ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಯಬೇಕೆನ್ನ ಲಕುಮಿ | ಕಮಲಾಯತಾಕ್ಷಿ ಕಾಯಬೇಕೆನ್ನ ಲಕುಮಿ ಪ. ಕಾಯಬೇಕೆನ್ನ ನೋಯುವೆ ಭವದಲಿ ಕಾಯಜಪಿತನನು ಕಾಯದಿ ತೋರಿ ಅ.ಪ. ಕ್ಷೀರವಾರಿಧಿ ತನಯೆ | ಶ್ರೀ ಹರಿಯ ಜಾಯೆ ಪಾರುಗಾಣಿಸೆ ಜನನಿಯೆ ತೋರೆ ನಿನ್ನ ಪತಿಯ ಪಾದವ ಮನದೊಳು ಸೇರಿಸೆ ಸುಜನರ ಸಂಗದೊಳೀಗ1 ಮುಕ್ತಿದಾಯಕಿ ಸಿರಿಯೆ | ನೀ ಎನ್ನ ಕಾಯೆ ಮುಕ್ತಿಮಾರ್ಗವ ನೀನೀಯೆ ಶಕ್ತಿರೂಪೆ ನಿನ್ನ ಭಕ್ತಿಲಿ ಭಜಿಸುವೆ ಮುಕ್ತರೊಡೆಯನೊಳು ಭಕ್ತಿಯ ನೀಡೆ 2 ಅಷ್ಟಭುಜದ ಶಕ್ತಿಯೆ | ಶ್ರೀ ಭೂಮಿ ದುರ್ಗೆ ಅಷ್ಟ ಐಶ್ವರ್ಯದಾಯಿನಿಯೆ ಶ್ರೇಷ್ಠ ಶ್ರೀಗೋಪಾಲಕೃಷ್ಣವಿಠ್ಠಲನೊಳು ಪಟ್ಟವಾಳ್ವೆ ಜಗಸೃಷ್ಟಿ ಪ್ರಳಯದಿ 3
--------------
ಅಂಬಾಬಾಯಿ
ವಾಯು ದೇವರು - ಹನುಮಂತ ಭವ ಪ ದಂಜಿಕೆ ಬಿಡಿಸು ಬೇಗ ಸಂಜೀವರಾಯನೆ ಅ.ಪ. ನೋಯುವೆ ನಾ ಸಂಸಾರದೊಳ್ ಕೈಯಪಿಡಿದೆತ್ತುವರಾರೈ 1 ಗುರುವರೇಣ್ಯ ತವ ಪಾದಪಂ ನೆರಲಿನೊಳಗಿಟ್ಟುಯನ್ನನು 2 ಕ್ಷೇಮದಾತನೇ ಶ್ರೀ ಗುರು ಭೂಮಿಜಾಶೋಕನಾಶನ 3
--------------
ಗುರುರಾಮವಿಠಲ
ಹನುಮರಾಯ ಎನ್ನ ದುರಿತದಾರಿದ್ರ್ಯವ ಪರಿಹರಿಸಿ ಸಲಹೋ ಹನುಮರಾಯ ಪ ದಿನದಿನ ಘನಘನ ತನುವಿನರೋಗವು ಹನುಮರಾಯ ಇನ್ನು ಘನವಾಯ್ತು ಕನಿಕರದಿಂದ ಕಡೆಹಾಯ್ಸಯ್ಯ ಹನುಮರಾಯ ಕ್ಷಣಸುಖವಿಲ್ಲದೆ ಅನುಪಮ ನೋಯುವೆ ಹನುಮರಾಯ ಹನುಮರಾಯ1 ಕಿರಿಕಿರಿಸಂಸಾರ ಪರಿಪರಿಬಾಧೆಯು ಹನುಮರಾಯ ಬೇಗ ಪರಿ ಬಾಧ್ಯಾಕೊ ಹನುಮರಾಯ ಇನ್ನು ಮರವೆಹರಿಸಿ ನಿಜಅರಿವು ಕರುಣಿಸಿ ಕಾಯೊ ಹನುಮರಾಯ 2 ಸ್ವಾಮಿ ಶ್ರೀರಾಮನ ಪ್ರೇಮದದೂತನೆ ಹನುವiರಾಯ ದೇವ ಪಾದ ಭಜಿಸುವೆನಯ್ಯ ಹನುಮರಾಯ ಈ ಮಹಕಷ್ಟದಿ ಕ್ಷೇಮ ಪಾಲಿಸಯ್ಯ ಹನುಮರಾಯ ನಿನ್ನ ಪ್ರೇಮದಿರಿಸಿ ಎನ್ನ ಮುಕ್ತಿಗ್ಯೋಗ್ಯನ ಮಾಡೊ ಹನುಮರಾಯ 3
--------------
ರಾಮದಾಸರು
ಯಾರೆನ್ನ ಕಾಯುವರು | ಶ್ರೀಹರಿಯೆ |ಹರಿಯೇ | ನೀ ದೂರ ಮಾಡುವರೇ ಪಘೋರಪಾತಕವೆಂಬೀ | ಶಾರೀರವನು ಪೊತ್ತು |ಪಾರಗಾಣದ ದುಃಖಕರ್ಹನಾದೆನು ಹರಿಯೆ 1ಜೀವದಂತ್ಯದಿ ಯಮನೀವ ಪಾಶವ ಕಡಿದುಕಾಯುವರಿಲ್ಲ | ದಯಾಕರ ಮೂರುತಿ 2ಕಾಸು ಕನಕವಿರಲಾಸೆ ಮಾಡುವರೆಲ್ಲ |ದೇಶ ಬಿಕ್ಷುಕನಾದ | ರೀಸು ಮೆಚ್ಚುವರಿಲ್ಲ 3ಬಂಧು ಬಳಗವೆಂಬುದೊಂದು | ಸಂಸಾರದಿ |ಬಂದು ನೋಯುವೆನು | ಗೋವಿಂದ ನೀನಲ್ಲದೆ 4
--------------
ಗೋವಿಂದದಾಸ