ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈ ತನುವಿನೊಳಗೆ ಅನುದಿನವಿದ್ದು ಎನಗೊಂದು ಮಾತ ಹೇಳದೆ ಹೋದಿ ಹಂಸ ಪ. ಜಾಳಂಧರಯೆಂಬೊ ಮಾಳಿಗೆ ಮನೆಯಲ್ಲಿ ನೋಳ್ಪರೆ ಒಂಬತ್ತು ಬಾಗಿಲು ಬೇರಿಗೆ ಹೇಳಿ ಹೋಯಿತೆ ಒಂದು ಮಾತ 1 ಏರಿಯು ನೀರನು ತೆಗೆದುಕೊಂಡಿದ್ದೇನೊ ಭೋರೆಂಬೋ ಮಳೆ ಹೊಯ್ದು ಭೋರೆಂಬೊ ಮಳೆ ಹೊಯ್ದು ಬಣವೆದ್ದು ಹೋಗುವಾಗ ಈ ಏರಿಗೆ ಹೇಳಿಹೋಯಿತೆ ಒಂದು ಮಾತ 2 ಗಟ್ಟಿ ಬೆಟ್ಟಗಳಲ್ಲಿ ಅಟ್ಟಡವಿಯಲ್ಲಿ ಇಕ್ಕಿತ್ತು ಇಟ್ಟಿತ್ತು ಜೇನು ತನ್ನ ಸುಖಕಾಗಿ [ಇಟ್ಟ]ತುಪ್ಪವನುಂಡು ನೊಣ ಹಾರಿಹೋಗುವಾಗ ಈ ಬೆಟ್ಟಿಗೆ ಹೇಳಿ ಹೋಯಿತೆ ಒಂದು ಮಾತ 3 ಹೆಸರು ಹೇಳುವೆ ನಾನನುದಿನವು ರಸಭೋಜನವವುಂಡು ಜೋತಿತಾಹೋಗುವಾಗ ಪ್ರಣತಿಗೆ ಹೇಳಿ ಹೋಯಿತೆ ಒಂದು ಮಾತ 4 ಸಪರ್Àಶಯನ ಹಯವದನನಾಡಿದ ಮಾತು ಪಣೆ ಲಕ್ಷ್ಯವ ತೊಡೆದು ಮ್ಯಾಲಿರಲಾಗಿ ಸುಪ್ಪಾಣಿಮುತ್ತು ಬಾಯ್ಬಿಟ್ಟು ಹೋಗುವಾಗ ಈ ಚಿಪ್ಪಿಗೆÀ ಹೇಳಿ ಹೋಯಿತೆ ಒಂದು ಮಾತ 5
--------------
ವಾದಿರಾಜ
ಶ್ರೀ ಮಾರುತಾತ್ಮ ಸಂಭೂತ ಹನುಮ ಭೀಮ ಮಧ್ವಾಖ್ಯ ಯತಿನಾಥ | ಮೂಲ ರಾಮಕೃಷ್ಣಾರ್ಪಿತ ಸುಚೇತಾ | ಮಮ ಸ್ವಾಮಿ ಚಿತ್ತೈಸೆನ್ನ ಮಾತಾ 1 ಅಂಜನಾದೇವಿ ಸುಕುಮಾರ |ಎಮ್ಮ ನಂಜಿಸುವ ಘೋರ ಸಂಸಾರ |ಹೇ ಪ್ರ ನಿಗಮ ಸಂಚಾರ | ಕ್ಲೇಶ ಭಂಜಿಸಿ ಸಲಹೋ ಗುಣೋದಾರ 2 ಕುಂತಿ ಜಠರದಲುದಿಸೆ ಬಂದೆ | ಮಾ ಹೊಂತ ಕೌರವರ ನೀ ಕೊಂದೆ | ಅನಾ ದ್ಯಂತ ಕಾಲದಿ ಎಮ್ಮ ತಂದೆ | ನೀನೆ ಸಂತೈಸಬೇಕೆಂದು ನಿಂದೆ 3 ಮಧ್ಯ ಗೇಹಾಖ್ಯ ದ್ವಿಜಸದನ | ದೊಳಗೆ ಉದ್ಭವಿಸಿ ಮೆರೆದೆ ಜಿತಮದನ | ಧರ್ಮ ಪದ್ಧತಿಗಳ ಪ್ರಸನ್ನವದನಾ | ತಿಳಿಸಿ ಉದ್ಧರಿಸೋ ದನುಜಕುಲ ನಿಧನ4 ಶ್ರೀ ಪೂರ್ಣಬೋಧ ಯತಿರಾಯ | ಎಮ್ಮ ತಾಪತ್ರಯಗಳಿಂದ ನೋಯ | ಗೊಡದೆ ನಿಕಾಯ | ಕೃಷ್ಣ ದ್ವೈಪಾಯನಗೆ ನೀನೆ ಪ್ರೀಯ 5 ಬದರಿಕಾಶ್ರಮಕೆ ನೀ ಪೋಗಿ | ಲಕ್ಷ್ಮೀ ಹೃದಯ ವಾಸನ ಪದಕೆ ಬಾಗಿ | ಭಾಷ್ಯ ಮುದದಿಂದ ಪೇಳ್ದೆ ಚೆನ್ನಾಗಿ | ಎನಗೆ ಅದರ ಭಾವವ ತಿಳಿಸೋ ಯೋಗಿ6 ತಾಪ ಭಾರ ತೀರಮಣ ಮಹಪಾಪ ವೆಣಿಸಿ ದೂರ ನೋಳ್ಪರೆ ಸುಪ್ರತಾಪ ಪರಮ ಕಾರುಣಿಕ ತೋರೋ ತವರೂಪ 7 ಭಕ್ತರಿಗೊಲಿದು ಭವದಿಂದ ನೀ ಮುಕ್ತರನÀ ಮಾಡು ದಯದಿಂದ ನೀನೆ ಶಕ್ತನಹುದೆಂದು ವೇದವೃಂದದೊಳಗೆ ಉಕ್ತವಾಗಿದೆ ನಿಮ್ಮಾನಂದಾ8 ಜೀವಕೋಟಿಯೊಳು ನೀನೆ ಪಿರಿಯ ಎಮ್ಮ ನೋವು ಸುಖಗಳನು ನೀನೆ ಅರಿಯ ಈಗ ನೀವೊಲಿಯದಿರೆ ಹರಿ ನಮ್ಮ ಪೊರೆಯಾ ಜಗವ ಕಾಯ್ವ ಗುರುವರ ನೀನೆ ಖರೆಯ 9 ಶ್ರೀ ಜಗನ್ನಾಥ ವಿಠ್ಠಲಯ್ಯ ನಂಘ್ರಿ ಪೂಜಿಸುವ ಸಜ್ಜನರ ಕೈಯಾ ಪಿಡಿದು ನೀ ಜೋಕೆ ಮಾಡುವುದು ಜೀಯಾ ನೀನೆ ಈ ಜಗತ್ರಯ [ಕೆ] ಗುರುವರ್ಯಾ 10
--------------
ಜಗನ್ನಾಥದಾಸರು
ಶ್ರೀನಿವಾಸ-ಶ್ರೀನಿವಾಸ-ದೀನರಕ್ಷಕ ದಾನಿ ನೀನೆಂದು ನಂಬಿದೆ ಪ ಜ್ಞಾನಗಮ್ಯನೆ ವಾಙ್ಮನೋಮಯ ಮಾನಿ ಮಾನಸರಾಜಹಂಸ ಅ.ಪ ಲೋಕಭರಿತ ಶ್ರೀಕಳತ್ರ-ತ್ರಿಕಕುದ್ಧಾಮದಧಿನಾಥ ಶ್ರೀಕಮಲಭವಾದಿವಂದಿತ ಮುಕುತಾಮುಕುತಜನ ಸಂಸೇವಿತ ಅಖಿಳಾಗಮಕೆ ಅತೀತ-ಶ್ರೀಕರಪಲ್ಲವಪೂಜಿತ ಅಖಿಳಾಜಾಂಡದಿ ವ್ಯಾಪ್ತ-ಭಕುತರಗತಿಯಪ್ರದಾತ1 ನಿಗಮವಿತ್ತೆ ನಗವಪೊತ್ತೆ ಬಗೆದು ಬೇರ ನರ- ಮೃಗಾಂಗನೇ ತ್ಯಾಗಿಯೊಳು ಪೋಗಿ ನೃಪರ ನೀಗಿಸಿ ವನವನವಾ ಚರಿಸಿದೆ ಬಗೆಬಗೆ ಆಟದಿ ಬಾಲ್ಯದಿ ಹಗೆಗಳ ಮಡುಹಿದೆ ಕಾರ್ಯದಿ ಆಗಮಕರ್ಥಮೋಹಿಸಿ-ಜಗದೊಳುತುರಗವನೇರ್ದೆ 2 ಅಂತರಾತ್ಮಪರಮಾತ್ಮ ಅನಂತಾನಂತರೂಪಾತ್ಮ ಪ್ರಾಂತಕಾಣದೇ ನಿರಂತರದಿ ನಿಂತು ಸಿರಿ ನಿತ್ಯಮುಕ್ತಳಾದಳೋ ಕಂತುಪಿತ ಎನ್ನಂತರದಿ ನಿಂತಿಹೆ ನಿರಂತರದಿ ಕಾಂತ ಶ್ರೀ ವೆಂಕಟೇಶನೆ-ಅಂತರ್ಬಹಿರದಿ ನಿಂತಿಹ ಪ್ರಭೊ 3 ಅಪ್ರಮೇಯ ಸ್ವಪ್ರಕಾಶ ಅಪ್ರಾಕೃತಗುಣಗಣಾರ್ಣವ ಸ್ವಪ್ರಯೋಜನರಹಿತ ಸತತ ತ್ವತ್ಪ್ರಸಾದದಿಂದ ಜಗವು ಕ್ಷಿಪ್ರದಿ ನೃಪಸಂಸ್ತುತಿಸೆ ವಿಪ್ರನಮನ ಸಂತೈಸಿದೆ ಅಪ್ರತಿಹತಮಹಿಮನು ಸುಪ್ರೀತನು ಜನರ್ಗೆ 4 ಪರಮ ಪುರುಷ ಪೂರ್ಣಾನಂದ ಪರಮಕರುಣಶರಧಿಯೆ ಉರಗಾದ್ರಿವಾಸ ವಿಠ್ಠಲ ಕರಾವಲಂಬನವಿತ್ತು ಸಲಹೆಲೋ ಪರಿಪರಿ ಎನ್ನಪರಾಧ ನೋಳ್ಪರೆ ಭೋ ಜಗದೊಡೆಯ ಕರುಣವು ತೋರದೆ ನೀನಿರೆ ನರಪಶು ನಾನೆಂತು ಬಾಳ್ವೆನೋ5
--------------
ಉರಗಾದ್ರಿವಾಸವಿಠಲದಾಸರು