ದಾಸಿಯಾಗುವೆನೇ ಗುರುವಿನ ಮನೆಯಾ | ನಿ |
ರ್ದೋಷ ಪದವಿ ಈವ ನಿಜ ದೊರೆಯಾ ಪ
ಮನೋಮಂಟಪದೊಳಗೆ ಅನುಮಾನ ಕಸನೀಗಿ |
ಅನುದಿನ ನಿಶ್ಚಲದ ತಳಿಯಾ ಬಿಂಬಿಸಿ |
ಮುನಿಯ ಸೇವೆ ಹಾರೈಸುವೆ ಬಿನಗು ಶಬ್ದಜ್ಞಾನಿಗಳ |
ಮನಿಲಿ ನಿಂತು ಹೊತ್ತಂಗಳಿಯೆ ನೆನವಿಲಿರುತಾ 1
ತುಂಬಿ |
ಸಾವಧಾನ ಸಿಂಬಿಲಿರಿಸಿಕೊಂಡು ಬರುತಾ |
ದೇವ ಗುರುರಾಯ ನಡಿದಾವರೆಯ ಊಳಿಗಕ |
ಆವಾಗ ತಂದೆರೆವೆನು ಹರುಷದಲಿ 2
ಅರಹು ಎಂಬ ಸೀರೆಯುಟ್ಟು ಕುರುಹುವೆಂಬ ಕುಪ್ಪಸದಲಿ |
ಬೋಧ ಪಡಿಯದನ್ನ ಉಣುತಾ |
ವರದ ತಂದೆ ಮಹಿಪತಿ ಚರಣವ ನೋಲೈಸಿ ಇಹಪರ |
ವೆರಡು ಗೆಲಿದು ನಿಜಗತಿ ಪಡೆವೆನೋ 3