ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾರಮ್ಮಾ ಬಾರಮ್ಮಾ ಭಾಗ್ಯದನಿಧಿಯೇ ತೋರಮ್ಮಾ ತೋರಮ್ಮಾ ಕರುಣಾನಿಧಿಯೇ ಪ. ಬಾರಮ್ಮಾ ಮಹಲಕ್ಷ್ಮಿ ತೋರುತ ಕರುಣವ ಬೀರುತ ತವಕದಿ ಸೇರುತ ಪತಿಸಹ ಅ.ಪ. ಶ್ರೀ ರಮಾದೇವಿ ಇನ್ನಾರು ಸಮನಾಗರೇ ಭೂ ರಮೇಶನ ಸೇವೆಗೆ ನಿಲ್ಲಲು ಬಾರಮ್ಮಾ ಭಕ್ತರುದ್ಧಾರ ಮಾಡಲು ಎಲ್ಲಾ ಕಾರಳು ನೀನಾಗಿ ವಾರುಧಿಶಯನಗೆ ಸೇವಿಸಲು ಘೋರತರ ಸಂಸಾರ ಸಾಗರ ಪಾರುಗಾಣಿಪ ಹರಿಯು ನಿನ್ನೊಳು ಸೇರಿಯಿರುತಿಹನೇ ತೋರಿ ಭಕ್ತರಿಗೆ ಚಾರುಕಮಲ ಕರಾರವಿಂದದಿ ಧೀರೆಯೆತ್ತುಪಕಾರ ಮಾಡಲು ವಾರಿಜಾಕ್ಷಿಯೆ ಸಾರುತೀಗಲೆ 1 ಪುಲ್ಲಲೋಚನೆ ನಿನ್ನ ಗಲ್ಲ ಮಿಂಚಿನ ಸೊಬ ಗೆಲ್ಲ ನೋಡುತ ನಿನ್ನ ಒಡನಾಡುವ ಪಲ್ಲವಾಧರೆ ನಿನ್ನ ವಲ್ಲಭ ಹರಿಯಲ್ಲಿ ಎಲ್ಲ ಭಕ್ತರ ಮನಸಲ್ಲ ಅರುಹು ತಾಯೆ ನಿಲ್ಲದೆಲೆ ಕಾನಲ್ಲಿ ಇಹ ಹರಿ ಎಲ್ಲಿ ಭಕ್ತರು ಕರೆ ದಲ್ಲಿ ಬರುತಿಹನೆ ಮಲ್ಲಮರ್ಧನ ಶ್ರೀ ನಲ್ಲ ಕೃಷ್ಣನು ಚೆಲ್ಲಿ ಕರುಣವ ಬಲ್ಲೆ ನಿನಪತಿ ಗುಣಗಳನೆಲ್ಲ ಕಾಯೆ 2 ರಂಗನರ್ಧಾಂಗಿಯೆ ಮಂಗಳ ಮೂರುತಿ ನಿ ನ್ನಂಗಜನಯ್ಯನ ಕಾಣೆ ಕಾಯೆ ಗಂಗಜನಕ ಸಹ ಸರ್ವರಂಗದೊಳಿದ್ದು ನೀ ರಂಗನ ಲೀಲೆಯತಿಸಂಭ್ರಮದಲಿ ನೋಳ್ಪೆ ತುಂಬುರು ನಾರದರು ಪಾಡಲು ರಂಭೆ ಊರ್ವಶಿ ನಾಟ್ಯವಾಡಲು ಸಂಭ್ರಮದಿ ಶ್ರೀ ಶ್ರೀನಿವಾಸನ್ನ ಇಂಬತೋರಿಸೇ ಅಂಬುಜಾಕ್ಷಿಯೇ ಬೆಂಬಿಡದೇ ಎನ್ನ ನಂಬಿರುವೇ ನಿನ್ನ ಕಂಬುಕಂಧರೆ ಕುಂಭಿಣೀಪತಿ ಸಹಿತ ಬೇಗನೆ 3
--------------
ಸರಸ್ವತಿ ಬಾಯಿ