ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿಖಿಳ ಗುಣಗಣ ಪೂರ್ಣ ಪ ಅಂಬುಜಾಸನ ಜನಕ ನರಹರಿ ಅಂಭ್ರಣೀ ಜಗನ್ನಾಥ ನಾಯಕ ಬಿಂಬ ವಿಷ್ಣುವೆ ನಿಖಿಳವಿಶ್ವಕೆ ತುಂಬಿ ಭಕ್ತಿಯ ಕಾಯೋ ಕರುಣಿ ಯೇ ಅ.ಪ. ತಂದೆಕಾರಣ ಭವದೀ- ನೀ ಎನ್ನ ಬಂದೆನಲ್ಲದೆ ನಿಜದೀ- ಸುಖಪೂರ್ಣ ನಿಂದು ನಡೆಸದೆ ಭವದೀ- ದಾಟಿನ್ನ ಎಂದಿಗಾದರು ಗೆಲ್ಲುವೆನೆ ಘನ್ನ ಬಂಧನಪ್ರದ ನೀ ಬಂಧಮೋಚಕ ತಂದ ವಿಷ್ಣುವೆ ಮೂಲಕಾರಣ ವೆಂದು ಶೃತಿಗಳವೃಂದ ನುಡಿವುವು ಬಂದು ನಿನಗಿಂತಧಿಕರಾರೈ ನಿಂದು ಹೃದಯದಿ ಸರ್ವಕಾಲದಿ ತಂದು ಉಣಿಸುವೆ ಸಕಲ ವಿಷಯವ ಬಂಧಿ ನಾನಿಹೆ ಜಡವೆ ನೀ ಬಿಡೆ ಮುಂದಿನಾಗತಿ ಬೇಗ ತೋರೈ ಇಂದಿರೇಶ ಮಹೇಂದ್ರ ಸುಖಮಯ ಕಂದರಾಶ್ರಯ ಬ್ರಹ್ಮಮಂದಿರ ನಂದಿವಾಹನ ತಾತ ವಿಭುವರ ಚಂದಗೋಚರ ಸಾರ್ವಭೌಮನೆ ಕೂಂದುನಕ್ರನ ಗಜವ ಸಲಹಿದೆ ನಂದನೀಡಿದೆ ಪಾರ್ಥಮಡದಿಗೆ ತಿಂದು ಎಂಜಲ ಕಾಯ್ದೆ ಶಬರಿಯ ಗಂಧ ಕೊಳ್ಳುತ ಕಾಯ್ದೆ ಕುಬ್ಜೆಯ ಕಂದ ಕೂಗಲ್ ಬಂದೆ ಕಂಭದಿ ಇಂದ್ರ ಗೋಸುಗ ಬಲಿಯ ಬೇಡದೆ ಮಂದರಾದ್ರಿಯ ಪೊತ್ತೆ ಸುರರಡೆ ಸುಂದರಾಂಗಿಯುಆದೆ ಹಾಗೆಯೆ ಹಿಂದೆ ಈತೆರ ನಿತ್ಯತೃಪ್ತನೆ ಬಂದು ಸಲಹಿದ ಭಕ್ತವೃಂದವ ಮಂದನಾದರು ಶರಣುಬಿದ್ದವ ನೆಂದು ಸಲಹೈ ಪೂರ್ಣಕರುಣಿಯೇ1 ಕೂಡಿಸುತ ಮನ ವಿಷಯ ಬಲೆಯಲ್ಲೀ ಮಾಡಿಸುವೆ ಮಾಡಿದ್ದ ದಿನದಿನದೀ ಗೂಢ ನಿನ್ನಯ ಭಕ್ತಿ ಕೊಡಲೊಲ್ಲೀ ಕೇಡುಮೋಹ ಸಜಾಡ್ಯ ಹರಿಸಿಲ್ಲೀ ಓಡಿಓಡಿಸೆ ಜಗವು ನಡೆವುದು ನೋಡಿನೋಡಿಸೆ ನಾವು ನೋಳ್ಪೆವು ಮಾಡಿಮಾಡಿಸೆ ಕರ್ಮವಾಹುದು ಪ್ರೌಢ ನಿನ್ನಯ ಬಲದ ವಿಶ್ವಕೆ ಕಾಡಿಕಾಡಿಪ ವಿಷಯ ಬಿಡಿಸುತ ಹಾಡಿಹಾಡಿಸಿ ನಿಮ್ಮ ಕೀರ್ತನೆ ಆಡಿಆಡಿಸಿ ಸಾಧುಸಂಗದ ಜಾಡುತೋರಿಸೊ ಭಕ್ತಿ ಮಾರ್ಗದ ಕ್ರೋಢನರಹರಿ ಮತ್ಸ್ಯವಾಮನ ಪ್ರೌಢ ಭಾರ್ಗವ ರಾಮಕೃಷ್ಣನೆ ಗಾಡಿಕಾರ ಪರೇಶ ಬುದ್ಧನೆ ದೂಡು ಕಲಿಯನು ಕಲ್ಕಿದೇವನೆ ಕೂಡು ಮನದಲಿ ಬಾದರಾಯಣ ನೀಡು ಜ್ಞಾನವ ಜೀಯ ಹಯಮುಖ ಮಾಡು ದತ್ತಾತ್ರೇಯ ಕೃಪೆಯನು ಈಡುಕಾಣದು ಕಪಿಲಮೂರ್ತಿಯೆ ಬೀಡುಗೈದಿಹ ಬೀಜ ನಿದ್ರೆಯು ನೋಡಗೊಡದೈ ನಿನ್ನತುರ್ಯನೆ ನಾಡುದೈವಗಳನ್ನು ಭಜಿಸಲು ಓಡದದು ಎಂದೆಂದು ಸತ್ಯವು ಮಾಡುತಲಿ ಸಾಷ್ಟಾಂಗ ನತಿಗಳ ಜೋಡಿಸಿಹೆ ಶಿರ ಪಾದಪದ್ಮದಿ ಗಾಢಪ್ರೇಮದಿ ಸಲಹು ಭೂಮನೆ ಮೂಡಿಸುತನಿಜ ಭಕ್ತಿ ಜ್ಞಾನವ 2 ಎನ್ನ ಯೋಗ್ಯತೆ ನೋಡೆ ಫಲವಿಲ್ಲ ನಿನ್ನಕೃಪೆ ತೋರದಿರೆ ಗತಿಯಿಲ್ಲ ಅನ್ಯ ಹಾದಿಯು ಯಾವುದೆನಗಿಲ್ಲ ಘನ್ನಚಿತ್ತಕೆ ಬರಲು ತಡಿಯಿಲ್ಲ _ ಹೇನಲ್ಲ ಪೂರ್ಣಜ್ಞಾನಾನಂದ ಶಾಶ್ವತ ಪೂರ್ಣ ಚಿನ್ಮಯ ಪೂರ್ಣ ಮೂಲದಿ ಪೂರ್ಣ ನಂದದಿ ಪೂರ್ಣ ಅವಯವಿ ಪೂರ್ಣಶಕ್ತನೆ ಪೂರ್ಣಬೋಧ ಮುನೀಂದ್ರ ವಂದಿತ ಶರಧಿ ದೇವನೆ ಪೂರ್ಣನಿತ್ಯಾನಂದ ದಾಯಕ ಪೂರ್ಣಮಾಡೈ ಬಯಕೆ ತೂರ್ಣದಿ ನೀನೆ ಸರ್ವಾಧಾರ ಪ್ರೇರಕ ನೀನೆ ರಕ್ಷಕ ಸರ್ವಶಿಕ್ಷಕ ನೀನೆ ಸೀಮಾಶೂನ್ಯ ನಿಶ್ಚಯ ನೀನೆಪೊಗಳಿತನಿಖಿಳವೇದದಿ ನೀನೆ ವಾಚ್ಯನು ಸರ್ವಶಬ್ದದಿ ನೀನೆ ಮುಕ್ತಾಯಕ್ತ ಸೇವಿತ ನೀನೆ ದೋಷವಿದೂರ ಸ್ಥಾಣುವು ನೀನೆ ಸೃಷ್ಟಾ ದ್ಯಷ್ಟಕರ್ತೃವು ನಿನ್ನಸಮ ಉತ್ಕøಷ್ಟರಿಲ್ಲವು ನಿನ್ನ ದಾಸರು ಸರ್ವಜೀವರು ಭಿನ್ನರೈ ಸರ್ವತ್ರ ಸರ್ವರು ನಿನ್ನ ದಾಸರ ಭಾಗ್ಯಬೇಡುವೆ ಜನ್ಮಜನ್ಮಕು ಇದನೆ ಬಯಸುವೆ ನಿನ್ನ ನಂಬಿಹೆ ನಿನ್ನನಂಬಿಹೆ ಸಿರಿಪತಿ ಕೃಷ್ಣವಿಠಲನೇ 3
--------------
ಕೃಷ್ಣವಿಠಲದಾಸರು
