ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವೆಂಕಟೇಶನ ನಂಬಿರೊ ನೀವೆಲ್ಲರೂ | ವೆಂಕಟೇಶನ ನಂಬಿರೋ || ವೆಂಕಟೇಶನ ನಂಬಿ | ಮಂಕುಜನರೆ ನಿಮ್ಮ | ಸಂಕಟ ಪರಿಹರಿಸಿ ತ | ನ್ನಂಕಿತವ ನೀವ ಪ ಗುಣ ಒಂದು ನೋಡಿದಿಯಾ ಅಜಮಿಳ | ಗುಣವೇನು ಮಾಡಿದನು | ಗುಣ ಶಿರೋಮಣಿ ಮ | ರಣ ಬಂದಾಗ ಸ್ಮ | ರಣೆ ಇತ್ತು ಅವನ ನಿ | ರ್ವಾಣಕ್ಕೆ ಕರಿಸಿದಾ 1 ಕುಲದಲ್ಯಾತರವನು | ಕುಲಶಿಖಾಮಣಿ | ನಿಳಗೆ ಪೋಗಿ ಕುಡತಿ ಪಾಲಿಗೆ ಅವನಿಗೊಲಿದು ನಿ | ಶ್ಚಲ ಭಾಗ್ಯವನಿತ್ತ 2 ಗುಣ ಒಂದು ನೋಡಿದಿಯಾ | ವಾಲ್ಮೀಕಿ | ಗಣದ ಕೂಟದವನೆ | ಕ | ರುಣ ಮಾಡಿ ಅವಗೆ ಚ | ರಣವನ್ನು ತೋರಿ ಆ | ಕ್ಷಣದಲ್ಲಿ ಸಾಕೀದ 3 ಪತಿವ್ರತರ ನೋಡಿದಿಯಾ | ಗೋಪಿಯರು ಪತಿ ಧರ್ಮದಲ್ಲಿ ಇದ್ದರೇ | ಪತಿತಪಾವನ ಸಂಗತಿಯಲ್ಲಿ ಆ ನಾರಿಯರಿಗೆ | ಅತಿಶಯವಾದ ಸದ್ಗತಿಯ ಕರುಣಿಸಿದ4 ಗುಣಿ ಕುಲ ಗಣ ಮಿಕ್ಕಾದ ವ್ರತಂಗಳು | ದಣಿದು ಮಾಡಲಿಬೇಡಿರೊ | ಬಣಗುದೈವದ ಗಂಡ ವಿಜಯವಿಠ್ಠಲನ್ನ | ಮನದೊಳು ನೆನೆದರೆ ನೆನೆಸಿದ ಫಲನೀವಾ 5
--------------
ವಿಜಯದಾಸ
ಶ್ರೀವರ ಹರಿ ವಿಠಲ | ಕಾಪಾಡೋ ಇವಳಾ ಪ ಭಾವುಕರ ಪಾಲ ನೆಂ | ದೇವೆ ಶ್ರುತಿ ಸಿದ್ಧ ಅ.ಪ. ಹರಿಸೇವೆ ಕೈಕಂರ್ಯ | ನಿರತಳಾಗಿ ಹಳೀಕೆಹರಿಗುರು ದಾಸ್ಯದಲಿ | ದೀಕ್ಷೆಕಾಂಕ್ಷಿಪಳೋ |ಹರಿಯ ತೈಜಸರೂಪಿ | ವರಮಾರ್ಗ ತೋರ್ಪಪರಿಹರಿಯ ನಿನ್ನಂಕಿತವ | ಇತ್ತಿಹೆನೊ ದೇವಾ 1 ಸಾರತಮ ಹರಿಯ ಜಗ | ನಿಸ್ಸಾರವೆಂದು ಸಂ |ಸಾರ ಶರಧಿಯ ಹಾಯೋ | ವಾರಿಜ ಸುನಾಭಾ |ಆರು ಮಾರ್ಭಕುತಿಗಳ | ವೈರಾಗ್ಯ ಸುಜ್ಞಾನಧೀರ ನೀ ಕರುಣಿಸುತ | ಕಡೆ ಹಾಯ್ಸೊ ಇವಳಾ 2 ಮೋದ ತೀರ್ಥರ ಮತದಿ | ಸಾಧನ ಸುಮಾರ್ಗದಲಿಹಾದಿ ಕ್ರಮಿಸುತ್ತಿಹಳೂ | ವೇದಾಂತ ವೇದ್ಯಾಹೇ ದಯಾ ಪೂರ್ಣಹರಿ | ಸ್ವಾಧ್ವಿಗೆ ತವನಾಮಸುಧೆಯನೆ ಉಣಿಸೊ ಸ | ರ್ಪಾರ್ದಿಗೇ ಓಡೆಯ 3 ಶಮದ ಮಾದಿಯನಿತ್ತು | ಭ್ರಮಮಾರ ಪರಿಹರಿಸೊಅಮಿತ ಮಹಿಮೋಪೇತ | ಸುಮನಸಾರಾಧ್ಯಕರ್ಮನಿಷ್ಕಾಮನದಿ | ರಮೆಯರಸಗರ್ಪಿಸುವಸುಮನೊಭಾವದಲಿ | ಕ್ರಮಿಪ ತೆರಮಾಡೋ 4 ನಿತ್ಯ ನಿಗಮಾತೀತ | ದೈತ್ಯ ಜನ ಸಂಹರ್ತಭೃತ್ಯಳಿಗೆ ಮೈದೋರಿ | ಹೃತ್ಕøಕ್ಷಿಯೊಳಗೇಪ್ರತ್ಯಕ್ಷನಾಗೆಂಬ | ಪ್ರಾರ್ಥನೆಯ ಸಲಿಸೋಹರಿಕರ್ತೃ ಕರ್ಮಾಖ್ಯ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು