಡನೆ 3 ಪವಮಾನತನಯ ಪಾಪಿಷ್ಠರೊಳಗಿದ್ದು ನಿ ನ್ನವರನೀಪರಿ ದಣಿಸಿ ನೋಡುತಿಹುದು ಭುವನತ್ರಯೇಶ ಭೂಷಣವೇನೋ ನಿನಗೆ ಸ ತ್ಕವಿ ಕುಲೋತ್ತಂಸ ಕಾವರ ಕಾಣೆ ನಿನ್ನುಳಿದು 4 ಧನಧಾನ್ಯ ಪಶುಪತ್ನಿ ಜ್ಞಾನಭಕುತಿ ತನಗೆ ತಾನೊದಗಿ ಬಪ್ಪುದು ಸುನಿಶ್ಚಯ ಸನಾ ತನ ಜಗನ್ನಾಥ ವಿಠ್ಠಲನೊಲುಮೆ ಪಾತ್ರ 5
--------------
ಜಗನ್ನಾಥದಾಸರು