ಬರಲಿಲ್ಲವೆನುತ ನೀ ಹೊರಗಿಕ್ಕಬೇಡ ಉರಗಾದ್ರಿವಾಸ ಶ್ರೀ ವೆಂಕಟೇಶ ಪ ಕಾಸಿಲ್ಲ ಕೈಯೊಳಗೆ ಲೇಸಿಲ್ಲ ಮನೆಯೊಳಗೆ ವಾಸಿತಪ್ಪಿಯೆ ಬಹಳ ಬೇಸತ್ತೆನು ಈಸು ಪ್ರಯಾಸ ನಿನ್ನ ದಾಸಗೊದಗಿದ ಮೇಲೆ ದೋಷವೆನ್ನಲ್ಲಿಲ್ಲ ಶೇಷಾದ್ರಿವಾಸ 1 ಗೆಲುವಿಲ್ಲ ಮನದೊಳಗೆ ಬಲವಿಲ್ಲ ಕಾಯದೊಳು ಹೊಲಬುದಪ್ಪಿಯೆ ಬಹಳ ಸುಲಿವಾದುದು ಫಲವೇನು ಇದರೊಳಗೆ ಕೆಲಸವೇನಿಹುದಿಲ್ಲ್ಲಿ ಸುಲಭದೊಳು ಬೇರೊಂದು ಪರಿಯ ನೋಡಯ್ಯ 2 ಕತ್ತಲೆಯ ರಾಜ್ಯವನು ಆದಿತ್ಯನಾಳುವ ತೆರದಿ ಸುತ್ತಗಳನೆಲ್ಲವನು ಕಿತ್ತು ಹಾರಿಸಿಯೆನ್ನ ಹತ್ತಿರದಿ ಮೈದೋರು ಭಕ್ತವತ್ಸಲನೆ 3 ಹಿರಿಯೊಳು ಆರ್ಜಿಸಿದ ಗೃಹಕೃತ್ಯವೆಂಬುದಿದು ಕೊರಳಡಿಗೆ ಸಿಲುಕಿರ್ದ ಸೆರೆಯಾಯಿತೊ ಹರುಷವಿಲ್ಲಿದರೊಳಗೆ ಬರುವ ಗತಿಯನು ಕಾಣೆ ದರುಶನಕೆ ಬಗೆದೋರು ದೊರೆ ವೆಂಕಟೇಶ 4 ಮಾತು ತಪ್ಪಿತು ಎಂದು ಭೀತಿಗಿಕ್ಕಲುಬೇಡ ಸೋತುದೈ ಕೈಯೆನಗತೀತ ಮಹಿಮ ಕಾತುರವು ಮನದೊಳಗೆ ಕಾಣಬೇಕೆಂದೆಂಬ ಪ್ರೀತಿಯಾಗಿದೆ ಜಗನ್ನಾಥ ನಿನ್ನೆಡೆಗೆ 5 ಒಂದು ಪರಿಯನು ನೀನು ತಂದು ತೋರಿದರೀಗ ಇಂದೆ ನಾನೇಳುವೆನು ಮಂದಿವಾಳದಲಿ ಚಂದದಲಿ ಮಡದಿ ಮಕ್ಕಳ ಸಹ ಕರಕೊಂಡು ಬಂದು ನೋಳ್ಪೆವು ನಿನ್ನ ಆನಂದ ಮೂರುತಿಯ 6 ಅಣಿಮಾಡಿ ನೀನೆನಗೆ ಮನದಣಿವ ತೆರನಂತೆ ಕ್ಷಣವಾದ ಕೆಲಸಗಳು ನಿನಗೆ ಘನವಲ್ಲ ತನಿರಸವನೆನಗೀಯೊ ಜನ ಮೆಚ್ಚುವಂತೆ 7
--------------
ವರಹತಿಮ್ಮಪ್ಪ
ನಿತ್ಯದಿತಿಜರು ಕಲಿಗೆ ದೂರುತಿಹರೋ ಸತ್ಯಧ್ಯಾನರ ಕಾಟ ತಾಳಲಾರೆವೊಯೆಂದು ಪ ನೀ ಕಲಿಸಿದಾಟವನು ತಾ ಕಳೆದು ಜನರ ಅಘನೂಕಿ ಜಗಸತ್ಯ ಶ್ರೀ ಹರಿಯು ಪರನು ಶ್ರೀಕಮಲಭವರೆಲ್ಲ ದಾಸರೆಂದರುಪಲು ತಾ ಕಲ್ಪಿಸಿದ ಪಾಠಶಾಲೆ ಸಭೆಗಳನೆಂದು 1 ಭೂಸುರರಿಗನ್ನ ಧನ ಭೂಷಣಗಳಿತ್ತು ಅಭ್ಯಾಸಗೈಸಿದ ಸಕಲ ವೇದಶಾಸ್ತ್ರ ಏಸು ವಿಧ ಯತ್ನಗಳು ನಾ ಮಾಡಿದರು ಜಯ ಲೇಸು ಕಾಣದೆ ನಿನ್ನ ಬಳಿಗೆ ಬಂದೆವು ಎಂದು 