ಕಾವುದೆಮ್ಮನು ನೀನು ದೇವರಂಗಯ್ಯ ಪ
ಭಾವಮೈದುನಗೆ ಬೋವನಾದ ರಂಗಯ್ಯ
ನೋವುಬಾರದಂತವನ ಕಾಯ್ದೆ ರಂಗಯ್ಯಾ 1
ಮಾಯವಾದಿಗಳ ಸಂಗ ಬಿಡಿಸೋ ರಂಗಯ್ಯ
ತೋಯಜಾಕ್ಷನೆ ಬೇಡುವೆ ಸ್ವಾಮಿ ರಂಗಯ್ಯ 2
ದಾಸತ್ವ ಮಾತ್ರ ದಯಮಾಡೊ ರಂಗಯ್ಯ 3
ಸತ್ತು ಹುಟ್ಟುವಿಕೆ ಬಿಡಿಸಿ ಸಲಹೊ ರಂಗಯ್ಯ
ಮತ್ತೇನು ಬೇಡೆನು ಮಮ ಬಂಧು ರಂಗಯ್ಯ 4
ರಂಗೇಶವಿಠಲ ನೀನಲ್ಲವೆ ರಂಗಯ್ಯ
ಭಂಗಪಡಲಾರೆ ಭವಹಿಂಗಿಸು ರಂಗಯ್ಯ 5