ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈ ಭಾಗ್ಯವೆ ನಿನ್ನದೊ ವರ ಭೋಗಿಶಯನಾ ಪ ಸೌಭಾಗ್ಯವೇ ನಿನ್ನ ಮಹಿಮೆ ತಿಳಿಯುವ ಯೋಗಅ.ಪ ನೀನಿಲ್ಲದಾಸ್ಥಾನ ಈ ನಳಿನಜಾಂಡದೊಳಿಲ್ಲ ನೀನೆಲ್ಲವನು ಬಲ್ಲೆ ನಿನ್ನತಿಳಿಯಗೊಡದೆ ಹೀನಮಾನವ ನಾನು ನಿನ್ನನವರತ ಮರೆತರು ನೀ ಎನ್ನ ಮರೆಯದಲೆ ಎನ್ನೊಳಗೆ ಇಹೆ ಎಂಬ 1 ನಿಲ್ಲಿಸಲು ನಿಲ್ಲುವೆನು ಮಲಗಿಸಲು ಮಲಗುವೆನು ತಿಳಿಸಿದರೆ ನಾ ತಿಳಿವೆ ತಿಳುವಳಿಕೆ ನೀನೆ ತಿಳಿಯಗೊಡಿಸೋಎನ್ನಕ್ರಿಯೆಗಳನು ದೇಹದ ನೆಳಲಂತೆ ನಿನಗೆ ನಾನಿಹೆನಯ್ಯ ದೇವಾ 2 ಈ ಜಗತ್ತಿನೊಳಗೆಲ್ಲ ಪೂಜ್ಯಪೂಜಕ ಪೂಜ್ಯ ಪೂಜೋಪಕರಣದೊಳು ನೀನೆ ನಿಂತು ಮೂರ್ಜಗತ್ಪತಿಯೆ ನಿನ್ನನರ್ಚಿಸುವ ಭಜಕರಿಗೆ ನೈಜಸುಖ ವ್ಯಕ್ತಿಯನು ಮಾಡುತಲಿ ಪೊರೆವೇ 3 ನೀರು ತೃಣವನು ಕೊಡಲು ಹರುಷದಿಂದಲಿ ಗೋವು ಕ್ಷೀರವನು ಕರೆದು ಜನರ ಪೊರೆವಂತೆ ಸೂರಿಗಳು ಮಾಳ್ವ ಅಪರಾಧಗಳೆಣಿಸದಲೆ ಕರುಣದಿಂದಲಿ ಅವರ ಪೊರೆವ ಶ್ರೀಹರಿಯೆ4 ಪನ್ನಗಾಚಲನಿಲಯ ನೀನೆ ಎನ್ನೊಳಗಿರಲು ಬನ್ನಪಡಲ್ಯಾತಕೆ ಚಿನ್ಮಯರೂಪ ಎನ್ನಂಥಜೀವರಿನ್ನೆಷ್ಟೋ ಬ್ರಹ್ಮಾಂಡದೊಳು ಘನ್ನಭಕುತಿಯನೀಡೋ ಶ್ರೀಉರಗಾದ್ರಿವಾಸವಿಠಲ 5
--------------
ಉರಗಾದ್ರಿವಾಸವಿಠಲದಾಸರು
ಶಾರದಾಂಬೆ | ಜಯ ಜಯ | ಶಾರದಾಂಬೆಪ. ಶಾರದಾಂಬೆ ಅ.ಪ ನಿರತವು ನೀ ಮನ| ವೊಲಿಯುತಲೆನ್ನಯ | ಕರುಣಿಯೆ ನೀ ದಯ | ದೋರುತ ಪೊರೆವುದು | ಶಾರದಾಂಬೆ 1 ಹರಿನಾಮಾಮೃತ | ವನುದಿನವೆನ್ನಯ | ರಸನೆಯು ಸೇವಿಸು | ವಂದದಿ ನೀ || ವರಗಳ ನೀ ವಾ| ಗ್ದೇವಿಯೆ ಕರುಣಿಸು | ಶಾರದಾಂಬೆ2 ಮರಣದ ಕಾಲದಿ | ಹರಿಯನು ಬಾಯೊಳು | ಸ್ಮರಿಸುವ ಜ್ಞಾನವ | ನೀಯುತಲಿ || ಶರಣನ ಪೊರೆವುದು | ಪರಮ ಕೃಪಾಕರಿ | ಶಾರದಾಂಬೆ 3 ಮಾಡು ನೀ ಕೃಪೆಯ | ನ್ನನವರತ || ಜೋಡಿಸಿ ಕೈಗಳ | ವಿನಯದಿ ಬೇಡುವೆ | ಶಾರದಾಂಬೆ 4 ವೀಣಾಪಾಣಿ | ಕೋಕಿಲ ವಾಣಿ | ಪನ್ನಗವೇಣಿ | ಬೊಮ್ಮನ ರಾಣಿ || ದೀನನ ನುಡಿಗಭಿ | ಮಾನವನೀವುದು | ಶಾರದಾಂಬೆ 5
--------------
ವೆಂಕಟ್‍ರಾವ್
ಶ್ರೀ ವೇಣುಗೋಪಾಲಕೃಷ್ಣಮೂರ್ತೇ ಪ ಕಾವುದೀತನ ನಿನ್ನ ದಾಸನೆಂದನವರತಅ.ಪ ಕಾಯದಿಂದಲಿ ನಿನ್ನ ಚರಣಸೇವೆಯ ಮಾಡಿ ತೋಯಜಾಂಬಕ ನಿನ್ನ ನಾಮ ವಾಚಿಸುತ ಮೂರ್ತಿ ಮಾನಸದಿ ಧೇನಿಸುತ ಈ ಉಪಾಸನೆಯನ್ನನವರತ ಕೊಡು ದೇವ 1 ಲೌಕಿಕದಲ್ಲಿದ್ದರು ಲೋಕೈಕನಾಥನೆ ಏಕಾಂತದಲಿ ನಿನ್ನ ನೆನಪು ಒಂದಿರಲಿ ಮಾಕಳತ್ರನೆ ನಿನ್ನ ಸಕಲಮಂಗಳವಿತ್ತು ಲೋಕದೊಳು ನಿನ್ನ ಭಕುತರೊಳಿಡು ಇನ್ನು 2 ಪವನಾಂತರಾತ್ಮ ಶ್ರೀ ವೇಂಕಟೇಶಾತ್ಮಕ ಶ್ರೀ ವೇಣುಗೋಪಾಲಕೃಷ್ಣಮೂರುತೇ ಭಾವಶುದ್ಧನಮಾಡಿ ಶ್ರೀವರನ ದಾಸರ ಸೇವೆಯನು ಕೊಟ್ಟು ಭವದುಃಖವನೆ ಹರಿಸೊ3
--------------
ಉರಗಾದ್ರಿವಾಸವಿಠಲದಾಸರು