2 ಇಂತು ತಾ ಮಾಡಿದನು ಪಿಂತಿನಾಶ್ರಮದಿ ಈ ಗಂತು ನಮ್ಮವರಾದ ವದು ಮತ್ಸರಾ ಕಂತು ಕೋಪಾದಿಗಳಿಗಂತಕನು ಯನಿಸಿ ಮುನಿ ಸಂತತಿಪನಾಗಿರುವದೆಂತು ನೋಳ್ಪೆವು ಎಂದು 3 ತಾಪಸೋತ್ತಮ ಸತ್ಯದ್ಯಾನದಿಂ ಭೂತಳದಿ ಪಾಪ ಸರಿದಿತು ಪುಣ್ಯವೆಗ್ಗಳಿಸಿತು ಲೇಪಿಸದು ಖತಿಜನಕ ಇವರ ದಯದಿಂದೆಮ್ಮ ವ್ಯಾಪಾರ ಧರೆಯೊಳಗೆ ಭೂಪ ಇನ್ಯಾಕೆಂದು 4 ನಿರುತ ಸಿರಿಗೋವಿಂದ ವಿಠಲನ್ನ ಸೇವಿಸುತಾ ಪರಹಿಂಸೆ ಧನಯುವತಿ ದ್ಯೂತತೊರದಾ ವರಯತಿಯ ಮೋಹಿಸುವ ಶಕ್ತಿ ತನಗಿಲ್ಲೆಂದು ಅರುಹಿದನು ಭೃತ್ಯರಿಗೆ ಕಲಿ ಮನನೊಂದು 5
--------------
ಅಸ್ಕಿಹಾಳ ಗೋವಿಂದ
ಶ್ರೀ ಸತ್ಯಧ್ಯಾನರುನಿತ್ಯದಿತಿಜರು ಕಲಿಗೆ ದೂರುತಿಹರೋಸತ್ಯಧ್ಯಾನರ ಕಾಟ ತಾಳಲರೆವೊಯಂದು ಪನೀಕಲಿಸಿದಾಟವನು ತಾ ಕಳೆದು ಜನರ ಅಘನೂಕಿಜಗಸತ್ಯ ಶ್ರೀಹರಿಯು ಪರನುಶ್ರೀ ಕಮಲಭವರೆಲ್ಲ ದಾಸರೆಂದರು ಪಲುತಾ ಕಲ್ಪಿಸಿದ ಪಾಠಶಾಲೆ ಸಭೆಗಳನೆಂದು 1ಭೂಸೂರರಿಗನ್ನ ಧನ ಭೂಷಣಗಳಿತ್ತುಅಭ್ಯಾಸಗೈಸಿದ ಸಕಲ ವೇದಶಾಸ್ತ್ರವೀಸುವಿದ ಯತ್ನಗಳು ನಾ ಮಾಡಿದರು ಜಯಲೇಸುಕಾಣದೆ ನಿನ್ನ ಬಳಿಗೆ ಬಂದೆವು ಎಂದು 2ಇಂತು ತಾಮಾಡಿದನು ಪಿಂತಿನಾಶ್ರಮದಿಈಗಂತು ನಮ್ಮವರಾದ ವದುಮತ್ಸರಾಕಂತುಕೋಪಾದಿಗಳಿಗಂತಕನು ಯನಿಸಿಮುನಿ ಸಂತತಿಪನಾಗಿರುವದೆಂತು ನೋಳ್ಪೆವು ಎಂದು3ತಾಪಸೋತ್ತಮ ಸತ್ಯಧ್ಯಾನದಿಂ ಭೂತಳದಿಪಾಪ ಸರಿದಿತು ಪುಣ್ಯವೆಗ್ಗಳಿಸಿತುಲೇಪಿಸದು ಖತಿಜನಕ ಇವರ ದಯದಿಂದೆಮ್ಮವ್ಯಾಪಾರ ಧರೆಯೊಳಗೆ ಭೂಪ ಇನ್ಯಾಕೆಂದು 4ನಿರುತ ಸಿರಿಗೋವಿಂದ ವಿಠಲನ್ನ ಸೇವಿಸುತಾಪರಹಿಂಸೆ ಧನ ಯುವತಿ ದ್ಯೂತ ತೊರದಾವರಯತಿಯ ಮೋಹಿಸುವ ಶಕ್ತಿ ತನಗಿಲ್ಲೆಂದುಅರುಹಿದನು ಭೃತ್ಯರಿಗೆಕಲಿಮನನೊಂದು 5
--------------
ಸಿರಿಗೋವಿಂದವಿಠಲ