ಮಲಗೆಲೊ ಗೋಪಾಲ ಎನ್ನಯ
ಕರವು ನೋಯುತಿಹುದೊ ಶ್ರೀ ಕೃಷ್ಣ ಪ
ತಿರುಗಿ ತಿರುಗಿ ವನದಿ ನಿನ್ನಯ
ಪದವು ನೋಯುತಿಹುದೇ ಶ್ರೀ ಕೃಷ್ಣ ಅ.ಪ
ದುಷ್ಟ ಪೂತನಿ ವಿಷದಿ ನಿನ್ನಯ
ಹೊಟ್ಟೆ ನೋಯುತಿಹುದೇ ಶ್ರೀ ಕೃಷ್ಣ
ದಿಟ್ಟ ಆ ನಾರಿಯರ ಕ್ರೂರದ
ದೃಷ್ಟಿ ತಾಕಿತೇನೋ ಶ್ರೀ ಕೃಷ್ಣ 1
ಮುರಳಿಯ ಬಾರಿಸಿದ ನಿನ್ನಯ
ಬೆರಳು ನೋಯುತಿಹುದೇ ಶ್ರೀ ಕೃಷ್ಣ
ಒರಳು ಬಲದಿ ಎಳೆದ ನಿನ್ನಯ
ಕರಳು ಹಿಡಿಯತೇನೋ ಶ್ರೀ ಕೃಷ್ಣ 2
ನಿನ್ನ ಕೊರತೆಗಳನು ಬೇಗನೆ
ಎನ್ನ ಮನಕೆ ತಿಳಿಸೋ ಶ್ರೀ ಕೃಷ್ಣ
ಚಿನ್ನ ನಿದ್ರೆ ಬರಲು ಮನದಿ ಪ್ರ
ಸನ್ನ ಹರಿಯ ನೆನೆಯೋ ಶ್ರೀ ಕೃಷ್ಣ 3