ನೋಡಲು ಬಂದಿರುವ ನಿಮ್ಮನು ಪ
ಬೇಡಿದ ವರಗಳ ನೀಡುವ ದೇವನುಅ.ಪ
ವಾಸುದೇವನ ಕೃಪಲೇಶವ ಪಡೆಯಲು
ಅಸೇತು ಹಿಮಗಿರಿ ದೇಶಗಳಿಲ್ಲಿಹ
ಸಾಸಿರ ಕ್ಷೇತ್ರ ಪ್ರವಾಸವ ಗೈವದು
ಲೇಸಲ್ಲವೆನುತ ದಾಸಜನಗಳನು 1
ಬೆಡಗು ಬಿಂಕಗಳಿಲ್ಲ ಸಿಡುಕನು ಇವನಲ್ಲ
ಬಡವಬಲ್ಲಿದನೆಂಬೊ ಕಡುಭೇದವಿಲ್ಲವು
ಕಡಲಶಯನನಿವ ಪೊಡವಿಯಳಿಗೆ ತ
ನ್ನಡಿಯಾಳುಗಳ ಕರಪಿಡಿದೆತ್ತಲೋಸುಗ2
ಒಂದು ತುಳಸಿದಳ ಬಿಂದು ಗಂಗೋದಕ
ದಿಂದಲೇ ಪರಮಾನಂದವ ಪೊಂದುವ
ತಂದೆ ಪ್ರಸನ್ನನು ಬಂದ ಮಂದಿರದಲಿ
ಇಂದಿರೆ ತಾನಲ್ಲಿ ಎಂದೆಂದು ಇರುವಳು3