ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾರಸಿಂಹ ನಾರಸಿಂಹ ನಾರಸಿಂಹ ಪ ನಿತ್ಯದಲಿ ಬರುವ ಅಪಮೃತ್ಯುವಿನ ಬಾಧೆಯ ಕೃತ್ತಿ ಒತ್ತಿ ಪರಿಹರಿಸಿ ಭೃತ್ಯನಾದ ಜೀವನ್ನ ತೃಪ್ತಿಪಡಿಸುವ ದೇವ ಭಕ್ತವತ್ಸಲ ನಾರಸಿಂಹ 1 ಅಂದು ಸ್ವಪ್ನದಿ ಬಂದೆ ದ್ವಂದ್ವ ಪಾದಕ್ಕೆರಗಿ ನಿಂದು ನಾ ನಿನ್ನ ಬೇಡೆ ಸಂಧಿಸಿ ಕ್ರೂರ ದೃಷ್ಟಿಯಿಂದ ನೋಡಿ ಮಂದೀಗೆ ಕುಂದು ಮಾಡಬ್ಯಾಡೆಂದೆ 2 ಅಂದಿನಾರಭ್ಯ ಬಲು ಬಂಧನಕೆ ಸಿಲ್ಕಿ ನಾ ಪರಿ ಪೇಳಲಾರೆ ಹಿಂದಿನ ಅಘವೆಣಿಸದೆ ಬಂದು ನಾರಿ ಸಹಿತ ತಂದೆ ಈ ಸುತನ ಕಾಯೋ 3 ತಂದೆ ತಾಯಿಯು ನೀನೆ ಬಂಧು ಬಳಗವು ನೀನೆ ಎಂದು ಎನ್ನಗಲದೆ ಬಂದು ನೆಲಸೆನ್ನಲ್ಲಿ ಅಜ್ಞಾನ ಕೊಡದಿರು ವಂದಿಸುವೆನು ನಾರಸಿಂಹ 4 ಮುಂದಾದರು ಹೃನ್ಮಂದಿರದಿ ನೆಲೆಗೊಂಡು ಸಂದರ್ಶನವನೀಯೊ ದೇವ ಕಂದರ್ಪಹರ ವಿಜಯ ರಾಮಚಂದ್ರವಿಠಲರೇಯ ವಂದೆ ಭಕ್ತಿಯ ಪಾಲಿಸು 5
--------------
ವಿಜಯ ರಾಮಚಂದ್ರವಿಠಲ
ಪರಮಾನಂದದೊಳಿರುವ ಪರಿಯನರಿ ಗರುವ ಬೇಡ ಹೇ ಮನಸಾ ಪ ಸಿರಿವರ ನಾರಾಯಣ ನಾಮಾಮೃತ ನರಘಳಿಗೆಯು ಮರೆಯದೆ ನೆನೆ ಮನಸಾಅ.ಪ ಇಂದಿರೆಯರಸನ ಸುಂದರ ಚರಣಗ ಳಂದದ ಶ್ರೀ ತುಳಸಿಯ ದಳದಿ ಚಂದದೊಳರ್ಚಿಸಿ ಕುಂದದ ಭಕುತಿಯೊಳಾ ನಂದದೊಳಿರು ಹೇ ಮನಸಾ 1 ಸಿರಿ ರಾಮನ ಮಂಗಳ ಮೂರ್ತಿಯ ಘನ ಕೊರಳೊಳು ಹಾರಗಳರ್ಪಿಸುತ ಪರಿಪರಿ ಪರಿಮಳ ಪುಷ್ಪಗಳಿಂದಲಿ ಕರುಣಾಕರನನರ್ಚಿಸು ಮನಸಾ2 ಸರ್ವಾಂತರ್ಗತ ಜಗದುದರನ ನೀ ನಿರ್ಮಲ ಪೀಠದಿ ಕುಳ್ಳಿರಿಸಿ ಸರ್ವಷಡ್ರಸೋಪೇತ ಸುಭೋಜನ ಸರ್ವಾತ್ಮನಿಗರ್ಪಿಸು ಮನಸಾ 3 ಸುಫಲ ಕ್ಷೀರ ತಾಂಬೂಲಗಳರ್ಪಿಸಿ ಸಫಲಗೊಳಿಸು ಜನ್ಮವ ಮನಸಾ ಅಪಾರಮಹಿಮನ ಗುಣಗಳ ಕೀರ್ತಿಸಿ ಕೃಪಾನಿಧಿಯ ನಮಿಸೆಲೊ ಮನಸಾ 4 ಅಗಣಿತ ಮಹಿಮನಿಗಾರ್ತಿಗಳರ್ಪಿಸಿ ಮಿಗೆ ಭಕ್ತಿಲಿ ನಮಿಸೆಲೊ ಮನಸಾ ಸುಗುಣಮಣಿಯು ರಘುರಾಮವಿಠಲ ನಿ ನ್ನಗಲದೆ ಹೃದಯದಲಿಹ ಮನಸಾ5
--------------
ರಘುರಾಮವಿಠಲದಾಸರು