ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಲಗೆಲೊ ಗೋಪಾಲ ಎನ್ನಯ ಕರವು ನೋಯುತಿಹುದೊ ಶ್ರೀ ಕೃಷ್ಣ ಪ ತಿರುಗಿ ತಿರುಗಿ ವನದಿ ನಿನ್ನಯ ಪದವು ನೋಯುತಿಹುದೇ ಶ್ರೀ ಕೃಷ್ಣ ಅ.ಪ ದುಷ್ಟ ಪೂತನಿ ವಿಷದಿ ನಿನ್ನಯ ಹೊಟ್ಟೆ ನೋಯುತಿಹುದೇ ಶ್ರೀ ಕೃಷ್ಣ ದಿಟ್ಟ ಆ ನಾರಿಯರ ಕ್ರೂರದ ದೃಷ್ಟಿ ತಾಕಿತೇನೋ ಶ್ರೀ ಕೃಷ್ಣ 1 ಮುರಳಿಯ ಬಾರಿಸಿದ ನಿನ್ನಯ ಬೆರಳು ನೋಯುತಿಹುದೇ ಶ್ರೀ ಕೃಷ್ಣ ಒರಳು ಬಲದಿ ಎಳೆದ ನಿನ್ನಯ ಕರಳು ಹಿಡಿಯತೇನೋ ಶ್ರೀ ಕೃಷ್ಣ 2 ನಿನ್ನ ಕೊರತೆಗಳನು ಬೇಗನೆ ಎನ್ನ ಮನಕೆ ತಿಳಿಸೋ ಶ್ರೀ ಕೃಷ್ಣ ಚಿನ್ನ ನಿದ್ರೆ ಬರಲು ಮನದಿ ಪ್ರ ಸನ್ನ ಹರಿಯ ನೆನೆಯೋ ಶ್ರೀ ಕೃಷ್ಣ 3
--------------
ವಿದ್ಯಾಪ್ರಸನ್ನತೀರ್ಥರು