ಪೂಜಿಸ ಬಲ್ಲೆನೆ ನಾನು ನಿನ್ನಂಘ್ರಿಯ
ರಾಜೀವದಳ ನಯನ ಪ
ಭಂಜನ ಭವ ರಾಮಚಂದ್ರ ಸೀತಾ ಹೃತ್ಕುಮುದ ಚಂದ್ರ ಅ.ಪ
ಪಾರಿಜಾತ ಪುನ್ನಾಗ ಬಕುಳ ಮಂ-
ದಾರ ಮಲ್ಲಿಕ ಕೇತಕೀ-
ಸಾರಸ ಜಾಜಿ ಚಂಪಕ ತುಳಸಿಯುಕರ-
ವೀರವೇ ಮೊದಲಾದ ದಿವ್ಯ ಪುಷ್ಪಗಳಿಂದ 1
ವಿಶ್ವಾದಿ ಸಾಹಸ್ರನಾಮಂಗಳಿಂ ನಿನ್ನ
ಶಾಶ್ವದ್ರೂಪವ ತಿಳಿದು
ಅಶ್ವಮುಖಾನಂದಮಯ ಪರಮಾತ್ಮ ನಿ-
ನ್ನರ್ಚಿಸುವಡೆ ಚಪಲ ಚಿತ್ತಗೆ ಸಾಧ್ಯವೆ 2
ಸೂರ್ಯ ಚಂದ್ರರು ದೀಪ
ನೀರೆಲ್ಲ ಅಭಿಷೇಕವೂ
ತೋರೂವದಿಗ್ವಸ್ತ್ರ ಪೃಥ್ವಿಗಂಧವು ಸರ್ವ
ಸಾರ ಭೋಕ್ತಗೆ ಗುಣಗಳ ತಾಂಬೂಲಾದಿಗಳಿಂದ3
ಕಮಲ ಸದನ ಹಂಸಾಖ್ಯ ಕು-
ಡಿದ ನೀರು ಅಭಿಷೇಕವೂ
ಮುದದಿ ನಿತ್ಯದಿ ಉಂಬುವುದೆ ನೈವೇದ್ಯವು ಪ್ರತಿ
ಪದ ಪ್ರದಕ್ಷಣೆ ಮಲಗುವದೆ ವಂದನೆಯೆಂದು 4
ಒಂದು ಅರಿಯದ ಉಭಯಾಂಧನು ನಾನು ಗೋ-
ವಿಂದ ನಿನ್ನಯ ಭಕ್ತಾರಾ
ಸಂದೋಹದೊಳಗಿಟ್ಟೆನ್ನರ್ಚನೆ ಕೈಕೊಂಡು
ತಂದೆ ಪಾಲಿಸೋ ಗುರುರಾಮ ವಿಠಲ ಸ್ವಾಮಿ 5