ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸತಿಯಿಲ್ಲಸುತರಿಲ್ಲ ಬಂದು ಬಾಂಧವರಿಲ್ಲ ನುತ ಕೇಶವನಲ್ಲದೆ ಸದ್ಗತಿ ಎನಗಿಲ್ಲ ಪ ಹೆರರನಾಶ್ರಯಿಸಿ ಬದುಕಬೇಕಲ್ಲ ನರರನನುಸರಿಸಿ ಬಡವಾದೆನಲ್ಲ ಇರುವ ನಾಲ್ಕು ದಿನದ ಬರಿದೆ ಸುಖಕ್ಕಾಗಿ ನರನಿಗೆ ನೀಚನಿಗೆ ಈ ಸ್ಥಿತಿ ಒದಗಿತಲ್ಲ 1 ಹರಿನಿನ್ನ ಭಜಿಸದೆ ಬಲು ಬಾಧೆಯಾಗಿದೆ ಪರಿಪರಿಯ ನೋವನ್ನು ನೀಗುವವರಾರಿಲ್ಲ ಸಿರಿಸಂಪತ್ತಿರುವರೆಗೆ ಸತಿಸುತರೆಲ್ಲ ಕರೆದರೂ ಬರರಲ್ಲ ಬಾಂಧವರು ಸ್ನೇಹಿತರು 2 ಸುಖದಲಿರುವಾಗ ಮನ್ನಿಪರೋ ಎಲ್ಲ ಅಖಿಲಗೋತ್ರಜರು ನೆರೆಹೊರೆಯವರು ಸಖರು ಯಾರಿಲ್ಲ ಸಾವು ಬಂದೆಳೆವಾಗ ಅಖಂಡ ಒಡೆಯ ಜಾಜಿಪುರೀಶ ಕಾಯಬೇಕಯ್ಯ 3
--------------
ನಾರಾಯಣಶರ್ಮರು